ಅಂಪೈರ್ಸ್ ಗೆ ಹೆಲ್ಮೆಟ್ ಜತೆ ಕೈಗೊಂದು ರಕ್ಷಕ

Posted By:
Subscribe to Oneindia Kannada

ಧರ್ಮಶಾಲಾ, ಅಕ್ಟೋಬರ್ 19: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಭರ್ಜರಿ ಪ್ರದರ್ಶನದ ಜತೆಗೆ ಪ್ರೇಕ್ಷಕರ ಗಮನ ಸೆಳೆದಿದ್ದು ಆಸ್ಟ್ರೇಲಿಯಾದ ಅಂಪೈರ್ ಬ್ರೂಸ್ ಆಕ್ಸನ್ ಫೋರ್ಡ್. ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹೊಸ ರಕ್ಷಣಾ ಸಾಧನವನ್ನು ಧರಿಸಿ ಅಂಪೈರಿಂಗ್ ಮಾಡಿ ಆಕರ್ಷಣೆಯ ಕೇಂದ್ರ ಬಿಂದುವಾದರು.

ಭಾರತ ನ್ಯೂಜಿಲೆಂಡ್ ಪಂದ್ಯದ ವೇಳೆ ಅಸ್ಟ್ರೇಲಿಯಾದ ಅಂಪೈರ್ ಬ್ರೂಸ್ ಆಕ್ಸನ್ ಫೋರ್ಡ್ ತಮ್ಮ ಎಡಗೈಯಲ್ಲಿ ಈ ರಕ್ಷಣಾ ಸಾಧನವನ್ನು ಧರಿಸಿ ಅಂಪೈರಿಂಗ್ ಮಾಡಿದ್ದರು. ಭಾರತೀಯ ಕಣ್ಣಿಗೆ ಇದು ಯುದ್ಧ ಕಾಲದ ಕತ್ತಿ ಗುರಾಣಿಯಂತೆ ಕಂಡಿರಬಹುದು.

ಹೊಸ ವಿನ್ಯಾಸದ ಸುಧಾರಿತ ರಕ್ಷಣಾ ಸಾಧನಾ forearm shield ಬಳಸಿ ಭಾರತದಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅಂಪೈರ್ ಕಾಣಿಸಿಕೊಂಡಿದ್ದು ಇದೇ ಮೊದಲು. ಆದರೆ, ಈ ಹಿಂದೆ ಐಪಿಎಲ್ ನಲ್ಲಿ ಈ ಸಾಧನ ಬಳಕೆಯಾಗಿತ್ತು.

ಸಾಧನಕ್ಕೆ ಇಂಗ್ಲೀಷ್‍ ನಲ್ಲಿ forearm shield

ಸಾಧನಕ್ಕೆ ಇಂಗ್ಲೀಷ್‍ ನಲ್ಲಿ forearm shield

ಈ ಸಾಧನಕ್ಕೆ ಇಂಗ್ಲೀಷ್‍ ನಲ್ಲಿ forearm shield ಎಂದು ಕರೆಯಲಾಗುತ್ತಿದ್ದು, ಇದನ್ನು ಕಟ್ಟಿಕೊಂಡು ಬ್ರೂಸ್ ಆಕ್ಸನ್ ಫೋರ್ಡ್ ಅಂಪೈರಿಂಗ್ ಮಾಡಿದ್ದರು. ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಬಳಕೆಯಾಗಿದ್ದರೂ ಈ ಹಿಂದೆ ಐಪಿಎಲ್‍ನಲ್ಲಿ ಈ ಸಾಧನ ಬಳಕೆಯಾಗಿತ್ತು.

ರಣಜಿ ವೇಳೆ ಅಂಪೈರ್ ವಾರ್ಡ್ ಗೆ ಪೆಟ್ಟು

ರಣಜಿ ವೇಳೆ ಅಂಪೈರ್ ವಾರ್ಡ್ ಗೆ ಪೆಟ್ಟು

ಕಳೆದ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾದ 53 ವರ್ಷ ವಯಸ್ಸಿನ ಅಂಪೈರ್ ವಾರ್ಡ್ ಅವರು ರಣಜಿ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದ ಘಟನೆ ನಡೆದಿತ್ತು. ಪಂಜಾಬಿನ ಬರೀಂದರ್ ಸ್ರಾನ್ ಹೊಡೆತವನ್ನು ತಪ್ಪಿಸಿಕೊಳ್ಳಲು ಆಗಿರಲಿಲ್ಲ.

ಬಾಲ್ ತಲೆಗೆ ಬಡಿದ ಅಂಪೈರ್ ಸಾವು

ಬಾಲ್ ತಲೆಗೆ ಬಡಿದ ಅಂಪೈರ್ ಸಾವು

2014ರಲ್ಲಿ ಇಸ್ರೇಲ್ ನಲ್ಲಿ ನಡೆದ ಲೀಗ್ ಪಂದ್ಯದ ವೇಳೆ ಬಾಲ್ ತಲೆಗೆ ಬಡಿದ ಅಂಪೈರ್ ಮೃತಪಟ್ಟಿದ್ದರು. ಇದಾದ ಬಳಿಕ ಅಂಪೈರ್ ಗಳ ಸುರಕ್ಷತೆಗಾಗಿ ಸಾಧನವನ್ನು ಧರಿಸಲು ಆರಂಭಿಸಿದರು.

ಅಂಪೈರ್ ಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತು

ಅಂಪೈರ್ ಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತು ನೀಡಲು ತಜ್ಞರು ಸೂಚಿಸಿದ್ದರು. ಮೈದಾನದಲ್ಲಿ ತಲೆಗೆ ಪೆಟ್ಟು ತಿಂದು ಆಸ್ಟ್ರೇಲಿಯಾದ ಆಟಗಾರ ಫಿಲ್ ಹ್ಯೂಸ್ ಸಾವನ್ನಪ್ಪಿದ ದುರಂತವನ್ನು ಮರೆಯುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People were amazed to see on-field umpire Bruce Oxenford sporting an unusual shield like object on his arm during India's first ODI match against New Zealand at Dharamsala on Sunday (Oct 16).
Please Wait while comments are loading...