ಇನ್ನೊಂದು ಟೆಸ್ಟ್ ಪಂದ್ಯ ಗೆದ್ದರೆ ಟೀಂ ಇಂಡಿಯಾ ನಂ1!

Written By: Ramesh
Subscribe to Oneindia Kannada

ಬೆಂಗಳೂರು, ಸೆ. 27 : ನ್ಯೂಜಿಲೆಂಡ್ ವಿರುದ್ಧ 500ನೇ ಟೆಸ್ಟ್ ಪಂದ್ಯವನ್ನು ಗೆದ್ದು ಆತ್ಮ ವಿಶ್ವಾದಲ್ಲಿರುವ ಟೀಂ ಇಂಡಿಯಾ, ಇನ್ನೊಂದು ಪಂದ್ಯದಲ್ಲಿ ಗೆದ್ದು ಅಂತರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವ ತವಕದಲ್ಲಿದೆ.

ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೊನೆಯ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಗೊಂಡ ಪರಿಣಾಮ 2ನೇ ಸ್ಥಾನಕ್ಕೆ ಕುಸಿದಿತ್ತು. ಈಗ ಮತ್ತೊಮ್ಮೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಟೀಂ ಇಂಡಿಯಾಗೆ ಅವಕಾಶ ಒದಗಿಬಂದಿದ್ದು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯ ಸೆ.30 ರಂದು ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

India

ಈ ಪಂದ್ಯದಲ್ಲಿ ಬಾರತ ಜಯಗಳಿಸಿದರೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಪ್ರಸ್ತುತ ಪಾಕಿಸ್ತಾನ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ 111 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ 110 ಅಂಕಗಳನ್ನು ಪಡೆದು ಕೇವಲ ಒಂದು ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ :
1.ಪಾಕಿಸ್ತಾನ-111
2.ಭಾರತ-110
3. ಆಸ್ಟ್ರೇಲಿಯಾ -108
4. ಇಂಗ್ಲೆಂಡ್ -108
5. ದಕ್ಷಿಣ ಆಫ್ರಿಕಾ -96
6. ಶ್ರೀಲಂಕಾ-95
7. ನ್ಯೂಜಿಲೆಂಡ್ -95
8. ವೆಸ್ಟ್ ಇಂಡೀಸ್- 67
9. ಬಾಂಗ್ಲಾದೇಶ -57
10. ಜಿಂಬಾಬ್ವೆ -8

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India are one victory away from reclaiming the top Test rank from arch rivals Pakistan. The Virat Kohli-led side can become number one again in the International Cricket Council (ICC) Test Team Rankings with a win in the 2nd Test against New Zealand in Kolkata.
Please Wait while comments are loading...