ಕೊಡವ ಶೈಲಿಯಲ್ಲಿ ರಾಬಿನ್ ಉತ್ತಪ್ಪ- ಶೀತಲ್ ಮದುವೆ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಮಾರ್ಚ್ 14: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೊಡಗಿನ ರಾಬಿನ್ ಉತ್ತಪ್ಪ ಅವರು ಮಡಿಕೇರಿಯಲ್ಲಿ ಸಾಂಪ್ರದಾಯಿಕ ಕೊಡವ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇವರ ವಿವಾಹ ಆರತಕ್ಷತೆ ಸಮಾರಂಭ ವಿಜೃಂಭಣೆಯಿಂದ ನೆರವೇರಿತ್ತು.

ದೀರ್ಘಕಾಲದ ಗೆಳತಿ ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರೊಂದಿಗೆ ಭಾನುವಾರ ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೊಡಗಿನ ಸಂಪ್ರದಾಯದಂತೆ ಹಸೆಮಣೆಗೇರಿದರು. [ರಾಬಿನ್ ಉತ್ತಪ್ಪ-ಶೀತಲ್ ಆರತಕ್ಷತೆ ಚಿತ್ರಗಳು]

ಕೊಡವ ಸಂಪ್ರದಾಯದಂತೆ ಶೀತಲ್ ಅವರನ್ನು ವರಿಸಿಕೊಂಡ ರಾಬಿನ್ ಉತ್ತಪ್ಪ, ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಕುಟುಂಬ ಸದಸ್ಯರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಕಳೆದ ನವೆಂಬರ್ ತಿಂಗಳಿನಲ್ಲಿ ಹೊರ ದೇಶದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಸಂಪ್ರದಾಯದಂತೆ ಸರಳವಾಗಿ ಮದುವೆಯಾಗುವುದಾಗಿ ಈ ಹಿಂದೆಯೇ ಘೊಷಿಸಿಕೊಂಡಿದ್ದರು. ಅಂತರಾಷ್ಟ್ರೀಯ ಆಟಗಾರರಾಗಿರುವ ರಾಬಿನ್ ಕೊಡಗು ಜಿಲ್ಲೆಯಲ್ಲಿ ಹಸೆಮಣೆ ಏರಿರುವುದು ಕ್ರೀಡಾ ಜಿಲ್ಲೆಗೆ ಮತ್ತಷ್ಟು ಮೆರುಗು ತಂದಿದೆ.

ಸುಂಟಿಕೊಪ್ಪದವರಾದ ರಾಬಿನ್ ಉತ್ತಪ್ಪ

ಸುಂಟಿಕೊಪ್ಪದವರಾದ ರಾಬಿನ್ ಉತ್ತಪ್ಪ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದವರಾದ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಹಾಕಿ ರೆಫರಿಯಾಗಿರುವ ವೇಣು ಉತ್ತಪ್ಪ ಮತ್ತು ರೋಸಿ ಉತ್ತಪ್ಪ ದಂಪತಿಗಳ ಸುಪುತ್ರರಾಗಿದ್ದಾರೆ.

ಕರ್ನಾಟಕದ ಹೆಮ್ಮೆಯ ಆಟಗಾರ ರಾಬಿನ್

ಕರ್ನಾಟಕದ ಹೆಮ್ಮೆಯ ಆಟಗಾರ ರಾಬಿನ್

ಕರ್ನಾಟಕ ರಣಜಿ ತಂಡವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದರು. ತದನಂತರದ ದಿನಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಇವರು, ವಿಕೆಟ್ ಕೀಪರ್ ಆಗಿ ಬ್ಯಾಟ್ಸ್ ಮನ್ ಆಗಿ ಐಪಿಎಲ್ ನಲ್ಲೂ ಮಿಂಚಿದ್ದಾರೆ

ಬೆಂಗಳೂರಿನಲ್ಲಿ ಆರತಕ್ಷತೆ ನಡೆದಿತ್ತು

ಬೆಂಗಳೂರಿನಲ್ಲಿ ಆರತಕ್ಷತೆ ನಡೆದಿತ್ತು

ಟೀಂ ಇಂಡಿಯಾ ಹಾಗೂ ಕರ್ನಾಟಕ ತಂಡದ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಟೆನಿಸ್ ಆಟಗಾರ್ತಿ, ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ಮಾರ್ಚ್ 3ರಂದು ಸಂಜೆ ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ನೆರವೇರಿತ್ತು

ಖಾಸಗಿ ಹೋಟೆಲ್ ನಲ್ಲಿ ಸಮಾರಂಭ

ಖಾಸಗಿ ಹೋಟೆಲ್ ನಲ್ಲಿ ಸಮಾರಂಭ

ಕೊಡವ ಸಂಪ್ರದಾಯದಂತೆ ಶೀತಲ್ ಅವರನ್ನು ವರಿಸಿಕೊಂಡ ರಾಬಿನ್ ಉತ್ತಪ್ಪ, ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಕುಟುಂಬ ಸದಸ್ಯರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಗುರು ಹಿರಿಯರಿಗೆ ವಂದಿಸುತ್ತಿರುವ ದಂಪತಿ

ಗುರು ಹಿರಿಯರಿಗೆ ವಂದಿಸುತ್ತಿರುವ ದಂಪತಿ

ಗುರು ಹಿರಿಯರಿಗೆ ವಂದಿಸುತ್ತಿರುವ ರಾಬಿನ್ -ಶೀತಲ್ ದಂಪತಿ.

ಮಾರಿಷಸ್ ನಲ್ಲಿ ನಿಶ್ಚಿತಾರ್ಥವಾಗಿತ್ತು

ಮಾರಿಷಸ್ ನಲ್ಲಿ ನಿಶ್ಚಿತಾರ್ಥವಾಗಿತ್ತು

ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಮಾರಿಷಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡುತ್ತಿದ್ದರು.

ಕೊಡವ ಸಂಪ್ರದಾಯದಂತೆ ಮದುವೆ

ಕೊಡವ ಸಂಪ್ರದಾಯದಂತೆ ಮದುವೆ

ಬೆಂಗಳೂರಿನಲ್ಲಿ ಆರತಕ್ಷತೆ ನಡೆದರೂ ಕೊಡವ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆಯಬೇಕು ಎಂದು ರಾಬಿ ಉತ್ತಪ್ಪ ಬಯಸಿದ್ದರು.

ಕೊಡವ ದಿರಿಸಿನಲ್ಲಿ ಮಿಂಚಿದ ಶೀತಲ್

ಕೊಡವ ದಿರಿಸಿನಲ್ಲಿ ಮಿಂಚಿದ ಶೀತಲ್

ಕೆಂಬಣ್ಣದ ಕೊಡವ ಶೈಲಿ ಸೀರೆ ಧರಿಸಿದ್ದ ಟೆನಿಸ್ ಆಟಗಾರ್ತಿ ಶೀತಲ್

ಕ್ರೈಸ್ತ ಸಂಪ್ರದಾಯದಂತೆ ಆರತಕ್ಷತೆ

ಕ್ರೈಸ್ತ ಸಂಪ್ರದಾಯದಂತೆ ಆರತಕ್ಷತೆ

ಕ್ರೈಸ್ತ ಸಂಪ್ರದಾಯದಂತೆ ಆರತಕ್ಷತೆ ಸಮಾರಂಭದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಜರಿದ್ದರು. ಮಾರ್ಚ್ 13ರಂದು ಕೊಡವ ಸಂಪ್ರದಾಯದ ಪ್ರಕಾರ ವಿವಾಹ ನಡೆಸಲಾಗಿದೆ

ಶೀತಲ್ ಫೋಟೊ ತೆಗೆಯುತ್ತಿರುವ ಬಾಲೆ

ಶೀತಲ್ ಫೋಟೊ ತೆಗೆಯುತ್ತಿರುವ ಬಾಲೆ

ಕೊಡವ ರಾಬಿನ್ ಉತ್ತಪ್ಪ ವರಿಸಿದ ಶೀತಲ್ ಅವರ ಫೋಟೊ ತೆಗೆಯುತ್ತಿರುವ ಬಾಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Robin Uthappa tied the knot with tennis player Sheethal Goutham in traditional Kodava style. Here are the pictures from ceremony.
Please Wait while comments are loading...