ಭಾರತ ವಿರುದ್ಧ ಅರ್ಹ ಜಯ ದಾಖಲಿಸಿದ ಕಿವೀಸ್

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 22: ಇಲ್ಲಿನ ವಾಂಖೆಡೆ ಮೈದಾನದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಹಾಗೂ ಅತಿಥೇಯ ಭಾರತ ನಡುವೆ ಮೊದಲ ಏಕದಿನ ಪಂದ್ಯವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಟೀಂ ಇಂಡಿಯಾ ನೀಡಿದ್ದ 281ರನ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 6 ವಿಕೆಟ್ ಗಳಿಂದ ಜಯ ಗಳಿಸಿದೆ.

ಏಕದಿನ ಪಂದ್ಯಗಳಲ್ಲಿ ಶತಕ: ಕೊಹ್ಲಿಯೇ ಕಿಂಗ್ @31

ನ್ಯೂಜಿಲೆಂಡ್ ಪರ ಲಾಥಮ್ ಆಕರ್ಷಕ ಶತಕ ಔಟಾಗದೆ 103 ಹಾಗೂ ಟೇಲರ್ 95 ರನ್ ಗಳಿಸಿ ಪಂದ್ಯವನ್ನು ನ್ಯೂಜಿಲೆಂಡ್ ನತ್ತ ವಾಲುವಂತೆ ಮಾಡಿದರು.

ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಇದಾಗಿದ್ದು,ಕಿವೀಸ್ ವಿರುದ್ಧ ಭಾರತ 280/8 ಸ್ಕೋರ್ ಮಾಡಿತ್ತು.

ಸ್ಕೋರ್ ಕಾರ್ಡ್ ನೋಡಿ

ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಲ್ಲದೆ,ತಮ್ಮ 200ನೇ ಏಕದಿನ ಪಂದ್ಯದಲ್ಲಿ ಶತಕ( 121) ಗಳಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

India opt to bat against New Zealand in first ODI

ತಂಡದಲ್ಲಿ ಯಾರಿಗೆ ಸ್ಥಾನ: ಕರ್ನಾಟಕ ಮೂಲದ ಮನೀಷ್‌ ಪಾಂಡೆ, ಮುಂಬೈನ ಅಜಿಂಕ್ಯ ರಹಾನೆಗೆ ಸ್ಥಾನ ಸಿಕ್ಕಿಲ್ಲ. ಶಿಖರ್ ಧವನ್ ಅವರು ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಆಡುವ XI ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಧೋನಿ ಅವರೇ ವಿಕೆಟ್ ಕೀಪಿಂಗ್ ಮಾಡುವ ಸಾಧ್ಯತೆಯಿದೆ.

ನ್ಯೂಜಿಲೆಂಡ್ ತಂಡದಲ್ಲಿ ಆರಂಭಿಕ ಆಟಗಾರ ಟಾಮ್ ಲಾತಮ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ ಅವರು ಆರಂಭಿಕರಾಗಿದ್ದಾರೆ.

ತಂಡಗಳು ಇಂತಿವೆ:
ಟೀಂ ಇಂಡಿಯಾ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಎಂ.ಎಸ್‌ ಧೋನಿ, ಶಿಖರ್‌ ಧವನ್‌, ಕೇದರ್‌ ಜಾಧವ್‌, ಜಸ್ಪೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯಾ, ಯುಜ್ವೇಂದ್ರ ಚಾಹಲ್‌, ದಿನೇಶ್ ಕಾರ್ತಿಕ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌

ನ್ಯೂಜಿಲೆಂಡ್: ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಟಿನ್‌‌ ಗಪ್ಟಿಲ್‌, ರಾಸ್‌ ಟೇಲರ್‌, ಟಾಮ್‌ ಲಥಾಮ್‌, ಟಿಮ್ ಸೌಥಿ, ಹೆನ್ರಿ ನಿಕೋಲ್ಸ್‌, ಕಾಲಿನ್‌ ಡೆ ಗ್ರಾಂಡ್ಹೋಮ್‌, ಮಿಚೆಲ್‌ ಸ್ಯಾಂಟನರ್‌, ಟ್ರೆಂಡ್‌ ಬೌಲ್ಟ್‌, ಕಾಲಿನ್‌ ಮುನ್ರೋ, ಆಡಮ್‌ ಮಿಲ್ನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India captain Virat Kohli won the toss and elected to bat in their first One-Day International against New Zealand at the Wankhede Stadium here on Sunday (October 22).
Please Wait while comments are loading...