ದುಲೀಪ್ ಟ್ರೋಫಿ : ಗಂಭೀರ್ ಅವರ ಇಂಡಿಯಾ ಬ್ಲೂಗೆ ಕಪ್

Posted By:
Subscribe to Oneindia Kannada

ಗ್ರೇಟರ್ ನೋಯ್ಡಾ, ಸೆ. 14: ಗೌತಮ್ ಗಂಭೀರ್ ನೇತೃತ್ವದ ಇಂಡಿಯಾ ಬ್ಲೂ ತಂಡಕ್ಕೆ ದುಲೀಪ್ ಟ್ರೋಫಿ ಲಭಿಸಿದೆ. ಇಲ್ಲಿನ ಕ್ರೀಡಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಬುಧವಾರದಂದು ಇಂಡಿಯಾ ರೆಡ್ ವಿರುದ್ಧ ಇಂಡಿಯಾ ಬ್ಲೂ 355 ರನ್ ಗಳ ಅಮೋಘ ಜಯ ದಾಖಲಿಸಿತು.

ಆಲ್ ರೌಂಡರ್ ರವೀಂದ್ರ ಜಡೇಜ ಅವರ ಡಬ್ಬಲ್ ಐದು ವಿಕೆಟ್, ಚೇತೇಶ್ವರ್ ಪೂಜಾರಾ ಅವರ ಅಜೇಯ ದ್ವಿಶತಕದ ನೆರವಿನಿಂದ ಯುವರಾಜ್ ಸಿಂಗ್ ನಾಯಕತ್ವದ ರೆಡ್ ವಿರುದ್ಧ ಬ್ಲೂ ನಿರೀಕ್ಷಿತ ಜಯ ದಾಖಲಿಸಿದೆ.

India Blue thrash India Red by 355 runs, clinch Duleep Trophy in style

517 ರನ್ ಟಾರ್ಗೆಟ್ ಬೆನ್ನು ಹತ್ತಿದ ಇಂಡಿಯಾ ರೆಡ್ ಪರ ಸ್ಟುವರ್ಟ್ ಬಿನ್ನಿ 98 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಮಿಶ್ರಾ ಅವರು 65 ರನ್ ಗಳಿಸಿದ್ದು ಸಾಕಾಗಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಂತೂ 161 ರನ್ ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್
ಇಂಡಿಯಾ ಬ್ಲೂ 693/6 ಡಿಕ್ಲೇರ್ಡ್ (ಚೇತೇಶ್ವರ್ ಪೂಜರಾ ಅಜೇಯ 256, ಶೆಲ್ಡನ್ ಜಾಕ್ಸನ್ 134; ಅಮಿತ್ ಮಿಶ್ರಾ 2/171) ಹಾಗೂ 179/5 ಡಿಕ್ಲೇರ್ಡ್(ಮಾಯಾಂಕ್ ಅಗರವಾಲ್ 52; ಕುಲದೀಪ್ ಯಾದವ್ 3/62)
ಇಂಡಿಯಾ ರೆಡ್ 356 ( ಸ್ಟುವರ್ಟ್ ಬಿನ್ನಿ 98, ಮಿಶ್ರಾ 65; ರವೀಂದ್ರ ಜಡೇಜ 5/95) ಹಾಗೂ 161 (ಶಿಖರ್ ಧವನ್ 29; ರವೀಂದ್ರ ಜಡೇಜ 5/76)
ಫಲಿತಾಂಶ : ಇಂಡಿಯಾ ರೆಡ್ ವಿರುದ್ಧ ಇಂಡಿಯಾ ಬ್ಲೂ ಗೆ 355 ರನ್ ಗಳ ಅಂತರದ ಜಯ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Blue stuck to the script to register an emphatic 355-run victory over India Red to win the Duleep Trophy cricket tournament at the Greater Noida Sports Complex Ground here on Wednesday (Sep 14).
Please Wait while comments are loading...