ಜಮೈಕಾ ಟೆಸ್ಟ್ : ಗಾಯಾಳು ವಿಜಯ್ ಆಡುತ್ತಿಲ್ಲ, ರಾಹುಲ್ ಗೆ ಚಾನ್ಸ್?

Posted By:
Subscribe to Oneindia Kannada

ಕಿಂಗ್ಸ್ ಟನ್ (ಜಮೈಕಾ), ಜುಲೈ 30: ವೆಸ್ಟ್ ಇಂಡೀಸ್ ವಿರುದ್ಧ ಶನಿವಾರ(ಜುಲೈ 30) ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಆಟಗಾರ ಮುರಳಿ ವಿಜಯ್ ಅಲಭ್ಯರಾಗಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಹೆಬ್ಬರಳಿಗೆ ಗಾಯ ಮಾಡಿಕೊಂಡಿರುವ ಮುರಳಿ ವಿಜಯ್ ಅವರು ಜಮೈಕಾ ಟೆಸ್ಟ್ ಗೆ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. [ಜಮೈಕಾದಲ್ಲಿ ಟೀಂ ಇಂಡಿಯಾ ಕಸರತ್ತು]

India opener Murali Vijay ruled out of 2nd Test

32 ವರ್ಷ ವಯಸ್ಸಿನ ವಿಜಯ್ ಅವರು ಅಂಟಿಗ್ವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 7ರನ್ ಗಳಿಸಿ ಔಟಾಗಿದ್ದರು. ಔಟಾದ ಸಂದರ್ಭದಲ್ಲಿ ಹೆಬ್ಬರಳಿಗೆ ಚೆಂಡು ಬಡಿದು ಗಾಯವಾಗಿತ್ತು. ಈಗ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಜೊತೆಗೆ ಬಲಗೈ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು ಸಬೀನಾ ಪಾರ್ಕಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮುರಳಿ ವಿಜಯ್ ಅವರು 38 ಟೆಸ್ಟ್ ಪಂದ್ಯಗಳಿಂದ 40.56ರನ್ ಸರಾಸರಿಯಂತೆ 2,637ರನ್ ಕಲೆ ಹಾಕಿದ್ದಾರೆ. ಇದರಲ್ಲಿ 6 ಶತಕ, 12 ಅರ್ಧಶತಕಗಳಿವೆ.

ಆಂಟಿಗ್ವಾ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 92ರನ್ ಗಳಿಂದ ಜಯ ಗಳಿಸಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian opener Murali Vijay has been ruled out of the 2nd Test against West Indies. KL Rahul is likely to replace him in the match which starts today (July 30).
Please Wait while comments are loading...