ನಾಯಕನಾಗಿ ಕೊನೆ ಪಂದ್ಯ ಸೋತ ಎಂಎಸ್ ಧೋನಿ

Posted By:
Subscribe to Oneindia Kannada

ಮುಂಬೈ, ಜನವರಿ 10: ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು (ಜನವರಿ 10) ನಡೆಯಿತು. ಎಂಎಸ್ ಧೋನಿ ತಮ್ಮ ನಾಯಕತ್ವದ ಕೊನೆ ಪಂದ್ಯದಲ್ಲಿ ಟಾಸ್ ಸೋತಿದ್ದಲ್ಲದೆ ಪಂದ್ಯ ಕೂಡಾ ಸೋತರು. ಇಂಡಿಯಾ ಎ ಒಡ್ಡಿದ್ದ 305 ರನ್ ಗುರಿಯನ್ನು ತಲುಪಿದ ಇಂಗ್ಲೆಂಡ್ 3 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದಿದೆ.

ಇಂಗ್ಲೆಂಡ್ ಚೇಸ್: ಭಾರತ ಎ ತಂಡ ನೀಡಿದ್ದ 305 ರನ್ ಗಳ ಗುರಿಯನ್ನು 48.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಮಾರ್ಗನ್ ಪಡೆ ಗೆಲುವು ಸಾಧಿಸಿದೆ. ಸ್ಯಾಮ್ ಬಿಲ್ಲಿಂಗ್ಸ್ 93 ರನ್ (85 ಎಸೆತಗಳು, 8‍‍ ಬೌಂಡರಿ)ಹಾಗೂ ಆರಂಭಿಕ ಆಟಗಾರ ಜಾಸನ್ ರಾಯ್ 57 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಿದರು.[ಏಕದಿನ, ಟಿ20 ಸರಣಿಗೆ ಫುಲ್ ಗೈಡ್]

ಇಂಡಿಯಾ ಎ ಪರ ಚೈನಾಮನ್ ಬೌಲರ್ ಕುಲದೀಪ್ ಯಾದವ್ 10 ಓವರ್ ಗಳಲ್ಲಿ 60 ರನ್ನಿತ್ತು 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಾಹಲ್ ಗೆ ತಲಾ ಒಂದು ವಿಕೆಟ್ ಲಭಿಸಿತು.

MS Dhoni loses toss in last match as captain

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ಅಂಬಟಿ ರಾಯುಡು ಆಕರ್ಷಕ ಶತಕ ದಾಖಲಿಸಿದರು. 100 ರನ್ (97 ಎಸೆತಗಳು, 11 ಬೌಂಡರಿ, 1ಸಿಕ್ಸರ್) ಗಳಿಸಿ ನಿವೃತ್ತರಾದರು. ಶಿಖರ್ ಧವನ್, ಧೋನಿ ಹಾಗೂ ಯುವರಾಜ್ ಅರ್ಧಶತಕ ಗಳಿಸಿದರು.

ಇಂಗ್ಲೆಂಡ್ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜನವರಿ 12 ರಂದು ಅಜಿಂಕ್ಯ ರಹಾನೆ ನಾಯಕತ್ವದ ತಂಡದ ವಿರುದ್ಧ ಆಡಲಿದೆ.

[ತಂಡ ಪ್ರಕಟ, ಕೊಹ್ಲಿ ನಾಯಕ, ಯುವರಾಜ್ ಇನ್]
ಟಾಸ್: ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು (ಜನವರಿ 10) ಧೋನಿ ಟಾಸ್ ಸೋತಿದ್ದು, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಎಂಎಸ್ ಧೋನಿ (ನಾಯಕ) ಶಿಖರ್ ಧವನ್, ಮನ್ದೀಪ್ ಸಿಂಗ್, ಅಂಬಟಿ ರಾಯುಡು, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಸಂಜು ಸಾಮ್ಸನ್, ಕುಲದೀಪ್, ಯಜುವೇಂದ್ರ ಚಾಹಲ್, ಆಶೀಶ್ ನೆಹ್ರಾ, ಮೋಹಿತ್ ಶರ್ಮ, ಎಸ್ ಕೌಲ್.

ಇಯಾನ್ ಮಾರ್ಗನ್(ನಾಯಕ), ಮೋಯಿನ್ ಅಲಿ, ಜಾನಿ ಬೈರ್ಸ್ಟೊ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಅಲೆಕ್ಸ್ ಹೇಲ್ಸ್, ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್.

35 ವರ್ಷ ವಯಸ್ಸಿನ ಧೋನಿ ಅವರು ಜನವರಿ 4ರಂದು ಏಕದಿನ ಹಾಗೂ ಟಿ20 ನಾಯಕತ್ವ ಹುದ್ದೆಯಿಂದ ಕೆಳಗಿಳಿದಿದ್ದು, ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು ಇವರ ನಾಯಕತ್ವದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ರಣಜಿಯಲ್ಲಿ ಜಾರ್ಖಂಡ್ ತಂಡದ ನಾಯಕರಾಗಿ ಮುಂದುವರೆಯುವ ಸಾಧ್ಯತೆಯಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿ ಜನವರಿ 15ರಂದು ಆರಂಭವಾಗಲಿದೆ. ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನ ವಾಹಿನಿಗಳಲ್ಲಿ ಎಲ್ಲಾ ಪಂದ್ಯಗಳ ನೇರ ಪ್ರಸಾರ ನೋಡಬಹುದು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mahendra Singh Dhoni's last game as captain of an Indian side ended in defeat here tonight (January 10) at the Brabourne Stadium
Please Wait while comments are loading...