ಚಿತ್ರಗಳಲ್ಲಿ ನೋಡಿ: ಕೊಹ್ಲಿ- ರಹಾನೆ ಜುಗಲ್ ಬಂದಿ ಆಟ

Posted By:
Subscribe to Oneindia Kannada

ಇಂದೋರ್, ಆಕ್ಟೋಬರ್ 10: ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ಉತ್ತಮ ಬ್ಯಾಟಿಂಗ್ ಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಬರುತ್ತಿದೆ. ಇವರಿಬ್ಬರ ಜುಗಲ್ ಬಂದಿಯಿಂದ ನ್ಯೂಜಿಲೆಂಡ್ ವಿರುದ್ಧದ ಕೊನೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ 557/5 ಸ್ಕೋರ್ ಮಾಡಲು ಸಾಧ್ಯವಾಯಿತು.

ಪಂದ್ಯದ ಸ್ಕೋರ್ ಕಾರ್ಡ್

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಎರಡನೇ ಬಾರಿಗೆ ದ್ವಿಶತಕ ಬಾರಿಸಿದರೆ, ರಹಾನೆ ಅವರು 12 ರನ್​ಗಳಿಂದ 200 ಗಡಿ ಮಿಸ್ ಮಾಡಿಕೊಂಡರು. 4ನೇ ವಿಕೆಟ್​ಗೆ ಕೊಹ್ಲಿ-ರಹಾನೆ ದಾಖಲೆಯ 365 ರನ್ ಜತೆಯಾಟದ ಪ್ರದರ್ಶಿಸಿದರು.[ಡಬ್ಬಲ್ ಸೆಂಚುರಿ ಬಾರಿಸಿ ಬ್ರಾಡ್ಮನ್ ಸಮಕ್ಕೆ ನಿಂತ ಕೊಹ್ಲಿ]

ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ 3 ವಿಕೆಟ್​ಗೆ 267 ರನ್ ಮೊತ್ತದಿಂದ ದಿನ ಆರಂಭಿಸಿದ ಟೀಂ ಇಂಡಿಯಾ 5 ವಿಕೆಟ್​ಗೆ 557 ರನ್ ಪೇರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೊಹ್ಲಿ 211ರನ್ ಗಳಿಸಿ ಔಟಾದರೆ, ರಹಾನೆ 188ರನ್ ಗಳಿಸಿದರು. ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 117ರನ್ ಗಳಿಸಿದೆ.

ರೋಹಿತ್ ಹಾಗೂ ಜಡೇಜ ಬೊಂಬಾಟ

ರೋಹಿತ್ ಹಾಗೂ ಜಡೇಜ ಬೊಂಬಾಟ

ರೋಹಿತ್ ಶರ್ಮ 63 ಎಸೆತಗಳಲ್ಲಿ 51 ಹಾಗೂ ರವೀಂದ್ರ ಜಡೇಜ 17 ರನ್ ಗಳಿಸಿ ಕೊನೆ ಕ್ಷಣದಲ್ಲಿ ರನ್ ಗತಿ ಹೆಚ್ಚಿಸಲು ನೆರವಾದರು.

ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ

ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ

ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರದಂದು ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ ದಾಖಲಿಸಿದರು. ಹೋಳ್ಕರ್ ಮೈದಾನದಲ್ಲಿ ಕೊಹ್ಲಿ ಅವರು ವೃತ್ತಿ ಬದುಕಿನ ಎರಡನೇ ದ್ವಿಶತಕ ಗಳಿಸಿದ್ದು, ಇದು ಭಾರತ ತಂಡದ ನಾಯಕನೊಬ್ಬನ ಮಹತ್ಸಾಧನೆಯಾಗಿದೆ.

112 ಓವರ್, 471 ನಿಮಿಷ ಬ್ಯಾಟಿಂಗ್

112 ಓವರ್, 471 ನಿಮಿಷ ಬ್ಯಾಟಿಂಗ್

ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್​ಗೆ 112 ಓವರ್​ಗಳ ಕಾಲ ಬ್ಯಾಟಿಂಗ್ ಮಾಡಿದರು. ಈ ಜೋಡಿ ಪೇರಿಸಿದ 365 ರನ್ 4ನೇ ವಿಕೆಟ್​ಗೆ ಈವರೆಗೂ ಭಾರತದ ಗರಿಷ್ಟ ರನ್ ಜತೆಯಾಟ ಸಾಧಿಸಿದರು.

79 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ

79 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ

ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ ರಹಾನೆ (188 ರನ್, 381 ಎಸೆತ, 18 ಬೌಂಡರಿ, 4 ಸಿಕ್ಸರ್) ವೃತ್ತಿಜೀವನದ 8ನೇ ಟೆಸ್ಟ್ ಶತಕ

103ರನ್​ಗಳಿಂದ ಬ್ಯಾಟಿಂಗ್ ಆರಂಭ

103ರನ್​ಗಳಿಂದ ಬ್ಯಾಟಿಂಗ್ ಆರಂಭ

103ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ವಿರಾಟ್ ಕೊಹ್ಲಿ 211 ರನ್(366 ಎಸೆತ, 20‍X4) ತವರಿನ ನೆಲದಲ್ಲಿ ಮೊದಲ ದ್ವಿಶತಕದ ಸಾಧನೆ ಹಾಗೂ ನಾಯಕನಾಗಿ ಇದೇ ವರ್ಷ 2 ದ್ವಿಶತಕ ಸಿಡಿಸಿದ್ದಾರೆ.

ದಿನದಾಟದ ಅಂತ್ಯದಲ್ಲಿ 9 ಓವರ್ ಬ್ಯಾಟಿಂಗ್

ದಿನದಾಟದ ಅಂತ್ಯದಲ್ಲಿ 9 ಓವರ್ ಬ್ಯಾಟಿಂಗ್

ದಿನದಾಟದ ಅಂತ್ಯದಲ್ಲಿ 9 ಓವರ್ ಬ್ಯಾಟಿಂಗ್ ಮಾಡಿರುವ ಕಿವೀಸ್ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತು. 17 ರನ್ ಬಾರಿಸಿರುವ ಮಾರ್ಟಿನ್ ಗುಪ್ಟಿಲ್ ಹಾಗೂ 6 ರನ್ ಬಾರಿಸಿರುವ ಟಾಮ್ ಲಾಥಮ್ ಕ್ರೀಸ್ ನಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian skipper Virat Kohli hammered a listless New Zealand attack with a superlative double hundred as the hosts piled up a mammoth 557 for five on the second day of the third cricket Test here.
Please Wait while comments are loading...