ಬೆಂಗಳೂರಿನ ಟಿ20 ಪಂದ್ಯಕ್ಕೆ ಟಿಕೆಟ್ ಸೋಲ್ಡ್ ಔಟ್

Posted By:
Subscribe to Oneindia Kannada

ಬೆಂಗಳೂರು, ಜನವರಿ 29: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದ ಟಿಕೆಟ್ ಗಳು ತ್ವರಿತಗತಿಯಲ್ಲಿ ಸೋಲ್ಡ್ ಔಟ್ ಆಗಿವೆ.

ಚಿನ್ನಸ್ವಾಮಿ ಸ್ಟೇಡಿಯಂ ಆವರಣದ ಟಿಕೆಟ್ ಕೌಂಟರ್​ ನಲ್ಲಿ ಶನಿವಾರದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತ ರೀತಿಯಲ್ಲಿ ಟಿಕೆಟ್ ಪಡೆದ ಅಭಿಮಾನಿಗಳು ಸಂಭ್ರಮಿಸಿದರು.

ವೆಬ್ ಸೈಟ್ ಗಳಾದ ticketgenie.com ಹಾಗೂ ಬುಕ್ ಮೈಶೋ.ಕಾಂನಲ್ಲಿ ಕಾರ್ಪೊರೇಟ್ ಟಿಕೆಟ್ ಗಳ ಮಾರಾಟ ಕೂಡಾ ಮುಕ್ತಾಯವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮಾರ್ಚ್ 4ರ ಎರಡನೇ ಟೆಸ್ಟ್ ಪಂದ್ಯ ಹಾಗೂ ಫೆ.1 ರ ಟಿ20 ಪಂದ್ಯದ ಕಾಂಬೋ ಟಿಕೆಟ್ ಸಿಕ್ಕಿದವರಿಗೆ ಹಬ್ಬ.[ಟೀಂ ಇಂಡಿಯಾಕ್ಕೆ ಸಿಕ್ತು ಸೂಪರ್ ಜರ್ಸಿ!]

India-England T20I Bengaluru Match tickets Sold out

ಪೊಲೀಸ್ ಬಿಗಿಭದ್ರತೆಯೊಂದಿಗೆ ಟಿಕೆಟ್ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆಯಿತು. ಪಂದ್ಯದ ಗ್ಯಾಲರಿ ಮತ್ತು ಸ್ಟ್ಯಾಂಡ್ಸ್ ಟಿಕೆಟ್ ಮಾರಾಟ ಪ್ರಕ್ರಿಯೆ ಬೆಳಗ್ಗೆ 9.30 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಿತು. ಆದರೆ, ಅಭಿಮಾನಿಗಳು ಬೆಳಗ್ಗೆ 7 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದರು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆ ಟಿ20 ಅಂತಾರಾಷ್ಟ್ರೀಯ ಪಂದ್ಯ ಫೆಬ್ರವರಿ 1 ರಂದು ನಡೆಯಲಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ 2-1 ಅಂತರದಿಂದ ಗೆದ್ದುಕೊಂಡಿದೆ. ಆದರೆ, ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದು ಮುನ್ನಡೆ ಪಡೆದಿದ್ದು, ಎರಡನೇ ಪಂದ್ಯ ನಾಗ್ಪುರದಲ್ಲಿ ಭಾನುವಾರ ನಡೆಯಲಿದೆ. ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ಟಿವಿ ನೆಟ್ವರ್ಕ್ ನಲ್ಲಿ ನೇರ ಪ್ರಸಾರವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India-England T20I Bengaluru Match tickets Sold out. India-England T20I scheduled to be played at M Chinnaswamy stadium Bengaluru on Feb 1, 2017.
Please Wait while comments are loading...