ಚಿತ್ರಗಳಲ್ಲಿ : ಟೀಂ ಇಂಡಿಯಾಕ್ಕೆ ಮಿಯಾಮಿ ಹೀಟ್ಸ್ ಚಾಲೆಂಜ್

Posted By:
Subscribe to Oneindia Kannada

ಫ್ಲೋರಿಡಾ, ಆಗಸ್ಟ್ 25: ಅಮೆರಿಕದ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವಾಡಲು ಬಂದಿರುವ ಟೀಂ ಇಂಡಿಯಾದ ಆಟಗಾರರಿಗೆ ಬಾಸ್ಕೆಟ್ ಬಾಲ್ ಚಾಂಪಿಯನ್ ತಂಡದಿಂದ ಚಾಲೆಂಜ್ ಹಾಕಲಾಗಿದೆ.

ಅದರಲ್ಲೂ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಗೆ ಬೌಲಿಂಗ್ ಮಾಡುವುದನ್ನು ಕಲಿಸಿಕೊಡಿ ಎಂದು ಎನ್ ಬಿಎ ಸ್ಟಾರ್ ಗಳು ಕೇಳಿಕೊಂಡಿದ್ದಾರೆ.[ಚಿತ್ರಗಳು: ಫ್ಲೋರಿಡಾದಲ್ಲಿ ಟಿ20 ಆಡಲು ಬಂದ ಧೋನಿ ಪಡೆ]

ಚಾಂಪಿಯನ್ ತಂಡ ಮಿಯಾಮಿ ಹೀಟ್ಸ್ ಜತೆ ಟೀಂ ಇಂಡಿಯಾದ ಆಟಗಾರರು ಬಾಸ್ಕೆಟ್ ಬಾಲ್ ಆಡಿ ನಲಿದಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈಗ ಅಮೆರಿಕದಲ್ಲಿ ವಿಂಡೀಸ್ ವಿರುದ್ಧ ಟಿ20 ಆಡಲು ಫ್ಲೋರಿಡಾಗೆ ಬಂದಿಳಿದ್ದು, ಕ್ರಿಕೆಟ್ ಮೈದಾನಕ್ಕೆ ಕಾಲಿಡುವುದಕ್ಕೂ ಮುನ್ನ ಬಾಸ್ಕೆಟ್ ಬಾಲ್ ಅಂಗಳಕ್ಕೆ ಎಂಟ್ರಿಕೊಟ್ಟಿದೆ.

ಎಂಎಸ್ ಧೋನಿ ನೇತೃತ್ವದ ಪಡೆ ಎರಡು ಟಿ20 ಪಂದ್ಯ ಆಡಲು ಸಜ್ಜಾಗಿದೆ. ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 27 ಮತ್ತು 28 ರಂದು ಟಿ20 ಪಂದ್ಯ ನಡೆಯಲಿದೆ. ಇದೇ ಮೊದಲ ಬಾರಿ ಅಮೆರಿಕದಲ್ಲಿ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಆಡುತ್ತಿವೆ.

ಎನ್ ಬಿಎ ಸ್ಟಾರ್ ಗಳಿಂದ ಟೀಂ ಇಂಡಿಯಾಕ್ಕೆ ಸ್ವಾಗತ

ಎನ್ ಬಿಎ ಸ್ಟಾರ್ ಗಳಿಂದ ಟೀಂ ಇಂಡಿಯಾಕ್ಕೆ ಸ್ವಾಗತ

ಟೀಂ ಇಂಡಿಯಾದ ಆಟಗಾರರಿಗೆ ಎನ್ ಬಿಎ ಸ್ಟಾರ್ ಗಳಾದ ಟೈಲರ್ ಜಾನ್ಸನ್, ಡಿ ಏಂಜೆಲೋ ರಸೆಲ್, ಬ್ರಿಯಾಂಟ್ ವೆಬರ್ ರಿಂದ ಸ್ವಾಗತ ಸಿಕ್ಕಿದೆ.

ಬಾಸ್ಕೆಟ್ ಬಾಲ್ ಕೌಶಲ್ಯ ಪ್ರದರ್ಶನ

ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಭುವನೇಶ್ವರ್ ಕುಮಾರ್ ಅವರು ತಮ್ಮ ಬಾಸ್ಕೆಟ್ ಬಾಲ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಆರ್ ಆಶ್ವಿನ್ ನನಗೆ ಬೌಲಿಂಗ್ ಹೇಳಿಕೊಡಿ

ಆರ್ ಆಶ್ವಿನ್ ನನಗೆ ಬೌಲಿಂಗ್ ಹೇಳಿಕೊಡಿ ನಾನು ನಿಮಗೆ ಬಾಲ್ ಪಾಸ್ ಮಾಡುವುದನ್ನು ಕಲಿಸುತ್ತೇನೆ ಎಂದ ರಸೆಲ್.

ಚಾಂಪಿಯನ್ ಗಳ ಭೇಟಿ

ಚಾಂಪಿಯನ್ ಟೀಂ ಇಂಡಿಯಾ ಹಾಗೂ ಮಿಯಾಮಿ ಹೀಟ್ಸ್ ಭೇಟಿ

ರಾಕ್ ಸ್ಟಾರ್ ಜಡೇಜ ನೀಡಿದ ವಿಡಿಯೋ ಸಂದೇಶ

ರಾಕ್ ಸ್ಟಾರ್ ಜಡೇಜ ನೀಡಿದ ವಿಡಿಯೋ ಸಂದೇಶ ಇಲ್ಲಿದೆ ನೋಡಿ.

ಅಮೆರಿಕಕ್ಕೆ ಸ್ವಾಗತ ಎಂದ ಬಾಸ್ಕೆಟ್ ಬಾಲ್ ಸ್ಟಾರ್

ಅಮೆರಿಕಕ್ಕೆ ಸ್ವಾಗತ ಎಂದ ಬಾಸ್ಕೆಟ್ ಬಾಲ್ ಸ್ಟಾರ್ ಗಳು

ವೀಕೆಂಡ್ ಕ್ರಿಕೆಟ್ ಗೆ ಶುಭಹಾರೈಕೆ

ವೀಕೆಂಡ್ ಕ್ರಿಕೆಟ್ ಗೆ ಶುಭಹಾರೈಕೆ ಎಂದ ಬಾಸ್ಕೆಟ್ ಬಾಲ್ ಆಟಗಾರರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Team India arrived in the USA to play their first ever international cricket match on American soil, which is passionate about games like baseball and basketball, they got a chance to interact with basketball team Miami Heats.
Please Wait while comments are loading...