2ನೇ ಅಭ್ಯಾಸ ಪಂದ್ಯ : ಇಂಗ್ಲೆಂಡ್ ವಿರುದ್ಧ ಇಂಡಿಯಾ ಎಗೆ ಜಯ

Posted By:
Subscribe to Oneindia Kannada

ಮುಂಬೈ, ಜನವರಿ 12: ಇಂಡಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 283ರನ್ ಟಾರ್ಗೆಟ್ ನೀಡಿತ್ತು. ರಹಾನೆ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಗುರಿಯನ್ನು ಸುಲಭವಾಗಿ ತಲುಪಿತು.

283 ರನ್ ಚೇಸ್ ಮಾಡಿದ ರಹಾನೆ ಪಡೆ 39.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಅಜಿಂಕ್ಯ ರಹಾನೆ 91, ಜಾಕ್ಸನ್ ಹಾಗೂ ರಿಷಬ್ ಪಂತ್ 59(36 ಎಸೆತಗಳು) ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾರ್ಗನ್ ಪಡೆ ಉತ್ತಮ ಮೊತ್ತ ಪೇರಿಸಿದರೂ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಇಂಡಿಯಾ ಎ ಪರ ಆಫ್ ಸ್ಪಿನ್ನರ್ ಪರ್ವೇಜ್ ರಸೂಲ್ ಮೂರು ವಿಕೆಟ್ ಪಡೆದು ರನ್ ಗತಿಗೆ ಬ್ರೇಕ್ ಹಾಕಿದರು. ಉಳಿದಂತೆ, ಅಶೋಕ್ ದಿಂಡಾ, ಶಬಾಜ್ ನದೀಂ ತಲಾ ಎರಡು ವಿಕೆಟ್ ಕಿತ್ತಿದ್ದಾರೆ. [ಪಂದ್ಯದ ಸ್ಕೋರ್ ಕಾರ್ಡ್]

2nd warm-up one-day: England win toss, opt to bat against India A

ಇಂಡಿಯಾ ಎ: ಅಜಿಂಕ್ಯ ರಹಾನೆ(ನಾಯಕ) ರಿಷಬ್ ಪಂತ್, ಸುರೇಶ್ ರೈನಾ, ದೀಪಕ್ ಹೂಡಾ, ಇಶಾನ್ ಕಿಶಾನ್, ಎಸ್ ಜಾಕ್ಸನ್, ವಿ ಶಂಕರ್, ನದೀಮ್, ಪರ್ವೇಜ್ ರಸೂಲ್, ವಿನಯ್ ಕುಮಾರ್, ಪ್ರದೀಪ್ ಸಂಗ್ವಾನ್, ಅಶೋಕ್ ದಿಂಡಾ

ಇಂಗ್ಲೆಂಡ್ : ಇಯಾನ್ ಮಾರ್ಗನ್(ನಾಯಕ), ಮೋಯಿನ್ ಅಲಿ, ಜಾನಿ ಬೈರ್ಸ್ಟೊ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಅಲೆಕ್ಸ್ ಹೇಲ್ಸ್, ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿ ಜನವರಿ 15ರಂದು ಆರಂಭವಾಗಲಿದೆ. ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನ ವಾಹಿನಿಗಳಲ್ಲಿ ಎಲ್ಲಾ ಪಂದ್ಯಗಳ ನೇರ ಪ್ರಸಾರ ನೋಡಬಹುದು.

ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಕೂಡಾ ಬ್ರಬೋರ್ನ್ ಸ್ಟೇಡಿಯಂನಲ್ಲಿ ಜನವರಿ 10ರಂದು ನಡೆಯಿತು. ಎಂಎಸ್ ಧೋನಿ ತಮ್ಮ ನಾಯಕತ್ವದ ಕೊನೆ ಪಂದ್ಯದಲ್ಲಿ ಟಾಸ್ ಸೋತಿದ್ದಲ್ಲದೆ ಪಂದ್ಯ ಕೂಡಾ ಸೋತರು. ಇಂಡಿಯಾ ಎ ಒಡ್ಡಿದ್ದ 305 ರನ್ ಗುರಿಯನ್ನು ತಲುಪಿದ ಇಂಗ್ಲೆಂಡ್ 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Skipper Ajinkya Rahane, young Rishabh Pant struck brilliant fifties as India A registered a convincing six-wicket win over England in in the second warm-up one day match at Brabourne Stadium here on Thursday (Jan 12).
Please Wait while comments are loading...