ಮುಂದಿನ 2 ವರ್ಷ ಭಾರತ ಆಡಲಿರುವ ಸರಣಿಗಳ ಸಂಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ಮುಂಬೈ, ಜುಲೈ 13 : 2019ರ ಜೂನ್‌ ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯವರೆಗೂ ಟೀಂ ಇಂಡಿಯಾ ಆಡಲಿರುವ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿಗಳ ವೇಳಾಪಟ್ಟಿ ಪ್ರಕಟಗೊಂಡಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಆಯ್ಕೆ ಮಾಡಿದ್ದು, 2019ರ ವಿಶ್ವಕಪ್ ಪಂದ್ಯಾವಳಿವರೆಗೂ ರವಿಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2017ರಿಂದ 2019ರ ವಿಶ್ವಕಪ್ ವರೆಗೆ ಭಾರತ ಕ್ರಿಕೆಟ್ ತಂಡದ ಯಾವ-ಯಾವ ದೇಶಗಳ ಜತೆ ಸರಣಿ ಆಡಲಿದೆ ಎಂಬ ಸಂಪೂರ್ಣ ವೇಳಾಪಟ್ಟಿ ತಿಳಿಯಲು ಮುಂದೆ ಓದಿ...

India cricket team Schedule of Future Tour Program (FTP) and upcoming series Till 2019

ಮುಂದಿನ 2 ವರ್ಷ ಟೀಂ ಇಂಡಿಯಾ ಆಡಲಿರುವ ಸರಣಿಗಳು

* ಟೀಂ ಇಂಡಿಯಾ ಜುಲೈ 26ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ 3 ಟೆಸ್ಟ್‌, 5 ಏಕದಿನ, 1 ಟಿ- 20 ಪಂದ್ಯಗಳನ್ನು ಆಡಲಿದೆ.

* 2017ರ ಅಕ್ಟೋಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಹಾಗೂ 1 ಟಿ-20 ಪಂದ್ಯ ಆಡಲಿದೆ.

* 2018ರ ಜನವರಿ -ಪೆಬ್ರವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ದ.ಆಫ್ರಿಕಾ ವಿರುದ್ಧ 4 ಟೆಸ್ಟ್‌, 5 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಲಿದೆ.

* 2018ರ ಮಾರ್ಚ್‌- ಏಪ್ರಿಲ್‌ನಲ್ಲಿ ಶ್ರೀಲಂಕಾ ವಿರುದ್ಧ 3 ಟೆಸ್ಟ್‌, 5 ಏಕದಿನ ಹಾಗೂ 1 ಟಿ -20 ಪಂದ್ಯ ಆಡಲಿದೆ.

* 2018ರ ಜೂನ್‌, ಜುಲೈ- ಆಗಸ್ಟ್‌ನಲ್ಲಿ ಭಾರತ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 5 ಟೆಸ್ಟ್‌, 5 ಏಕದಿನ ಹಾಗೂ 1 ಟಿ-20 ಪಂದ್ಯ ಆಡಲಿದೆ.

* 2018ರ ಅಕ್ಟೋಬರ್‌ನಲ್ಲಿ ಭಾರತ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 5 ಏಕದಿನ ಹಾಗೂ 1 ಟಿ-20 ಪಂದ್ಯ ಆಡಲಿದೆ.

* 2018ರ ಡಿಸೆಂಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

* 2019ರ ಜನವರಿ- ಪೆಬ್ರವರಿಯಲ್ಲಿ ಭಾರತ - ನ್ಯೂಜಿಲೆಂಡ್‌ ನಡುವೆ 5 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯ ನಡೆಯಲಿದೆ.

* 2019ರ ಪೆಬ್ರವರಿಯಲ್ಲಿ ಭಾರತ - ಆಸ್ಟ್ರೇಲಿಯಾ ನಡುವೆ 3 ಏಕದಿನ, 2 ಟಿ -20 ಪಂದ್ಯ ನಡೆಯಲಿವೆ.

* 2019ರ ಮಾರ್ಚ್‌ನಲ್ಲಿ ಭಾರತ -ಜಿಂಬಾಬ್ವೆ ನಡುವೆ 1 ಟೆಸ್ಟ್‌, 3 ಏಕದಿನ ಪಂದ್ಯ ನಡೆಯಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India cricket team Schedule of Future Tour Program (FTP) and upcoming series Till one-day World Cup tournament will be held in England in June 2019.
Please Wait while comments are loading...