ನಂ.2 ಸ್ಥಾನ ಉಳಿಸಿಕೊಳ್ಳಲು ಭಾರತಕ್ಕೆ ಗೆಲುವು ಅಗತ್ಯ

Posted By:
Subscribe to Oneindia Kannada

ದುಬೈ, ಜ.10: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿನ ನಂ.1 ಸ್ಥಾನ ಉಳಿಸಿಕೊಳ್ಳಲು ಪ್ರವಾಸಿ ಟೀಂ ಇಂಡಿಯಾ ಜೊತೆ ಮಂಗಳವಾರದಿಂದ ಸೆಣೆಸಾಡಲಿದೆ.

ಧೋನಿ ನೇತೃತದ ಟೀಂ ಇಂಡಿಯಾ ಏನಾದರೂ ಆಸೀಸ್ ವಿರುದ್ಧ ಎಲ್ಲಾ ಪಂದ್ಯವನ್ನು ಸೋತರೆ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೇರಲಿದೆ. 11 ಅಂಕಗಳೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನಕ್ಕೇರಿದೆ. ಎರಡನೇ ಸ್ಥಾನವನ್ನು ಉಳಿಸಿಕೊಳ್ಳಲು ಟೀಂ ಇಂಡಿಯಾ ಸರಣಿಯಲ್ಲಿ ಒಂದು ಪಂದ್ಯವನ್ನಾದರೂ ಗೆಲ್ಲಲೇ ಬೇಕು.[ಪ್ರಪ್ರಥಮ ಬಾರಿಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಫ್ಘಾನಿಸ್ತಾನ]

India must win one ODI in Australia to retain No.2 spot

ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಬೌಲರ್ಸ್ ಪೈಕಿ ರವಿಚಂದ್ರನ್ ಅಶ್ವಿನ್ ಅವರು ಹತ್ತನೇ ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.[ಸ್ಟೀವ್ ಸ್ಮಿತ್ ಗೆ ಐಸಿಸಿ ಕ್ರಿಕೆಟರ್ 2015 ಪ್ರಶಸ್ತಿ]
ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿ (ದಿನಾಂಕ ಜನವರಿ 10 ರಂತೆ)
1. ಆಸ್ಟ್ರೇಲಿಯಾ 127 ಅಂಕಗಳು
2. ಭಾರತ 114
3. ದಕ್ಷಿಣ ಆಫ್ರಿಕಾ 112
4. ನ್ಯೂಜಿಲೆಂಡ್ 111
5. ಶ್ರೀಲಂಕಾ 101
6. ಇಂಗ್ಲೆಂಡ್ 101
7. ಬಾಂಗ್ಲಾದೇಶ 97
8. ಪಾಕಿಸ್ತಾನ 87
9. ವೆಸ್ಟ್ ಇಂಡೀಸ್ 86
10. ಅಫ್ಘಾನಿಸ್ತಾನ 47

ಟಾಪ್ 10 ಬ್ಯಾಟ್ಸ್ ಮನ್ [ಐಸಿಸಿ ಆಲ್ ರೌಂಡರ್ ಪಟ್ಟಿಯಲ್ಲಿ ಅಶ್ವಿನ್ ನಂ.1]
1. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) 900 ಅಂಕಗಳು
2. ವಿರಾಟ್ ಕೊಹ್ಲಿ (ಭಾರತ) 804
3. ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) 776
4. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
5. ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) 760
6. ಮಹೇಂದ್ರ ಸಿಂಗ್ ಧೋನಿ (ಭಾರತ) 741
7. ಶಿಖರ್ ಧವನ್ (ಭಾರತ) 730
8. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) 722
9. ರಾಸ್ ಟೇಲರ್ (ನ್ಯೂಜಿಲೆಂಡ್) 720
10. ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ) 717

ಟಾಪ್ 10 ಬೌಲರ್
1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 713 ಅಂಕಗಳು
2. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) 706
3. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 699
4. ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ) 688
5. ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ) 682
6. ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ) 672
7. ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ) 666
8. ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) 650
9. ಸಯೀದ್ ಅಜ್ಮಲ್(ಪಾಕಿಸ್ತಾನ) 642
10. ರವಿಚಂದ್ರನ್ ಅಶ್ವಿನ್ (ಭಾರತ) 640
(ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World Champions Australia go head-to-head with former World Cup-winners India in a five-match One-Day International (ODI) series in Perth on Tuesday with their No.1 ranking in the secured in the International Cricket Council (ICC) rankings.
Please Wait while comments are loading...