ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಟೀಂ ಇಂಡಿಯಾ ನಂ.1

By: ಕ್ರೀಡಾ ಡೆಸ್ಕ್
Subscribe to Oneindia Kannada

ದುಬೈ ಆಗಸ್ಟ್, 17: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 3-0 ಅಂತರದಲ್ಲಿ ಜಯ ದಾಖಲಿಸಿದ್ದೇ ಭಾರತ ನಂ.1 ಸ್ಥಾನಕ್ಕೇರಲು ಕಾರಣವಾಗಿದೆ.

ಕೊಲಂಬೋದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 3-0 ಅಂತರದಲ್ಲಿ ಸರಣಿ ವೈಟ್ ವಾಶ್ ಆಗುತ್ತಿದ್ದಂತೆಯೇ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏರಿಳಿತ ಕಂಡಿದೆ. ತವರಿನಲ್ಲಿ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಸರಣಿ ವಶ ಪಡಿಸಿಕೊಂಡಿರುವ ಸಿಂಹಳೀಯರು 10 ಪಾಯಿಂಟ್ ಗಳನ್ನು ಹೆಚ್ಚಿಸಿಕೊಂಡು ಕಾಂಗೂರು ಪಡೆಯನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.[ವಿಂಡೀಸ್ ವಿರುದ್ಧ ಸರಣಿ ಗೆದ್ದರೂ, ಪಾಕ್ ವಿರುದ್ಧ ಸೋತ ಭಾರತ]

ಈ ಮೊದಲು ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತವರಿನಲ್ಲಿ 3-0 ಅಂತರದಲ್ಲಿ ಸೋಲಿಸಿದೆ. ಇದರಿಂದ ಟೀಂ ಇಂಡಿಯಾ 112 ಅಂಕಗಳನ್ನು ಪಡೆಯ ಮೂಲಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.[ಅಶ್ವಿನ್ ನಂ.1 ಆಲ್ ರೌಂಡರ್]

ಈ ಹಿಂದೆ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 0-2 ಅಂತರದಲ್ಲಿ ಸರಣಿಯಲ್ಲಿ ಗೆಲುವು ದಾಖಲಿಸಿದಾಗ ಭಾರತ ನಂ.1 ಸ್ಥಾನಕ್ಕೇರಿತ್ತು. ಶ್ರೀಲಂಕಾ ಕೃಪೆಯಿಂದ ಮತ್ತೊಮ್ಮೆ ಟೀಂ ಇಂಡಿಯಾ ನಂ 1 ಸ್ಥಾನಕ್ಕೇರಿರುವುದು ಭಾರತೀಯ ಅಭಿಮಾನಿಗಳಿಗೆ ಸಂತಸ ತಂದಿದೆ.

India become No. 1 Test side after Sri Lanka whitewash Australia 3-0

ಆದರೆ, ಈ ನಂ.1 ಸ್ಥಾನ ಉಳಿಸಿಕೊಳ್ಳಬೇಕಾದರೆ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಬೇಕಾಗಿದೆ. [ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಟೀಂ ಇಂಡಿಯಾ]

ಪ್ರಸ್ತುತ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿ.

1. ಭಾರತ (112 ಅಂಕಗಳು)
2. ಪಾಕಿಸ್ತಾನ (111)
3. ಆಸ್ಟ್ರೇಲಿಯಾ (108) (-10)
4. ಇಂಗ್ಲೆಂಡ್ (108)
5. ನ್ಯೂಜಿಲೆಂಡ್ (99)
6. ಶ್ರೀಲಂಕಾ (95) (+10)
7. ದಕ್ಷಿಣ ಆಫ್ರಿಕಾ (92)
8. ವೆಸ್ಟ್ ಇಂಡೀಸ್ (65)
9. ಬಾಂಗ್ಲಾದೇಶ (57)
10. ಜಿಂಬಾಬ್ವೆ (8)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia have conceded their number-one ranking to India after Sri Lanka made a clean sweep of the three-Test series in Colombo today (August 17).
Please Wait while comments are loading...