ಚಿತ್ರಗಳು : ಐಪಿಎಲ್9 ನೇ ಆವೃತ್ತಿಗೆ ಚಾಲನೆ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 09 : ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶನಿವಾರ ಮೊದಲ ಪಂದ್ಯ ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ಸೂಪರ್ ಜೆಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಶುಕ್ರವಾರ ಸಂಜೆ ನಡೆದ ಉದ್ಘಾಟನಾ ಕಾರ್ಯಕ್ರಮ ಹಲವು ವಿಶಿಷ್ಟತೆಗಳಿಗೆ ಸಾಕ್ಷಿಯಾಯಿತು. ವಿಶ್ವ ಟಿ20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೋ ಅವರು ಸಮಾರಂಭದಲ್ಲಿ ಚಾಂಪಿಯನ್ ಡ್ಯಾನ್ಸ್ ಮಾಡಿ ಗಮನ ಸೆಳೆದರು. [ಐಪಿಎಲ್ 2016 : ಉದ್ಘಾಟನೆಯ ಚಿತ್ರಗಳು]

ipl

ಉದ್ಘಾಟನಾ ಸಮಾರಂಭದಲ್ಲಿ ಕತ್ರೀನಾ ಕೈಫ್, ಜಾಕ್ವಲೀನ್ ಫರ್ನಾಂಡೀಸ್, ರಣವೀರ್ ಸಿಂಗ್ ಹೆಜ್ಜೆ ಹಾಕಿದರು. ಹನಿಸಿಂಗ್ ಅವರ ಸುಮಧುರ ಗೀತೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದವು. [ಐಪಿಎಲ್ 2016 ಸಂಪೂರ್ಣ ವೇಳಾಪಟ್ಟಿ]

-
-
-
-
-

ಈ ಬಾರಿಯ ತಂಡಗಳು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಿರಾಟ್ ಕೊಹ್ಲಿ), ಮುಂಬೈ ಇಂಡಿಯನ್ಸ್ (ರೋಹಿತ್ ಶರ್ಮ), ಕೋಲ್ಕತ್ತಾ ನೈಟ್ ರೈಡರ್ಸ್ (ಗೌತಮ್ ಗಂಭೀರ್), ಗುಜರಾತ್ ಲಯನ್ಸ್ (ಸುರೇಶ್ ರೈನಾ), ಪುಣೆ ಸೂಪರ್ ಜೆಂಟ್ಸ್ (ಮಹೇಂದ್ರ ಸಿಂಗ್ ಧೋನಿ), ಡೆಲ್ಲಿ ಡೇರ್ ಡೇವಿಲ್ಸ್ (ಜಹೀರ್ ಖಾನ್), ಕಿಂಗ್ಸ್ ಇಲೆವೆನ್ ಪಂಜಾಬ್ (ಡೇವಿಡ್ ಮಿಲ್ಲರ್), ಸನ್ ರೈಸರ್ಸ್ ಹೈದ್ರಾಬಾದ್ (ಡೇವಿಡ್ ವಾರ್ನರ್).

ಈವರೆಗೆ ಚಾಂಪಿಯನ್ ಆದ ತಂಡಗಳು

* 2008 - ರಾಜಸ್ಥಾನ ರಾಯಲ್ಸ್

* 2009 - ಡೆಕ್ಕನ್ ಚಾಜರ್ಸ್

* 2010 - ಚನೈ ಸೂಪರ್ ಕಿಂಗ್ಸ್

* 2011 - ಚನೈ ಸೂಪರ್ ಕಿಂಗ್ಸ್

* 2012 - ಕೋಲ್ಕತ್ತಾ ನೈಟ್ ರೈಡರ್ಸ್

* 2013 - ಮುಂಬೈ ಇಂಡಿಯನ್ಸ್

* 2014 - ಕೋಲ್ಕತ್ತಾ ನೈಟ್ ರೈಡರ್ಸ್

* 2015 - ಮುಂಬೈ ಇಂಡಿಯನ್ಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bollywood personalities and all-girl English pop band TBC, entertained audience on the occasion of opening ceremony of Season 9 of the Indian Premier League (IPL).
Please Wait while comments are loading...