ಟೀಂ ಇಂಡಿಯಾ- 900ನೇ ಒಡಿಐ ಆಡುವ ಮೊದಲ ತಂಡ

Posted By:
Subscribe to Oneindia Kannada

ಧರ್ಮಶಾಲ, ಅಕ್ಟೋಬರ್ 16: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 900ನೇ ಪಂದ್ಯವಾಡುವ ಪ್ರಪ್ರಥಮ ತಂಡ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಲಿದೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿ ಧರ್ಮಶಾಲದಲ್ಲಿ ಭಾನುವಾರ ಆರಂಭವಾಗಲಿದೆ. ಎಂಎಸ್ ಧೋನಿ ನೇತೃತ್ವದ ತಂಡ ಹೊಸ ಇತಿಹಾಸಕ್ಕೆ ಮುಂದಾಗಿದೆ.

[ಏಕದಿನ ಸರಣಿ ವೇಳಾಪಟ್ಟಿ] || [3 ಏಕದಿನ ಪಂದ್ಯಕ್ಕೆ ಭಾರತ ತಂಡ ಪ್ರಕಟ]

ನ್ಯೂಜಿಲೆಂಡ್ ವಿರುದ್ಧ 500ನೇ ಟೆಸ್ಟ್ ಪಂದ್ಯ ಹಾಗು ಕೋಲ್ಕತ್ತಾದಲ್ಲಿ 2ನೇ ಟೆಸ್ಟ್ ಪಂದ್ಯ ತವರು ನೆಲದಲ್ಲಿ 250 ಟೆಸ್ಟ್ ಪಂದ್ಯವಾಡಿದ ದಾಖಲೆ ಬರೆಯಿತು.ಈಗ ಏಕದಿನ ಕ್ರಿಕೆಟ್​ನಲ್ಲಿ ತನ್ನ 900ನೇ ಪಂದ್ಯವಾಡುತ್ತಿದೆ. [ಭಾರತ-ಕಿವೀಸ್ ನಡುವೆ ಮೊದಲ ಏಕದಿನ ಪಂದ್ಯ]

India becomes first team to play 900 ODIs

ಭಾನುವಾರ ಧರ್ಮಶಾಲದಲ್ಲಿ ಭಾರತ ತಂಡ 900 ಏಕದಿನ ಪಂದ್ಯವಾಡಿದ ಕ್ರಿಕೆಟ್ ಜಗತ್ತಿನ ಮೊದಲ ಕ್ರಿಕೆಟ್ ಆಡುವ ದೇಶ ಎಂಬ ದಾಖಲೆ ಬರೆಯಲಿದೆ.[ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

ಮೊದಲ ಪಂದ್ಯ, ಮೊದಲ ಗೆಲುವು: 1974ರ ಜುಲೈ 13ರಂದು ಲೀಡ್ಸ್​ನಲ್ಲಿಕ್ರಿಕೆಟ್ ಜನಕ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮೊಟ್ಟಮೊದಲ ಏಕದಿನ ಪಂದ್ಯವಾಡಿತ್ತು. ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡ 4 ವಿಕೆಟ್​ಗಳಿಂದ ಪಂದ್ಯದಲ್ಲಿ ಸೋಲನುಭವಿಸಿತ್ತು. 1975ರ ಜೂನ್ 11ರಂದು ಈಸ್ಟ್ ಆಫ್ರಿಕಾ ವಿರುದ್ಧ ಮೊದಲ ಏಕದಿನ ಜಯ ದಾಖಲಿಸಿತು.

899 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಭಾರತ, 454 ಗೆಲುವು, 399 ಸೋಲು, ಏಳು ಪಂದ್ಯಗಳು ಟೈ ಆಗಿವೆ. 39 ಪಂದ್ಯಗಳು ರದ್ದಾಗಿವೆ. ಭಾರತದ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, 888 ಏಕದಿನ ಕ್ರಿಕೆಟ್ ಪಂದ್ಯವನ್ನಾಡಿದ್ದು, ಪಾಕಿಸ್ತಾನ 866 ಏಕದಿನ ಕ್ರಿಕೆಟ್ ಪಂದ್ಯವನ್ನಾಡಿ ಮೂರನೇ ಸ್ಥಾನದಲ್ಲಿದೆ.

ಮಿಕ್ಕಂತೆ ಶ್ರೀಲಂಕಾ 777, ವೆಸ್ಟ್ ಇಂಡೀಸ್ 744, ನ್ಯೂಜಿಲೆಂಡ್ 703, ಇಂಗ್ಲೆಂಡ್ 677, ದಕ್ಷಿಣ ಆಫ್ರಿಕಾ 564, ಬಾಂಗ್ಲಾದೇಶ 318 ಪಂದ್ಯಗಳನ್ನಾಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's ODI against New Zealand at Dharamshala today is the team's 900th, making it the world's first side to achieve the milestone. Out of the 899 ODIs, India has won 454, lost 399, tied seven, while 39 have been abandoned.
Please Wait while comments are loading...