ಬೆಂಗಳೂರಿನಲ್ಲಿ ಟಿ20, ಟಿಕೆಟ್ ಮಾರಾಟ ಯಾವಾಗ?

Posted By:
Subscribe to Oneindia Kannada

ಬೆಂಗಳೂರು, ಜನವರಿ 23: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆ ಟಿ20 ಅಂತಾರಾಷ್ಟ್ರೀಯ ಪಂದ್ಯ ಫೆಬ್ರವರಿ 1 ರಂದು ನಡೆಯಲಿದೆ. ಈ ಪಂದ್ಯಕ್ಕೆ ಟಿಕೆಟ್ ಗಳು ಜನವರಿ 28ರಿಂದ ನೀಡಲಾಗುತ್ತದೆ ಎಂದು ಕೆಎಸ್ ಸಿಎ ಸೋಮವಾರ ಪ್ರಕಟಿಸಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ 2-1 ಅಂತರದಿಂದ ಗೆದ್ದುಕೊಂಡಿದೆ. [ಟೀಂ ಇಂಡಿಯಾಕ್ಕೆ ಸಿಕ್ತು ಸೂಪರ್ ಜರ್ಸಿ!]

India-England T20I in #Bengaluru on Feb 1. Box office ticket sales on Jan 28

* ಸಾರ್ವಜನಿಕರಿಗೆ ಜನವರಿ 28, 2017(ಶನಿವಾರ) ರ ಬೆಳಗ್ಗೆ 10 ಗಂಟೆಯಿಂದ ಟಿಕೆಟ್ ನೀಡಲಾಗುತ್ತದೆ. [ಭಾರತ vs ಇಂಗ್ಲೆಂಡ್, ಟಿ20 ಸರಣಿಗೆ ಫುಲ್ ಗೈಡ್]
ಗ್ಯಾಲರಿ ಟಿಕೆಟ್ ಬೆಲೆ 500 ರು. ಜಿ ಸ್ಟ್ಯಾಂಡ್
* ಚಿನ್ನಸ್ವಾಮಿ ಕ್ರೀಡಾಂಗಣದ ಕಬ್ಬನ್ ರಸ್ತೆ ಬಳಿಯ ಗೇಟ್ ನಂ 2 ನಲ್ಲಿ ಲಭ್ಯ
* ಚಿನ್ನಸ್ವಾಮಿ ಕ್ರೀಡಾಂಗಣದ ಕಬ್ಬನ್ ರಸ್ತೆ ಬಳಿಯ ಗೇಟ್ ನಂ 15 ಹಾಗೂ 16 ನಲ್ಲಿ


ಬೆಲೆ ಎಷ್ಟು?

ಪಿ ಕಾರ್ಪೊರೇಟ್ : 7500 ರು
ಪಿ ಟೆರೇಸ್ : 6000
ಎ ಅಪ್ಪರ್ ಸ್ಟ್ಯಾಂಡ್ : 1500
ಆರ್ ಅಪ್ಪರ್ ಸ್ಟ್ಯಾಂಡ್ : 1500
ಬಿ ಲೋವರ್ ಸ್ಟ್ಯಾಂಡ್ : 1500
ಎನ್ ಸ್ಟ್ಯಾಂಡ್ : 2500
ಸಿ ಅಪ್ಪರ್ ಸ್ಟ್ಯಾಂಡ್ : 1250

* ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ಟಿವಿ ನೆಟ್ವರ್ಕ್ ನಲ್ಲಿ ನೇರ ಪ್ರಸಾರವಾಗಲಿದೆ.
* ಬೆಂಗಳೂರಿನಲ್ಲಿ ಫೆಬ್ರವರಿ 1(ಬುಧವಾರ) ನಡೆಯಲಿರುವ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಮೊದಲ ಟಿ20 ಪಂದ್ಯ ಮಾತ್ರ 4.30 ಕ್ಕೆ ಶುರುವಾಗಲಿದೆ.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India-England T20I scheduled to be played at M Chinnaswamy stadium Bengaluru on Feb 1, 2017. Box office ticket sales for this match will be sold from Jan 28 onwards.
Please Wait while comments are loading...