ನಾಯಕನಾಗಿ ಅಮೆರಿಕದಲ್ಲಿ 'ವಿಶ್ವದಾಖಲೆ' ಬರೆದ ಧೋನಿ

Posted By:
Subscribe to Oneindia Kannada

ಫ್ಲೋರಿಡಾ, ಆಗಸ್ಟ್ 27 : ಅಮೆರಿಕದ ಪ್ಲೋರಿಡಾದಲ್ಲಿ ಮೊಟ್ಟ ಮೊದಲ ಬಾರಿಗೆ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಮೂಲಕ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಹೊಸ ಶೆಖೆ ಆರಂಭಿಸಿರುವುದು ಗೊತ್ತಿರಬಹುದು. ಈ ಶುಭ ಸಂದರ್ಭದಲ್ಲಿ ನಾಯಕನಾಗಿ ಧೋನಿ ಅವರು ವಿಶ್ವ ದಾಖಲೆ ಬರೆದಿದ್ದಾರೆ.

ಮೊದಲ ಟಿ20 ಸ್ಕೋರ್ ಕಾರ್ಡ್ | ಪಂದ್ಯದ ಲೈವ್ ವರದಿ

ಫ್ಲೋರಿಡಾದ ಫೋರ್ಟ್ ಲಾರ್ಡಾರ್ ಡೇಲ್ (Fort lauderdale)ನಲ್ಲಿ ಹೊಸ ಇತಿಹಾಸಕ್ಕೆ ಧೋನಿ ಅವರು ಸಾಕ್ಷಿಯಾದರು. ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ರನ್ನು ಧೋನಿ ಈಗ ಹಿಂದಿಕ್ಕಿದ್ದಾರೆ.[ಧೋನಿಯ ನಂ. 1 ಗೆಳೆತನದ ಜಾಹೀರಾತು ನೋಡಿ]

ಧೋನಿ ಹಾಗೂ ಅನಿಲ್ ಕುಂಬ್ಳೆ ಕಾಂಬಿನೇಷನ್ ನ ಮೊದಲ ಸರಣಿ ಇದಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಜಿಂಬಾಭ್ವೆ ವಿರುದ್ಧ ಟಿ20 ಸರಣಿ ಗೆಲ್ಲುವ ಮೂಲಕ ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ನಿಂತಿದ್ದ ಧೋನಿ ಅವರು ಶನಿವಾರ(ಆಗಸ್ಟ್ 27) ಅಮೆರಿಕದಲ್ಲಿ ಹೊಸ ದಾಖಲೆ ಬರೆದರು.

India captain MS Dhoni sets world record in 1st T20I in USA

ನಾಯಕನಾಗಿ ದಾಖಲೆ : ನಾಯಕನಾಗಿ ಧೋನಿ ಅವರು ಈಗ 325 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ರಿಕಿ ಪಾಂಟಿಂಗ್ ಬಿಟ್ಟರೆ ಯಾರೊಬ್ಬ ಆಟಗಾರರು ಈ ದಾಖಲೆ ಸಮಕ್ಕೆ ಬಂದಿಲ್ಲ.

2007ರಲ್ಲಿ ಟೀಂ ಇಂಡಿಯಾದ ನಾಯಕರಾದ ಧೋನಿ, 71 ಟಿ20 ಪಂದ್ಯ, 60 ಟೆಸ್ಟ್ ಹಾಗೂ 194 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಮೂರು ಐಸಿಸಿ ಟ್ರೋಫಿ (ವಿಶ್ವ ಟಿ20 2007, ವಿಶ್ವಕಪ್ 2011, ಚಾಂಪಿಯನ್ಸ್ ಟ್ರೋಫಿ 2013) ಗೆದ್ದಿರುವ ಏಕೈಕ ನಾಯಕರಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India captain Mahendra Singh Dhoni today (August 27) set a world record when he led the team against West Indies in the 1st Twenty20 International here.
Please Wait while comments are loading...