ಜಮೈಕಾದಲ್ಲಿ ಟೀಂ ಇಂಡಿಯಾ ಕಸರತ್ತು ಹೇಗೆ ನಡೆದಿದೆ?

Posted By:
Subscribe to Oneindia Kannada

ಕಿಂಗ್ಸ್ಟನ್, ಜುಲೈ 28: ಮ್ಯಾಚ್ ಇಲ್ಲದಿದ್ದಾಗ ಟೀಂ ಇಂಡಿಯಾದ ಆಟಗಾರರು ವಿಡಿಯೋ ಗೇಮ್ಸ್ ಆಡುತ್ತಾ, ರೆಸ್ಟೋರೆಂಟ್ ಸುತ್ತುವ ವಿಷಯ ಓದಿರಬಹುದು. ಈಗ ಬಿರು ಬಿಸಿಲಿನಲ್ಲಿ ಕಿಂಗ್ಸ್ ಸ್ಟನ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಪಡೆ ಬೆವರಿಳಿಸಿದ ಚಿತ್ರಗಳು ಇಲ್ಲಿವೆ ನೋಡಿ...

ಬುಧವಾರ(ಜುಲೈ 27) ಬೆಳಗ್ಗೆಯಿಂದಲೇ ನೆಟ್ ಪ್ರಾಕ್ಟೀಸ್ ಶುರುವಾಗಿದೆ. ಜಮೈಕಾಕ್ಕೆ ಬಂದಿಳಿದ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ರಾಯಭಾರಿ ಕಚೇರಿ ಹಾಗೂ ಭಾರತೀಯ ಮೂಲದ ಕುಟುಂಬದವರಿಂದ ಆತ್ಮೀಯ ಸ್ವಾಗತ ಸಿಕ್ಕಿದೆ.

ಇದಾದ ಬಳಿಕ ಆಟಗಾರರು ಜಿಮ್ ನಲ್ಲಿ ಹೆಚ್ಚು ಹೊತ್ತು ಕಾಲ ಕಳೆದಿದ್ದಾರೆ. ನಂತರ ಮೈದಾನದಲ್ಲಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್ ತರಬೇತಿ ನಿರಂತರವಾಗಿ ಸಾಗಿತು.[ಮ್ಯಾಚ್ ಇಲ್ಲದಾಗ ಟೀಂ ಇಂಡಿಯಾ ಆಟಗಾರರು ಏನ್ಮಾಡ್ತಾರೆ?]

ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈಗ ಗಾಯ ಗುಣಮುಖವಾಗಿದ್ದು ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಂಡಿದ್ದರು.[ಯಾಸಿರ್ ಕೆಳಕ್ಕೆ ಹಾಕಿ ಮೇಲಕ್ಕೇರಿದ ಅಶ್ವಿನ್]

ಅಂಟಿಗ್ವಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿತ್ತು. ಜುಲೈ 30 ರಂದು ಕಿಂಗ್ಸ್ ಸ್ಟನ್ ನ ಸಬೀನಾ ಪಾರ್ಕ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ

ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ

ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಆಟಗಾರರು ಒಳಾಂಗಣ ಹಾಗೂ ಹೊರಂಗಣ ತರಬೇತಿ ಪಡೆದರು.

ವೃದ್ಧಿಮಾನ್ ಸಹಾ ಕೀಪಿಂಗ್

ವೃದ್ಧಿಮಾನ್ ಸಹಾ ಕೀಪಿಂಗ್

ವೃದ್ಧಿಮಾನ್ ಸಹಾ ಅವರು ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವ ಚಿತ್ರ

ಅಜಿಂಕ್ಯ ರಹಾನೆ ಎಂಟ್ರಿ

ಅಜಿಂಕ್ಯ ರಹಾನೆ ಎಂಟ್ರಿ

ಸಬೀನಾ ಪಾರ್ಕಿನ ಪ್ರಾಕ್ಟೀಸ್ ಪಿಚ್ ಕಡೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ತೆರಳುತ್ತಿದ್ದಾರೆ.

ಪೂಜಾರಾ ಹಾಗೂ ಶಮಿ ಕಸರತ್ತು

ಪೂಜಾರಾ ಹಾಗೂ ಶಮಿ ಕಸರತ್ತು

ಚೇತೇಶ್ವರ್ ಪೂಜಾರಾ ಹಾಗೂ ಮೊಹಮ್ಮದ್ ಶಮಿ ಅವರು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು ಕಂಡು ಬಂದಿತು.

ಜಮೈಕಾದಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಸ್ವಾಗತ

ಜಮೈಕಾದಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಸ್ವಾಗತ

ಜಮೈಕಾದಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಸ್ವಾಗತ ಸಿಕ್ಕಿತು. ಚಿತ್ರಗಳ ಕೃಪೆ: ಬಿಸಿಸಿಐ ಟ್ವಿಟ್ಟರ್


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian cricket team hit the nets at Sabina Park on the Wednesday (July 27) morning, hours after landing in Kingston, and followed a rigorous exercise to get used to the hot and humid conditions.
Please Wait while comments are loading...