ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಫನ್ನಿ ಟ್ವೀಟ್ಸ್

Posted By:
Subscribe to Oneindia Kannada

ಬೆಂಗಳೂರು, ಸೆ. 09: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಕ್ರಿಕೆಟ್ ಪಂದ್ಯ ಒಂದು ದಿನ ಮುಂದೂಡಿದ ಸುದ್ದಿ ತಿಳಿದಿರಬಹುದು. ಉತ್ತರ ಭಾರತದಾದ್ಯಂತ ಕರ್ವಾ ಚೌತ್ ಹಬ್ಬದ ಹಿನ್ನಲೆಯಲ್ಲಿ ಪಂದ್ಯವನ್ನು ಅಕ್ಟೋಬರ್ 20 ಕ್ಕೆ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತೀರ್ಮಾನಿಸಿದೆ. ಬಿಸಿಸಿಐನ ಈ ಕ್ರಮ ಟ್ವಿಟ್ಟರ್ ನಲ್ಲಿ ನಗೆಪಾಟಲಿಗೆ ಈಡಾಗಿದೆ.

ಎರಡನೇ ಏಕದಿನ ಪಂದ್ಯ ಅಕ್ಟೋಬರ್ 19 ರಂದು ದೆಹಲಿಯ ಫಿರೋಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಿಗದಿಯಾಗಿತ್ತು. ಮಹಿಳೆಯರ ಹಬ್ಬವೆಂದೇ ಪ್ರಸಿದ್ದಿ ಪಡೆದ ಕರ್ವಾ ಚೌತ್ ಹಬ್ಬ ಉತ್ತರ ಭಾರತದಾದ್ಯಂತ ಅಕ್ಟೋಬರ್ 19 ರಂದು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಹೀಗಾಗಿ ಅ. 19 ರಂದು ನಿಗದಿಯಾಗಿದ್ದ 2ನೇ ಏಕದಿನ ಪಂದ್ಯವನ್ನು ಮುಂದೂಡಬೇಕೆಂದು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಶಿಯೇಷನ್ ಉಪಾಧ್ಯಕ್ಷ ಸಿ.ಕೆ ಖನ್ನಾ ಬಿಸಿಸಿಐಗೆ ಮನವಿ ಮಾಡಿದ್ದರು. ಅದರಂತೆ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ.

ಏನಿದು ಕರ್ವಾ ಚೌತ್ ಹಬ್ಬ?

ಏನಿದು ಕರ್ವಾ ಚೌತ್ ಹಬ್ಬ?

ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ಹಿಂದೂ ಸಂಪ್ರದಾಯಸ್ಥ ಮಹಿಳೆಯರು ತಮ್ಮ ಪತಿಯ ಏಳಿಗೆ, ಆಯುರ್ ಆಯುಷ್ಯಕ್ಕಾಗಿ ಒಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಉಪವಾಸವಿದ್ದು ರಾತ್ರಿ ಚಂದಿರನ ದರ್ಶನ ಪಡೆದು ಸಿಹಿಯನ್ನು ಪತಿಗೆ ತಿನ್ನಿಸಿ ನಂತರ ತಾವೂ ಊಟ ಮಾಡುತ್ತಾರೆ. ಟೀಂ ಇಂಡಿಯಾದಲ್ಲಿರುವ ಆಟಗಾರರ ಪತ್ನಿಯರು ಈ ವ್ರತ ಆಚರಿಸುವುದರಿಂದ ಪಂದ್ಯ ಮುಂದೂಡಲಾಗುತ್ತಿದೆ ಎಂಬ ಸುದ್ದಿಯಿದೆ.

ಮಹಿಳಾ ಕ್ರಿಕೆಟ್ ಪಂದ್ಯವಾಗಿದ್ದರೆ ಹೌದು ಎನ್ನಬಹುದಿತ್ತು

ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಫನ್ನಿ ಟ್ವೀಟ್ಸ್: ಮಹಿಳಾ ಕ್ರಿಕೆಟ್ ಪಂದ್ಯವಾಗಿದ್ದರೆ, ಬಿಸಿಸಿಐ ಕ್ರಮ ಸರಿಯಾಗಿದೆ ಹೌದು ಎನ್ನಬಹುದಿತ್ತು. ಆದರೆ, ಇದು ಪ್ರಜ್ಞೆ ಇಲ್ಲದ ಕ್ರಮ.

ಏಕದಿನ ಪಂದ್ಯ ದಿನಾಂಕ ಬದಲು ಏಕೆ?

ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಟ್ವೀಟ್ಸ್ : ಏಕದಿನ ಪಂದ್ಯ ದಿನಾಂಕ ಬದಲು ಏಕೆ? ಕರ್ವಾ ಚೌತ್ ಹಬ್ಬಕ್ಕಾಗಿ ಪಂದ್ಯದ ದಿನಾಂಕ ಬದಲಾಯಿಸಿದ್ದಾರೆಯೇ? ನಂಬಲು ಸಾಧ್ಯವಾಗುತ್ತಿಲ್ಲ.

ಟೀಂ ಇಂಡಿಯಾದಲ್ಲಿ ಎಲ್ಲರು ವಿವಾಹಸ್ಥರೇ?

ಓಹ್! ಕರ್ವಾ ಚೌತ್ ಗಾಗಿ ಪಂದ್ಯದ ದಿನ ಬದಲಾಯಿಸಿದ್ದಾರೆ ಎಂದರೆ, ಟೀಮ್ ಇಂಡಿಯಾದ ಎಲ್ಲರೂ ವಿವಾಹಸ್ಥರಾಗಿ ಬಿಟ್ಟಿದ್ದಾರೆ ಎಂದರ್ಥ. ಹೆಂಡತಿ ಮಾತು ಕೇಳದೆ ಇರಲು ಸಾಧ್ಯವೇ?

ಪಂದ್ಯ ಬದಲಾವಣೆ ಹಿಂದಿನ ರಹಸ್ಯ ಹೀಗಿದೆ

ಸರ್ ರವೀಂದ್ರ ಜಡೇಜ ಅವರ ಪತ್ನಿಗೆ ಇದು ಮೊದಲ ಕರ್ವಾ ಚೌತ್ ಹಬ್ಬ, ಹಾಗಾಗಿ ಬಿಸಿಸಿಐ ಪಂದ್ಯವನ್ನು ಮುಂದೂಡಿದೆ. ಜಡೇಜ ಪವರ್ ಬಗ್ಗೆ ಈಗಲಾದರೂ ತಿಳಿಯಿತೇ?

ಕ್ರಿಕೆಟರ್ಸ್ ಗಳ ಪತ್ನಿಗಳು ಹೀಗಿರುತ್ತಾರೆ

ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಫನ್ನಿ ಟ್ವೀಟ್ಸ್ ಮುಂದುವರೆಯುತ್ತಲೇ ಇದೆ. ಕ್ರಿಕೆಟರ್ಸ್ ಗಳ ಪತ್ನಿಗಳು ಹೀಗಿರುತ್ತಾರೆ ಎಂಬ ವಿಡಿಯೋ

ಪಂದ್ಯ ಮುಂದೂಡುವುದನ್ನು ತಡೆಯಬಹುದಿತ್ತು

ಪಂದ್ಯ ಮುಂದೂಡುವುದನ್ನು ತಡೆಯಬಹುದಿತ್ತು ತಂಡದಲ್ಲಿ ಉನ್ಮುಕ್ತ್ 'ಚಂದ್' ಇದ್ದಿದ್ರೆ ಸಾಕಿತ್ತು. ಚಂದ್ರನ ದರ್ಶನವಾಗುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BCCI on September 8 surprised one and all after it decided to shift the 2nd ODI between India and New Zealand from October 19 to 20th due to 'Karva Chauth' festival. This development shocked fans, who took to Twitter to poke fun at the BCCI.
Please Wait while comments are loading...