ಜಿಂಬಾಬ್ವೆಯಲ್ಲಿ ಹೊಸ ದಾಖಲೆ ಬರೆಯಲು ಧೋನಿ ಸಜ್ಜು

Posted By:
Subscribe to Oneindia Kannada

ಹರಾರೆ, ಜೂನ್ 08: ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಯುವ ತಂಡವನ್ನು ಮುನ್ನಡೆಸುತ್ತಿರುವ ಧೋನಿ ಅವರು ಈ ಸರಣಿಯಲ್ಲಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.

ಜಿಂಬಾಬ್ವೆ ಪ್ರವಾಸದಲ್ಲಿ 3 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 3 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಹರಾರೆಯಲ್ಲಿ ಆಡಲಾಗುತ್ತದೆ. ಜೂನ್ 11ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಧೋನಿ ಅವರು 9,000ರನ್ ಗಳಿಸುವ ಉತ್ಸಾಹದಲ್ಲಿದ್ದಾರೆ.[ಭಾರತ ವಿರುದ್ಧ ಸೆಣಸಲು ಜಿಂಬಾಬ್ವೆ ತಂಡ ಪ್ರಕಟ]

MS Dhoni set to reach another ODI milestone in Zimbabwe

34ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್, ನಾಯಕರಾಗಿ ಧೋನಿ ಅವರು ಈ ಅಪೂರ್ವ ಸಾಧನೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಸಾಧನೆ ಮಾಡಲು 82ರನ್ ಗಳ ಅಗತ್ಯವಿದೆ. 275 ಏಕದಿನ ಕ್ರಿಕೆಟ್ ಪಂದ್ಯಗಳಿಂದ 8,918ರನ್ ಗಳನ್ನು ಗಳಿಸಿದ್ದಾರೆ.[ಜಿಂಬಾಬ್ವೆ ಪ್ರವಾಸಕ್ಕೆ ಯುವ ತಂಡ ಆಯ್ಕೆ, ಧೋನಿ ನಾಯಕ]

ಡಿಸೆಂಬರ್ 2004ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿರುವ ಧೋನಿಅವರು ವಿಶ್ವದ ಅಗ್ರಗಣ್ಯ ನಾಯಕ ಅಥವಾ ಬ್ಯಾಟ್ಸ್ ಮನ್ ಆಗಿ ಬೆಳೆದಿದ್ದು ಈಗ ಇತಿಹಾಸ. ಐಸಿಸಿ ಆಯೋಜನೆಯ ಎಲ್ಲಾ ಮೂರು ವಿಶ್ವಕಪ್ ಟೂರ್ನಿಗಳನ್ನು ಗೆಲ್ಲಿಸಿಕೊಟಿದ್ದು, 2007 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸಿಕ್ಸ್ ಬಾರಿಸಿದ್ದು, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವು ಸ್ಮರಣೀಯ.

MS Dhoni set to reach another ODI milestone in Zimbabwe

ಟೀಂ ಇಂಡಿಯಾದ ಅತ್ಯಧಿಕ ರನ್ ಗಳಿಕೆ ಬ್ಯಾಟ್ಸ್ ಮನ್ ಗಳ ಪೈಕಿ ಸಚಿನ್ ತೆಂಡೂಲ್ಕರ್ ಅವರು 463 ಏಕದಿನ ಕ್ರಿಕೆಟ್ ಪಂದ್ಯಗಳಿಂದ 18,426 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮಿಕ್ಕಂತೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಪಟ್ಟಿಯಲ್ಲಿದ್ದಾರೆ.

ಭಾರತದ 9,000 ಪ್ಲಸ್ ಗಳಿಕೆ ಬ್ಯಾಟ್ಸ್ ಮನ್ ಗಳು
1. ಸಚಿನ್ ತೆಂಡೂಲ್ಕರ್ 18, 426 ರನ್ ಗಳು (463 ಪಂದ್ಯಗಳು)
2. ಸೌರವ್ ಗಂಗೂಲಿ -11,363 (೩೧೧)
3. ರಾಹುಲ್ ದ್ರಾವಿಡ್ -10,889 (344)
4. ಮೊಹಮ್ಮದ್ ಅಜರುದ್ದೀನ್ -9,378(334)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's One Day International (ODI) captain Mahendra Singh Dhoni is set to reach another milestone in his glittering limited overs career.
Please Wait while comments are loading...