ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ

Posted By:
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 18: ಭಾರತ ಕ್ರಿಕೆಟ್ ತಂಡ ಹಾಗೂ ಐಪಿಎಲ್ ನ ಹೊಚ್ಚ ಹೊಸ ತಂಡ ಗುಜರಾತ್ ಲಯನ್ಸ್ ನ ಆಟಗಾರ ರವೀಂದ್ರ ಜಡೇಜ ಅವರು ಏಪ್ರಿಲ್ 17 ರಂದು ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಲಂಕಿ ನನ್ನ ಲಕ್ಕಿ ಗರ್ಲ್ ಎನ್ನುತ್ತಿದ್ದ ಜಡೇಜ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಜಡೇಜ ಅವರು ಮದುವೆಗೆ ಮುನ್ನ ಏಪ್ರಿಲ್ 04 ರಂದು ಭಾವಿ ಪತ್ನಿಯ ತಂದೆಯಿಂದ ಐಷಾರಾಮಿ ಆಡಿ ಕಾರೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದರು. [ಮದ್ವೆ ಮುಂದಿನ ಶಾಸ್ತ್ರ:ಲಕ್ಕಿ ಗರ್ಲ್ ರಿವಾ ಜತೆ ಜಡೇಜ]

28 ರ ಹರೆಯದ ಜಡ್ಡು ಜಾಮ್ ನಗರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಖ್ಯಾತ ಉದ್ಯಮಿಯೊಬ್ಬರ ಪುತ್ರಿ ರಿವಾ ಸೋಲಂಕಿ ಅವರನ್ನು ಸಾಂಪ್ರದಾಯಿಕವಾಗಿ ಕೈ ಹಿಡಿದರು. ಮದುವೆಗೂ ಮುನ್ನ ಹಳದಿ ಕಾರ್ಯಕ್ರಮ, ಸಂಗೀತ್, ನೃತ್ಯ ಎಲ್ಲವೂ ಇತ್ತು. ಈ ಕಾರ್ಯಕ್ರಮದಲ್ಲಿ ಆತ್ಮೀಯರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು. [ಹರ್ಭಜನ್ ಮದ್ವೆ ನಂತರ ಜಡೇಜ ಮದ್ವೆಯಲ್ಲೂ ವಿವಾದ!]

In pics: Ravindra Jadeja ties knot with Reeva Solanki

ಆದರೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಗುಜರಾತ್ ಲಯನ್ಸ್ ತಂಡದ ಎಲ್ಲಾ ಆಟಗಾರರು, ಟೀಂ ಇಂಡಿಯಾದ ಆಟಗಾರರು ಪಾಲ್ಗೊಂಡಿದ್ದರು.

ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಇನ್ನುಳಿದ ತಮ್ಮ ಗೆಳೆಯರಿಗೆ ಜಡೇಜ ಕಲವದ್ ರೋಡ್ ಹೋಟೆಲ್ ನಲ್ಲಿ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಫೆ.05 ರಂದು ಜಡೇಜ ಹಾಗೂ ಜುನಾಗಡ್ ಜಿಲ್ಲೆಯ ಇಂಜಿನಿಯರ್ ರಿವಾಬ ನಡುವೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು.

-
-
-
ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ

ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ

-
-
-
-
-
-
-

ವರುಣ್ ಅರೋನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಮೋಹಿತ್ ಶರ್ಮ, ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆ ಸಮಾರಂಭದ ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian all-rounder Ravindra Jadeja tied the nuptial knot with his fiancee Reeva Solanki in private ceremony in Rajkot hotel on Sunday(April 17).
Please Wait while comments are loading...