ಟ್ವೀಟ್ಸ್: ಕೊಹ್ಲಿ, ಅಮೀರ್ ಶೋಗೆ ತಲೆಬಾಗಿದ ಫ್ಯಾನ್ಸ್

Posted By:
Subscribe to Oneindia Kannada

ಮೀರ್ಪುರ್(ಬಾಂಗ್ಲಾದೇಶ), ಫೆ. 28: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಏಷ್ಯಾಕಪ್ ಪಂದ್ಯದಲ್ಲಿ ಗೆದ್ದು ವಿಜಯೋತ್ಸವ ಆಚರಿಸಿದೆ. ಪಾಕ್ ಪಾಲಿಗೆ ಮತ್ತೊಮ್ಮೆ ವಿರಾಟ್ ಕೊಹ್ಲಿ ವಿಲನ್ ಆಗಿದ್ದಾರೆ. ಕೊಹ್ಲಿ ಹೊಗಳಿದ್ದ ವೇಗಿ ಅಮೀರ್, ಹೊಗಳಿಕೆಗೆ ತಕ್ಕಂತೆ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ಕೊಹ್ಲಿ-ಅಮೀರ್ ಶೋ ಬಗ್ಗೆ ಬಂದಿರುವ ಟ್ವೀಟ್ ಇಲ್ಲಿದೆ ನೋಡಿ...

ಸ್ಕೋರ್ ಕಾರ್ಡ್

ಷೇರ್ ಎ ಬಾಂಗ್ಲಾ ಮೈದಾನದ ಹಸಿರು ಪಿಚ್ ನ ಲಾಭ ಪಡೆದ ಟೀಂ ಇಂಡಿಯಾ ಬೌಲರ್ ಗಳು ಪಾಕಿಸ್ತಾನ ತಂಡವನ್ನು 17.3 ಓವರ್ ಗಳಲ್ಲಿ 83 ರನ್ ಗಳಿಗೆ ನಿಯಂತ್ರಿಸಿದರು. ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ

ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದ ಭಾರತದ ಬ್ಯಾಟ್ಸ್ ಮನ್ ಗಳನ್ನು ಮೊಹಮ್ಮದ್ ಅಮೀರ್ ಕಡಿದರು. ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತು ಐದು ವರ್ಷ ಶಿಕ್ಷೆ ಅನುಭವಿಸಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭರ್ಜರಿಯಾಗಿ ಅಮೀರ್ ಮರಳಿದ್ದಾರೆ.

ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಇಬ್ಬರನ್ನು ಶೂನ್ಯಕ್ಕೆ ಪೆವಿಲಿಯನ್ ಗೆ ಕಳಿಸಿದ ಅಮೀರ್ ನಂತರ ಸುರೇಶ್ ರೈನಾ(1) ವಿಕೆಟ್ ಪಡೆದಾಗ ಭಾರತದ ಸ್ಕೋರ್ 8 ರನ್ನಿಗೆ 3 ವಿಕೆಟ್ ಆಗಿತ್ತು. ಆದರೆ, ಕೊಹ್ಲಿ ಹಾಗೂ ಯುವರಾಜ್ ಜೊತೆಯಾಟ ಭಾರತವನ್ನು ಗೆಲುವಿನ ದಡ ಮುಟ್ಟಿಸಿತು.

ಕೊಹ್ಲಿ ಹಾಗೂ ಯುವರಾಜ್ ಜೊತೆಯಾಟ

ಕೊಹ್ಲಿ ಹಾಗೂ ಯುವರಾಜ್ ಜೊತೆಯಾಟ

ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಜಯ ತಂದಿತ್ತರು. ವಿರಾಟ್ ಕೊಹ್ಲಿ 49 ರನ್ (51 ಎಸೆತ, 7x4), ಯುವರಾಜ್ ಸಿಂಗ್ 14 ರನ್(32ಎಸೆತ, 2x4) ಇಬ್ಬರು ನಾಲ್ಕನೇ ವಿಕೆಟ್ ಗೆ 68ರನ್ ಸೇರಿದ್ದು ಭಾರತಕ್ಕೆ ಗೆಲುವಿನ ದಡ ಸೇರಲು ಸಹಕಾರಿಯಾಯಿತು.

ಅವಕಾಶ ಹಾಳು ಮಾಡಿಕೊಂಡ ರಹಾನೆ

ಅವಕಾಶ ಹಾಳು ಮಾಡಿಕೊಂಡ ರಹಾನೆ

ಗಾಯಾಳು ಶಿಖರ್ ಧವನ್ ಬದಲಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ಪಡೆದ ಅಜಿಂಕ್ಯ ರಹಾನೆ ಶೂನ್ಯ ಸಂಪಾದನೆ ಮಾಡಿದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ರಹಾನೆ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ.

ಪಾಕ್ ಗೆ ಶಾಕ್ ನೀಡಿದ ಟೀಂ ಇಂಡಿಯಾ ಬೌಲರ್ಸ್

ಪಾಕ್ ಗೆ ಶಾಕ್ ನೀಡಿದ ಟೀಂ ಇಂಡಿಯಾ ಬೌಲರ್ಸ್

ಆಶಿಶ್ ನೆಹ್ರಾ 3-0-20-1, ಜಸ್​ಪ್ರೀತ್ ಬುಮ್ರಾ 3-2-8-1 ಜೊತೆಗೆ ಹಾರ್ದಿಕ್ ಪಾಂಡ್ಯ 3.3-0-8-3 ಗಳಿಸಿದರೆ ಯುವರಾಜ್ ಸಿಂಗ್ 2-0-11-1, ರವೀಂದ್ರ ಜಡೇಜಾ 3-0-11-2 ಗಳಿಸಿದರು. ಅಶ್ವಿನ್ ಅವರು 3 ಓವರ್ ಗಳಲ್ಲಿ 21ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.

ಭಾರತದ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು

ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು.

ಕೊಹ್ಲಿ-ಅಮೀರ್ ಶೋಗೆ ಬಹು ಪರಾಕ್

ಕೊಹ್ಲಿ-ಅಮೀರ್ ಶೋಗೆ ಬಹು ಪರಾಕ್ ಎಂದ ಅಭಿಮಾನಿಗಳು, ಇಬ್ಬರ ಆಟವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಮುಳುವಾದ ರನೌಟ್ ಗಳು

ಪಾಕಿಸ್ತಾನಕ್ಕೆ ಮುಳುವಾದ ರನೌಟ್ ಗಳು

ಪಾಕಿಸ್ತಾನ ತಂಡ ಪಿಚ್ ಬಗ್ಗೆ ಸರಿಯಾಗಿ ಅರಿಯದಿದೆ ಆರಂಭದಲ್ಲೇ ಎಡವಿದ್ದಲ್ಲದೆ, ಅನಗತ್ಯ ರನೌಟ್ ಗಳ ಮೂಲಕ ವಿಕೆಟ್ ಗಳನ್ನು ಒಪ್ಪಿಸಿತು. ನಾಯಕ ಅಫ್ರಿದಿ ಕೂಡಾ ಅನಗತ್ಯ ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು(ಜಡೇಜ ಎಸೆತ).

ಸಿಕ್ಸ್ ಇಲ್ಲದೆ ಮುಗಿದ ಪಂದ್ಯ ಇದೇ ಮೊದಲು

ಭಾರತ ತಂಡ ಸಿಕ್ಸ್ ಬಾರಿಸದೆ ಟಿ20 ಅಂತಾರಾಷ್ಟ್ರೀಯ ಪಂದ್ಯ ಗೆದ್ದಿದ್ದು ಇದೇ ಮೊದಲು ಎಂದ ಅಭಿಮಾನಿಗಳು.

ಅಮೀರ್ ಕಮ್ ಬ್ಯಾಕ್ ಸ್ವಾಗತಿಸಿದ ವಿಶ್ಲೇಷಕರು

ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಕಮ್ ಬ್ಯಾಕ್ ಸ್ವಾಗತಿಸಿದ ಫ್ಯಾನ್ಸ್, ಕ್ರಿಕೆಟರ್ಸ್ ಹಾಗೂ ವಿಶ್ಲೇಷಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India rode on a strong bowling performance to beat arch-rivals Pakistan by five wickets in their Twenty20 International clash of the Asia Cup at the Sher-e-Bangla National Stadium here on Saturday evening
Please Wait while comments are loading...