ವೇಗಿ ಮೊಹಮ್ಮದ್ ಶಮಿಗೆ ಪಿತೃ ವಿಯೋಗ

Posted By:
Subscribe to Oneindia Kannada

ಕಾನ್ಪುರ್, ಜನವರಿ 27: ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರ ತಂದೆ ತೌಸಿಫ್ ಅಲಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕಾನ್ಪುರದಲ್ಲಿ ತಂಡದ ಜತೆ ಇದ್ದ ಶಮಿ ಅವರು ತಕ್ಷಣವೇ ಅಮ್ರೊಹಾಗೆ ತೆರಳಿದ್ದಾರೆ.

ಮೊಣಗಾಲಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರ ನಡೆದಿದ್ದ ಶಮಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದರು. ಕಾನ್ಪುರದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲುವುದನ್ನು ಕಂಡಿದ್ದ ಶಮಿಗೆ ತಡರಾತ್ರಿ ಈ ಕಹಿಸುದ್ದಿ ಸಿಕ್ಕಿದೆ.

India paceman Mohammed Shami's father passes away

ಜನವರಿ 5 ರಂದು ಆಸ್ಪತ್ರೆ ಸೇರಿದ್ದ ಶಮಿ ಅವರ ತಂದೆ ತೌಸಿಫ್ ಅವರಿಗೆ ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾಗಿದೆ. ಶುಕ್ರವಾರ ಬೆಳಗ್ಗೆ ಟೀಂ ಇಂಡಿಯಾದ ಉಳಿದ ಸದಸ್ಯರು ನಾಗ್ಪುರ್ ಗೆ ತೆರಳಿದ್ದು, ಜನವರಿ 29ರಂದು ಎರಡನೇ ಟಿ20 ಪಂದ್ಯವಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Shami's father passes away
English summary
Indian fast bowler Mohammed Shami's father Tousif Ali has passed away after suffering a heart attack, forcing the cricketer to leave his rehab with the T20 team and rush to Amroha from here.
Please Wait while comments are loading...