ಯುವರಾಜ್ ಸಿಂಗ್ ಹೊಸ ಬ್ರ್ಯಾಂಡ್ ಭರ್ಜರಿ ಓಪನಿಂಗ್

Posted By:
Subscribe to Oneindia Kannada

ನವದೆಹಲಿ, ಸೆ. 04: ಹಿರಿಯ ಕ್ರಿಕೆಟರ್ ಯುವರಾಜ್ ಸಿಂಗ್ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಜವಳಿ ಉದ್ಯಮದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಯುವಿ, ತಮ್ಮದೇ ಆದ 'ವೈಡಬ್ಲ್ಯೂಸಿ ಫ್ಯಾಷನ್' ವಸ್ತ್ರ ವಿನ್ಯಾಸ ಬ್ರ್ಯಾಂಡ್ ಗೆ ಚಾಲನೆ ನೀಡಿದ್ದಾರೆ.

ಶನಿವಾರ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಗಳು, ಕ್ರಿಕೆಟರ್ ಗಳು ಉಪಸ್ಥಿತರಿದ್ದರು. ಈ ಬ್ರ್ಯಾಂಡ್ ಉತ್ಪನ್ನಗಳ ಮಾರಾಟದಿಂದ ಬರುವ ಲಾಭವನ್ನು ತಮ್ಮ ಸರ್ಕಾರೇತರ ಸಂಸ್ಥೆ (ಎನ್ ಜಿಒ) YouWeCan(ವೈಡಬ್ಲ್ಯೂಸಿ) ಗೆ ಸಂಪೂರ್ಣವಾಗಿ ನೀಡಲು ಯುವರಾಜ್ ನಿರ್ಧರಿಸಿದ್ದಾರೆ.

ವರ್ಣರಂಜಿತ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಅರ್ಜುನ್ ರಾಮ್ ಪಾಲ್, ಫರ್ಹಾನ್ ಆಖ್ತರ್, ಫರ್ಹಾ ಖಾನ್ ಮುಂತಾದ ಬಿ ಟೌನ್ ತಾರೆಗಳು ಆಗಮಿಸಿದ್ದರು.

ಕ್ರಿಕೆಟ್ ಜಗತ್ತಿನಿಂದ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ರೋಹಿತ್ ಶರ್ಮ, ಜಹೀರ್ ಖಾನ್, ಡ್ವಾಯ್ನ್ ಬ್ರಾವೊ, ಇಶಾಂತ್ ಶರ್ಮ, ಮೊಹಮ್ಮದ್ ಕೈಫ್, ಕ್ರೀಡಾ ಜಗತ್ತಿನಿಂದ ಒಲಿಂಪಿಯನ್ ಸುಶೀಲ್ ಕುಮಾರ್, ಹಾಕಿ ತಾರೆ ಪಿಆರ್ ಶ್ರೀಜೇಶ್ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಹೊಚ್ಚ ಹೊಸ ದಿರಿಸು ತೊಟ್ಟು ಬೆಕ್ಕಿನ ನಡಿಗೆ ಇಟ್ಟ ತಾರೆಗಳು ನಂತರ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹೊಸ ಬ್ರ್ಯಾಂಡ್ ಬಗ್ಗೆ ಸಂತಸದಿಂದ ಟ್ವೀಟ್ ಮಾಡಿದ್ದಾರೆ. ಚಿತ್ರಕೃಪೆ: ಸೆಹ್ವಾಗ್ ಟ್ವಿಟ್ಟರ್ ಖಾತೆ

'ವೈಡಬ್ಲ್ಯೂಸಿ ಫ್ಯಾಷನ್' ವಸ್ತ್ರ ವಿನ್ಯಾಸ ಬ್ರ್ಯಾಂಡ್

'ವೈಡಬ್ಲ್ಯೂಸಿ ಫ್ಯಾಷನ್' ವಸ್ತ್ರ ವಿನ್ಯಾಸ ಬ್ರ್ಯಾಂಡ್

ಈ ಬ್ರ್ಯಾಂಡ್ ಉತ್ಪನ್ನಗಳ ಮಾರಾಟದಿಂದ ಬರುವ ಲಾಭವನ್ನು ತಮ್ಮ ಸರ್ಕಾರೇತರ ಸಂಸ್ಥೆ (ಎನ್ ಜಿಒ) YouWeCan(ವೈಡಬ್ಲ್ಯೂಸಿ) ಗೆ ಸಂಪೂರ್ಣವಾಗಿ ನೀಡಲು ಯುವರಾಜ್ ನಿರ್ಧರಿಸಿದ್ದಾರೆ.

ಯುವರಾಜ್ ಸಿಂಗ್ ಬೆಕ್ಕಿನ ನಡಿಗೆ

ಹೊಸ ಬ್ರ್ಯಾಂಡ್ ನ ಹೊಸ ವಿನ್ಯಾಸದ ದಿರಿಸಿನಲ್ಲಿ ಯುವರಾಜ್ ಸಿಂಗ್

ನೇಹಾ ಧೂಪಿಯಾರಿಂದ ಶುಭ ಹಾರೈಕೆ

ನಟಿ ನೇಹಾ ಧೂಪಿಯಾರಿಂದ ಯುವರಾಜ್ ಸಿಂಗ್ ಗೆ ಶುಭ ಹಾರೈಕೆ.

ಅರ್ಜುನ್ ರಾಮ್ ಪಾಲ್ ರಿಂದ ವಿಶ್

ಸಮಾರಂಭಕ್ಕೆ ಆಗಮಿಸಿದ್ದ ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ರಿಂದ ವಿಶ್

ಡಿಜೆ ಬ್ರಾವೋ

ಡಿಜೆ ಬ್ರಾವೋ ಹಾಗೂ ಕ್ರಿಸ್ ಗೇಲ್ ಅವರು ಯುವರಾಜ್ ಸಿಂಗ್ ಗೆ ಶುಭ ಹಾರೈಸಲು ವೆಸ್ಟ್ ಇಂಡೀಸ್ ನಿಂದ ಬಂದಿದ್ದರು.

ಇರ್ಫಾನ್ ಪಠಾಣ್ ಜತೆ ಯುವರಾಜ್

ಗೆಳೆಯ ಇರ್ಫಾನ್ ಪಠಾಣ್ ಜತೆ ಯುವರಾಜ್

ಬಿಗ್ ಬಿ ಜತೆ ಯುವಿ

ಬಿಗ್ ಬಿ ಅಮಿತಾಬ್ ಅವರು ಕೂಡಾ ಯುವರಾಜ್ ಸಿಂಗ್ ಅವರ ಹೊಸ ಬ್ರ್ಯಾಂಡ್ ಗೆ ಮನ ಸೋತಿರುವುದಾಗಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran India cricketer Yuvraj Singh launched his own clothing line 'YWC Fashion' in a star-studded night including Bollywood actors and cricketers on Saturday (Sept 3).
Please Wait while comments are loading...