ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಭಾರತೀಯ ಸ್ಪಿನ್ ಕೋಚ್!

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಪಿನ್ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟರ್ ಶ್ರೀಧರನ್ ಶ್ರೀರಾಮ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.ಭಾರತ ಪ್ರವಾಸ ಕೈಗೊಳ್ಳಲಿರುವ ಆಸೀಸ್ ತಂಡವನ್ನು ಸೇರಲಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರ ಮೈಕ ಹಸ್ಸಿ ಅವರು ತಮಿಳುನಾಡಿನ ಆಟಗಾರರ ಜೊತೆ ಒಡನಾಟ ಹೊಂದಿದ್ದರು. ಮುಖ್ಯವಾಗಿ ಸ್ಪಿನ್ನರ್ ಗಳ ಜೊತೆ ಹೆಚ್ಚಿನ ಸಂವಾದ ನಡೆಸಿ ಆಟವನ್ನು ಅಭಿವೃದ್ಧಿ ಪಡಿಸುವ ಇಂಗಿತ ಹೊಂದಿದ್ದರು. ಈಗ ಹಸ್ಸಿ ಸಲಹೆಯಂತೆ ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ಶ್ರೀಧರನ್ ಶ್ರೀರಾಮ್ ಅವರನ್ನು ನೇಮಿಸಿದೆ.

Sriram Sridharan to be Australia's spin consultant for Test series against India

ಭಾರತದಲ್ಲಿ 2016ರಲ್ಲಿ ನಡೆದ ವಿಶ್ವ ಟ್ವೆಂಟಿ-20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಪಿನ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

2000ರಿಂದ 2004ರ ನಡುವೆ ಭಾರತದ ಆಲ್‌ರೌಂಡರ್ ಆಗಿ ಮಿಂಚಿರುವ, ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ನ ಸಹಾಯಕ ಕೋಚ್ ಆಗಿದ್ದ ಶ್ರೀರಾಮ್, ಈ ವರ್ಷಾರಂಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯ ಎ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.
2004ರ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಸ್ಪಿನ್ನರ್ ಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ತಂಡದಲ್ಲಿ ನಾಲ್ವರು ಸ್ಪಿನ್ನ್ನರ್ ಗಳಿದ್ದಾರೆ. [ತಂಡ ಹೀಗಿದೆ ನೋಡಿ]

ರಿಕಿ ಪಾಂಟಿಂಗ್ ಪಡೆಯ ತಂತ್ರಗಾರಿಕೆಯನ್ನು ಸ್ಮಿತ್ ಮುಂದುವರೆಸಲು ಬಯಸಿದ್ದಾರೆ. ಫುಣೆಯಲ್ಲಿ ಫೆಬ್ರವರಿ 23 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ದುಬೈನಲ್ಲಿ ಐಸಿಸಿ ಅಕಾಡೆಮಿಯಲ್ಲಿ ಆಸೀಸ್ ಆಟಗಾರರ ತರಬೇತಿ ನೀಡಲು ಜನವರಿ 29ರಂದು ಶ್ರೀರಾಮ್ ತೆರಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricket Australia have on Monday (Jan 16) confirmed former India One-Day International (ODI) player Sriram Sridharan will join the coaching staff for the Australia's tour of India as a spin consultant.
Please Wait while comments are loading...