ಭಾರತ- ಕಿವೀಸ್ ಟೆಸ್ಟ್ ಸರಣಿ, ಯಾವ ದಾಖಲೆಗಳು ಧ್ವಂಸವಾಗಲಿವೆ?

Posted By:
Subscribe to Oneindia Kannada

ಬೆಂಗಳೂರು, ಸೆ. 14: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸಜ್ಜಾಗುತ್ತಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಯುವ ನ್ಯೂಜಿಲೆಂಡ್ ತಂಡ ಭಾರತಕ್ಕೆ ಬಂದಿಳಿದಿದೆ. ಈ ಟೆಸ್ಟ್ ಸರಣಿಯಲ್ಲಿ ಅನೇಕ ದಾಖಲೆಗಳು ಧೂಳಿಪಟವಾಗಲು ಕಾಯುತ್ತಿವೆ.

ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ || ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ

ಸೆ.22 ರಿಂದ ಅಕ್ಟೋಬರ್ 12 ರ ವರೆಗೆ ಮೂರು ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ನಂತರ ಅಕ್ಟೋಬರ್ 19 ರಿಂದ ಅ.29 ರ ವರೆಗೆ 5 ಏಕದಿನ ಪಂದ್ಯಗಳನ್ನು ಭಾರತ ವಿರುದ್ಧ ಆಡಲಿದೆ. ಸೆಪ್ಟೆಂಬರ್ 22ರಂದು ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ಇತ್ತೀಚಿಗೆ ಜಿಂಬಾಬ್ವೆ ವಿರುದ್ಧ ನಡೆದ ಸರಣಿಯಲ್ಲಿ ಕಿವೀಸ್ ತಂಡ ಉತ್ತಮ ಪ್ರದರ್ಶನ ನೀಡಿತ್ತು. ನಾಯಕ ವಿಲಿಯಮ್ಸನ್, ರಾಸ್ ಟೆಲರ್,ಲಾಥಮ್ ಅವರು ಶತಕ ಬಾರಿಸಿ ಭರ್ಜರಿ ಆಟವಾಡಿ ಸರಣಿ ಗೆಲುವಿಗೆ ಕಾರಣರಾಗಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಕೆಎಲ್ ರಾಹುಲ್, ಆರ್ ಅಶ್ವಿನ್, ವೃದ್ಧಿಮಾನ್ ಸಹಾ, ಮಹಮ್ಮದ್ ಶಮಿ ಉತ್ತಮ ಆಟವಾಡಿ ಒಳ್ಳೆ ಲಯದಲ್ಲಿದ್ದಾರೆ. ಯಾರು ಯಾರು ಯಾವ ಯಾವ ದಾಖಲೆ ಮುರಿಯಬಹುದು ಮುಂದೆ ಓದಿ...

ಆರ್ ಅಶ್ವಿನ್ ಗೆ 200 ವಿಕೆಟ್ ಕಬಳಿಸುವ ಗುರಿ

ಆರ್ ಅಶ್ವಿನ್ ಗೆ 200 ವಿಕೆಟ್ ಕಬಳಿಸುವ ಗುರಿ

ಅತ್ಯಂತ ತ್ವರಿತಗತಿಯಿಂದ ಟೆಸ್ಟ್ ವೃತ್ತಿ ಬದುಕಿನಲ್ಲಿ 200 ವಿಕೆಟ್ ಪಡೆಯುವ ಏಷ್ಯಾದ ಬೌಲರ್ ಎನಿಸಿಕೊಳ್ಳಲು ಆರ್ ಅಶ್ವಿನ್ ಸಜ್ಜಾಗಿದ್ದಾರೆ. 36 ಟೆಸ್ಟ್ ಗಳಲ್ಲಿ 200 ವಿಕೆಟ್ ಪಡೆದ ಆಸೀಸ್ ಲೆಗ್ ಸ್ಪಿನ್ನರ್ ದಾಖಲೆ ಮುರಿಯಲು ವಿಂಡೀಸ್ ಸರಣಿಯಲ್ಲಿ ಸಾಧ್ಯವಾಗಿರಲಿಲ್ಲ. ಅಶ್ವಿನ್ ಸದ್ಯಕ್ಕೆ 193 ವಿಕೆಟ್ ಪಡೆದುಕೊಂಡಿದ್ದಾರೆ. ವಖಾರ್ ಯೂನಿಸ್ 38 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ವಿಲಿಯಮ್ಸನ್- ಟೇಲರ್ ಗೆ ಹೆಚ್ಚು ಶತಕದ ಗುರಿ

ವಿಲಿಯಮ್ಸನ್- ಟೇಲರ್ ಗೆ ಹೆಚ್ಚು ಶತಕದ ಗುರಿ

ಕಿವೀಸ್ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ 17 ಬಾರಿಸಿರುವ ಮಾರ್ಟಿನ್ ಕ್ರೋವ್ ದಾಖಲೆ ಮುರಿಯಲು ಕೇನ್ ವಿಲಿಯಮ್ಸನ್ ಸಿದ್ಧರಾಗಿದ್ದಾರೆ. ಕೇನ್ 16 ಶತಕ ಬಾರಿಸಿದ್ದರೆ, ರಾಸ್ ಟೇಲರ್ 15 ಶತಕ ಬಾರಿಸಿದ್ದಾರೆ. ಇಬ್ಬರಿಗೂ ಈ ದಾಖಲೆ ಮುರಿಯುವ ಎಲ್ಲಾ ಅವಕಾಶಗಳಿವೆ.

ಕಿವೀಸ್ ಗೆ ಭಾರತದಲ್ಲಿ ಟೆಸ್ಟ್ ಸರಣಿಗೆ ಗೆಲುವಿನ ಗುರಿ

ಕಿವೀಸ್ ಗೆ ಭಾರತದಲ್ಲಿ ಟೆಸ್ಟ್ ಸರಣಿಗೆ ಗೆಲುವಿನ ಗುರಿ

1955ರಿಂದ ಇಲ್ಲಿ ತನಕ ನ್ಯೂಜಿಲೆಂಡ್ ತಂಡ 10 ಬಾರಿ ಭಾರತದ ಪ್ರವಾಸ ಕೈಗೊಂಡಿದೆ. ಆದರೆ, ಸರಣಿ ಜಯ ದಾಖಲಿಸಲು ಸಾಧ್ಯವಾಗಿಲ್ಲ. ಎರಡು ಬಾರಿ ಟೆಸ್ಟ್ ಸರಣಿ ಡ್ರಾ ಆಗಿದೆ. ಈ ಬಾರಿ 26ವರ್ಷ ವಯಸ್ಸಿನ ಕೇನ್ ವಿಲಿಯಮ್ಸನ್ ಅವರ ನೇತೃತ್ವದ ತಂಡ ಈ ಸಾಧನೆ ಮಾಡಲು ಸಿದ್ಧತೆ ನಡೆಸಿದೆ.

ಕೊಹ್ಲಿಗೆ ಸತತ ಮೂರನೇ ಟೆಸ್ಟ್ ಸರಣಿ ಗೆಲ್ಲುವ ಕನಸು

ಕೊಹ್ಲಿಗೆ ಸತತ ಮೂರನೇ ಟೆಸ್ಟ್ ಸರಣಿ ಗೆಲ್ಲುವ ಕನಸು

ಟೆಸ್ಟ್ ತಂಡದ ನಾಯಕರಾದ ಮೇಲೆ ಅಜಿತ್ ವಾಡೇಕರ್, ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ ಅವರು ಸತತ ಮೂರು ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಈಗ ಶ್ರೀಲಂಕಾ (2-1), ದಕ್ಷಿಣ ಆಫ್ರಿಕಾ (2-0) ಹಾಗೂ ವೆಸ್ಟ್ ಇಂಡೀಸ್ ಸರಣಿ(2-0) ಗೆದ್ದು ದಿಗ್ಗಜರ ಸಮಕ್ಕೆ ನಿಂತಿದ್ದಾರೆ. ಈಗ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದರೆ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಭಾರತಕ್ಕೆ ಕಿವೀಸ್ ವಿರುದ್ದ ಕ್ಲೀನ್ ಸ್ವೀಪ್ ಮಾಡುವ ಗುರಿ

ಭಾರತಕ್ಕೆ ಕಿವೀಸ್ ವಿರುದ್ದ ಕ್ಲೀನ್ ಸ್ವೀಪ್ ಮಾಡುವ ಗುರಿ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿ ತನಕ ದೊಡ್ಡ ಮಟ್ಟದಲ್ಲಿ ಭಾರತಕ್ಕೆ ಸರಣಿ ಜಯ ಸಿಕ್ಕಿಲ್ಲ. 1968ರಲ್ಲಿ ನವಾಬ್ ಪಟೌಡಿ ನೇತೃತ್ವದ ಭಾರತ ತಂಡ 3-1 ಅಂತರದಲ್ಲಿ ಸರಣಿ ಗೆದ್ದಿತ್ತು. ಆದರೆ, ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಅಥವಾ ಸರಣಿ ಕ್ಲೀನ್ ಸ್ವೀಪ್ ಸಾಧ್ಯವಾಗಿಲ್ಲ. ಸರಣಿ ವಾಟ್ ವಾಶ್ ಆದರೆ, ಕೊಹ್ಲಿ ಹಾಗೂ ಭಾರತ ಹೊಸ ದಾಖಲೆ ಬರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As India and New Zealand will lock horns for the three-match Test series in India several Test records are waiting to be broken.
Please Wait while comments are loading...