ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11: ಭಾರತ ತಂಡದ ಆಲ್ ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಬಹು ಕಾಲದ ಗೆಳತಿ ಸಫಾ ಬೇಗ್ ಫೆಬ್ರವರಿ ತಿಂಗಳಿನಲ್ಲಿ ಮದುವೆಯಾಗಿದ್ದು ಕ್ರೀಡಾಭಿಮಾನಿಗಳಿಗೆ ಗೊತ್ತೇ ಇರುತ್ತದೆ. ಮುಸ್ಲಿಂ ಬಾಂಧವರ ಪವಿತ್ರ ಸ್ಥಳ ಮೆಕ್ಕಾದಲ್ಲಿ ವಿವಾಹ ನಡೆದಿತ್ತು. ಈ ಶಾದಿಯ ಆರತಕ್ಷತೆ ಸಮಾರಂಭ ಇತ್ತೀಚೆಗೆ ವಡೋದರಾದಲ್ಲಿ ನಡೆಯಿತು.

ಸೌದಿ ಅರೇಬಿಯಾದ ಮೂಲದ ಸಫಾ ಬೇಗ್ (21) ಅವರನ್ನು ಎರಡು ವರ್ಷಗಳ ಹಿಂದೆ ಪಠಾಣ್ ಮೊದಲ ಬಾರಿಗೆ ದುಬೈನಲ್ಲಿ ಭೇಟಿ ಮಾಡಿದ್ದರು. ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದು, ಪ್ರೀತಿಸಲು ಆರಂಭಿಸಿದ್ದರು. ಮೂರು ತಿಂಗಳ ಹಿಂದೆ ಇವರಿಬ್ಬರ ವಿವಾಹ ನಿಶ್ಚಯವಾಗಿತ್ತು. ಫೆಬ್ರವರಿ 04, 2016ರಂದು ಮದುವೆಯಾಗಿದ್ದರು.[ವೇಗಿ ಮೋಹಿತ್ ಶರ್ಮ ಮದುವೆ ಸಂಭ್ರಮದ ಚಿತ್ರಗಳು]

ಭಾರತೀಯ ಕ್ರಿಕೆಟರ್ಸ್ ಗಳ ವಿವಾಹ ಪರ್ವ ಮುಂದುವರೆದಿದ್ದು, ವರೋನ್ ಅರೋನ್, ರಾಬಿನ್ ಉತ್ತಪ್ಪ, ಧವಳ್ ಕುಲಕರ್ಣಿ ನಂತರ ವೇಗಿ ಮೋಹಿತ್ ಶರ್ಮ ಅವರು ಇತ್ತೀಚೆಗೆ ತಮ್ಮ ಗೆಳತಿ ಶ್ವೇತಾ ಜೈಸ್ವಾಲ್ ರನ್ನು ಮದುವೆಯಾಗಿದ್ದಾರೆ.[ಚಿತ್ರಗಳು: ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ]

ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬೊಬ್ಬರಾಗಿ ಬ್ಯಾಚ್ಯೂಲರ್ ಲೈಫ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಬಾಕಿ ಇದೆ.

ಮದುವೆ ಬಂಧನದ ಬಗ್ಗೆ ಇರ್ಫಾನ್

ಮದುವೆ ಬಂಧನದ ಬಗ್ಗೆ ಇರ್ಫಾನ್

ಮದುವೆ ಬಂಧನದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಇರ್ಫಾನ್ ಪಠಾಣ್, ಪತಿ-ಪತ್ನಿ ನಡುವಿನ ಸಂಬಂಧ ತುಂಬಾ ಸುಂದರವಾದದ್ದು, ಹೊಸ ಇನ್ನಿಂಗ್ಸ್ ಶುರು ಮಾಡಲು ಆನಂದವಾಗುತ್ತಿದೆ. ದೇವರ ದೊಡ್ಡ ಅನುಗ್ರಹ ನನ್ನ ಹಾಗೂ ಸಫಾ ಮತ್ತು ನಮ್ಮ ಕುಟುಂಬ ಸಂತಸದಿಂದ ಇದ್ದೇವೆ ಎಂದಿದ್ದಾರೆ.

ಮದುವೆ ಮನೆಗೆ ಬರುತ್ತಿರುವ ಕಿರಣ್ ಮೋರೆ

ಮದುವೆ ಮನೆಗೆ ಬರುತ್ತಿರುವ ಕಿರಣ್ ಮೋರೆ

ಇರ್ಫಾನ್ ಪಠಾಣ್- ಸಫಾ ಶಾದಿಗೆ ಬಂದ ಮಾಜಿ ಕ್ರಿಕೆಟರ್ ಕಿರಣ್ ಮೋರೆ ಹಾಗೂ ಕುಟುಂಬ.

ಗೆಳೆಯರು, ಕ್ರಿಕೆಟರ್ಸ್ ಗೆ ಥ್ಯಾಂಕ್ಸ್ ಎಂದ ಇರ್ಫಾನ್

ಗೆಳೆಯರು, ಕ್ರಿಕೆಟರ್ಸ್ ಗೆ ಥ್ಯಾಂಕ್ಸ್ ಎಂದ ಇರ್ಫಾನ್

ಗೆಳೆಯರು, ಸಹ ಕ್ರಿಕೆಟರ್ಸ್ ಗೆ ಥ್ಯಾಂಕ್ಸ್ ಎಂದ ಇರ್ಫಾನ್ ಅವರು ಸೀನಿಯರ್ಸ್ ಅದರಲ್ಲೂ ವಿವಿಎಸ್ ಲಕ್ಷ್ಮಣ್ ಅವರ ನೆರವನ್ನು ನಾನು ಮರೆಯುವುದಿಲ್ಲ ಎಂದಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ದೇಶ ವಿದೇಶದಿಂದ ಶುಭ ಹಾರೈಕೆ ಕಳಿಸಿದ್ದಾರೆ. ನನ್ನ ಹೃದಯ ತುಂಬಿ ಬಂದಿದೆ ಎಂದಿದ್ದಾರೆ.

ಉನ್ಮುಕ್ತ್ ಚಂದ್ ವಿಶ್ ಮಾಡಿದ್ದು ಹೀಗೆ

ಯುವ ಕ್ರಿಕೆಟರ್ ಉನ್ಮುಕ್ತ್ ಚಂದ್ ವಿಶ್ ಮಾಡಿದ್ದು ಹೀಗೆ, ಇದಕ್ಕೆ ಉತ್ತರಿಸಿದ ಇರ್ಫಾನ್, ಚೋಟೆ ನಿನ್ನ ಸರದಿಯೂ ಬರುತ್ತದೆ ತಡಿ ಎಂದಿದ್ದಾರೆ.

ಆರತಕ್ಷತೆಗೆ ಬಂದಿದ್ದ ವಿನಯ್ ಕುಮಾರ್ ದಂಪತಿ

ಇರ್ಫಾನ್ ಪಠಾಣ್ ಮದುವೆ ಆರತಕ್ಷತೆಗೆ ಬಂದಿದ್ದ ಕರ್ನಾಟಕದ ರಣಜಿ ತಂಡ ನಾಯಕ ವಿನಯ್ ಕುಮಾರ್ ಹಾಗೂ ಅವರ ಪತ್ನಿ.

ಮಹಮ್ಮದ್ ಕೈಫ್ ಅವರಿಂದ ಶುಭ ಹಾರೈಕೆ

ಕ್ರಿಕೆಟರ್ ಮಹಮ್ಮದ್ ಕೈಫ್ ಅವರಿಂದ ಶುಭ ಹಾರೈಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All-rounder Irfan Pathan entered "the most beautiful phase" of his life after marrying Safa Baig in Saudi Arabia. The 31-year-old Irfan began a new innings in life on February 4 as he married Safa, a 21-year-old model based in Saudi Arabia.
Please Wait while comments are loading...