ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತದ ಮಹಿಳೆಯರು

Posted By:
Subscribe to Oneindia Kannada

ಬ್ಯಾಂಕಾಕ್, ಡಿಸೆಂಬರ್ 04: ಮಿಥಾಲಿ ರಾಜ್ ಅವರ ಅಜೇಯ 73ರನ್ ಹಾಗೂ ಬೌಲರ್ ಗಳ ಕರಾರುವಾಕ್ ಪ್ರದರ್ಶನದ ನೆರವಿನಿಂದ ಪಾಕಿಸ್ತಾನವನ್ನು ಭಾರತ ಸೋಲಿಸಿ ಏಷ್ಯಾಕಪ್ ಗೆದ್ದುಕೊಂಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತನ್ನ ಚಾಂಪಿಯನ್ ಶಿಪ್ ಪಟ್ಟವನ್ನು ಉಳಿಸಿಕೊಂಡಿದೆ. 17ರನ್ ಗಳಿಂದ ಪಾಕಿಸ್ತಾನದ ಮಹಿಳೆಯರು ಸೋಲೊಪ್ಪಿಕೊಂಡಿದ್ದಾರೆ.

India beat Pakistan by 17 runs win Women’s Asia Cup T20 Trophy

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 121/5 ಸ್ಕೋರ್ ಮಾಡಿತ್ತು. ಇದನ್ನು ಚೇಸ್ ಮಾಡಿದ ಪಾಕಿಸ್ತಾನ ತಂಡ 104/6 ಸ್ಕೋರ್ ಮಾಡಿ, ಸೋಲು ಕಂಡಿದೆ.


ಭಾರತ ವಿರುದ್ಧ ಸತತವಾಗಿ ನಾಲ್ಕು ಬಾರಿ ಟ್ವೆಂಟಿ ಪಂದ್ಯ ಕಳೆದುಕೊಂಡಿದೆ. ಒಟ್ಟಾರೆ ಭಾರತದ ಮಹಿಳೆಯರು 6 ಬಾರಿ ಏಷ್ಯಾ ಕಪ್ ಗೆದ್ದುಕೊಂಡಿದ್ದಾರೆ.

ಏಷ್ಯಾ ಕಪ್ ಸಾಧನೆ: ಮಿಥಾಲಿ ರಾಜ್ ಪಡೆ 6ನೇ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿದಿದೆ. 2004, 2005, 2006, 2008ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಗೆದ್ದಿದ್ದ ಭಾರತ, 2012 ಹಾಗೂ 2016ರಲ್ಲಿ ಟ್ವೆಂಟಿ20 ಮಾದರಿಯಲ್ಲಿ ಕಪ್ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ. ಒಟ್ಟಾರೆ 32 ಪಂದ್ಯಗಳಿಂದ ಭಾರತ ಅಜೇಯವಾಗಿ ಉಳಿದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian women's team on Sunday (December 4) defeated Pakistan by 17 runs to lift Asia Cup T20 title.
Please Wait while comments are loading...