ಟೀಂ ಇಂಡಿಯಾಕ್ಕೆ ಕುಂಬ್ಳೆ ಗುರು, ಬೆಂಗಳೂರಲ್ಲಿ ಅಭ್ಯಾಸ ಶುರು

Written By:
Subscribe to Oneindia Kannada

ಬೆಂಗಳೂರು, ಜೂನ್, 30: ಹೊಸ ಗುರು ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಆದಿಯಾಗಿ ಎಲ್ಲರೂ ಪಾಲ್ಗೊಂಡಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.[ಟೀಂ ಇಂಡಿಯಾ ಕೋಚ್ ಕುಂಬ್ಳೆ ಕನ್ನಡದಲ್ಲಿ ಉತ್ತರಿಸಿದಾಗ]

ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ನೇಮಕವಾದ ಮೇಲೆ ಹಲವಾರು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಜಿಂಬಾಬ್ವೆ ಜಯದಿಂದ ಮರಳಿರುವ ತಂಡದ ಅಭ್ಯಾಸವನ್ನು ಚಿತ್ರದಲ್ಲಿ ನೋಡಿಕೊಂಡು ಬನ್ನಿ...(ಪಿಟಿಐ ಚಿತ್ರಗಳು)

ವಿರಾಟ್ ಹಾಸ್ಯ ಚಟಾಕಿ

ವಿರಾಟ್ ಹಾಸ್ಯ ಚಟಾಕಿ

ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ಜತೆಗಾರರೊಂದಿಗೆ ಹಾಸ್ಯ ಚಟಾಕಿ ಹಾರಿಸಿದ್ದು.

ಹೀಗೆ ಬೌಲಿಂಗ್ ಮಾಡಬೇಕು

ಹೀಗೆ ಬೌಲಿಂಗ್ ಮಾಡಬೇಕು

ಹೊಸ ಕೋಚ್ ಅನಿಲ್ ಕುಂಬ್ಳೆ ತಮ್ಮ ಹೊಸ ಶಿಷ್ಯರಿಗೆ ಬೌಲಿಂಗ್ ಪಾಠ ಹೇಳಿಕೊಟ್ಟರು.

ಕ್ಯಾಚ್ ಬಿಡಲ್ಲ

ಕ್ಯಾಚ್ ಬಿಡಲ್ಲ

ಭಾರತದ ಆರಂಭಿಕ ಶಿಖರ್ ಧವನ್ ಕ್ಯಾಚ್ ಪ್ರಾಕ್ಟೀಸ್ ಮಾಡಿದ ಬಗೆ.

ವಿರಾಟ್ ಗೆ ಯಾರು ಸಾಟಿ?

ವಿರಾಟ್ ಗೆ ಯಾರು ಸಾಟಿ?

ಭಾರತದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿಗೆ ಯಾರು ಸಾಟಿ? ರನ್ ಹೊಳೆಯನ್ನೇ ಹರಿಸುತ್ತ ಬಂದಿರುವ ಕೊಹ್ಲಿ ಐಪಿಎಲ್ ನಲ್ಲಿ ದಾಖಲೆಗಳ ಶಿಖರ ಏರಿದ್ದರು.

 ಹಿರಿ-ಕಿರಿಯ

ಹಿರಿ-ಕಿರಿಯ

ಇಶಾಂತ್ ಶರ್ಮಾ ಮತ್ತು ಕೊಹ್ಲಿ ಪರಸ್ಪರ ಮಾತುಕತೆಯಲ್ಲಿ ತೊಡಗಿಕೊಂಡಾಗ ಸೆರೆಸಿಕ್ಕ ಚಿತ್ರ.

ಹೇಗೆ ಬೌಲ್ ಮಾಡಬೇಕು

ಹೇಗೆ ಬೌಲ್ ಮಾಡಬೇಕು

ಹೊಸ ಗುರು ಅನಿಲ್ ಕುಂಬ್ಳೆ ಅವರಿಂದ ಪಾಠ ಹೇಳಿಸಿಕೊಳ್ಳುತ್ತಿರುವ ವೇಗದ ಬೌಲರ್ ಉಮೇಶ್ ಯಾದವ್.

ರವೀಂದ್ರ ಉಲ್ಲಾಸ

ರವೀಂದ್ರ ಉಲ್ಲಾಸ

ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದು ಹೀಗೆ.

ಸಮಾಗಮ

ಸಮಾಗಮ

ಅಭ್ಯಾಸದ ವೇಳೆ ಕಾಣಿಸಿಕೊಂಡ ಮೊಹಮದ್ ಶಮಿ, ಮುರಳಿ ವಿಜಯ್, ಶ್ರದುಲ್ ಠಾಕೂರ್ ಮತ್ತು ಅಮಿತ್ ಮಿಶ್ರಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The newly-appointed head coach, Anil Kumble got into work mode and kicked off Team India's preparations for West Indies tour in Bengaluru. Virat Kohli-led India tour West Indies for a four-match Test series starting July 21.
Please Wait while comments are loading...