ಚಿತ್ರಗಳಲ್ಲಿ: ಐತಿಹಾಸಿಕ 250ನೇ ಟೆಸ್ಟ್ ಪಂದ್ಯಕ್ಕೆ ತಾಲೀಮು

Posted By:
Subscribe to Oneindia Kannada

ಕೋಲ್ಕತ್ತಾ, ಸೆ. 29: ಇಲ್ಲಿನ ಈಡನ್ ಗಾರ್ಡನ್‌ ನಲ್ಲಿ ಭಾರತ ತನ್ನ ತವರು ನೆಲದಲ್ಲಿ 250ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ನ್ಯೂಜಿಲೆಂಡ್ ಹಾಗೂ ಭಾರತದ ಆಟಗಾರರು ಮಂಗಳವಾರದಿಂದಲೇ ಅಭ್ಯಾಸ ನಿರತರಾಗಿದ್ದಾರೆ.

ಪಂದ್ಯದ ಮೊದಲ ಎರಡು ದಿನ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ಸಿಗುತ್ತದೆ. ವೇಗಿಗಳೂ ಲಾಭ ಪಡೆಯ ಬಹುದು. ಮೂರನೇ ದಿನದಿಂದ ಸ್ಪಿನ್ನರ್‌ ಗಳಿಗೆ ಪ್ರಶಸ್ತವಾಗಲಿದೆ. ಟಾಸ್‌ ಕೂಡ ಪ್ರಮುಖ ಪಾತ್ರ ವಹಿಸಲಿದೆ' ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರಿಗೆ ಈಡನ್ ಗಾರ್ಡನ್ ತವರು ಪಿಚ್ ಆಗಿದ್ದು, ಟೀಂ ಇಂಡಿಯಾಕ್ಕೆ ಪುನರ್ ಪ್ರವೇಶ ಮಾಡಿರುವುದು ಮತ್ತೊಂದು ವಿಶೇಷ. ಉತ್ತಮ ಲಯದಲ್ಲಿದ್ದ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಅವರು ಗಾಯಗೊಂಡು ಅನಿವಾರ್ಯವಾಗಿ ತಂಡವನ್ನು ತೊರೆದಿದ್ದಾರೆ. ಇಶಾಂತ್ ಶರ್ಮ ಬದಲಿಗೆ ಜಯಂತ್ ಯಾದವ್ ತಂಡ ಸೇರಿಕೊಂಡಿದ್ದಾರೆ.

ಕಿವೀಸ್ ತಂಡದಲ್ಲಿ ಜೇಮ್ಸ್ ನೀಶಮ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ನಾಯಕ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಕೂಡಾ ಈಡನ್ ಗಾರ್ಡನ್ ನಲ್ಲಿ ಅಭ್ಯಾಸ ನಿರತರಾಗಿದ್ದಾರೆ. ಕೋಲ್ಕತ್ತಾದ ಬಂದಿಳಿದ ತಂಡಗಳ ಚಿತ್ರಗಳು ನಿಮಗಾಗಿ ಇಲ್ಲಿವೆ...

ಗೌತಮ್ ಗಂಭೀರ್ ಆಕರ್ಷಣೆ

ಗೌತಮ್ ಗಂಭೀರ್ ಆಕರ್ಷಣೆ

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಅವರಿಗೆ ಈಡನ್ ಗಾರ್ಡನ್ ತವರು ಪಿಚ್ ಆಗಿದ್ದು, ಟೀಂ ಇಂಡಿಯಾಕ್ಕೆ ಪುನರ್ ಪ್ರವೇಶ ಮಾಡಿರುವುದು ಮತ್ತೊಂದು ವಿಶೇಷ.

ಅಭ್ಯಾಸ ನಿರತ ನಾಯಕ ವಿರಾಟ್ ಕೊಹ್ಲಿ

ಅಭ್ಯಾಸ ನಿರತ ನಾಯಕ ವಿರಾಟ್ ಕೊಹ್ಲಿ

NSCBI ವಿಮಾನ ನಿಲ್ದಾಣದಿಂದ ನೇರವಾಗಿ ಈಡನ್ ಗಾರ್ಡನ್ ಹತ್ತಿರದ ಹೋಟೆಲ್ ಗೆ ಬಂದಿಳಿಸಿದ ನಾಯಕ ಕೊಹ್ಲಿ ಅವರು ಗುರುವಾರ ಬೆಳಗ್ಗೆ ಅಭ್ಯಾಸ ನಿರತರಾಗಿರುವ ದೃಶ್ಯ.

ಅಭ್ಯಾಸ ನಿರತ ಭಾರತ ತಂಡ

ಅಭ್ಯಾಸ ನಿರತ ಭಾರತ ತಂಡ

ಈಡನ್ ಗಾರ್ಡನ್ ಮೈದಾನದಲ್ಲಿ ಅಭ್ಯಾಸ ನಿರತ ಭಾರತ ತಂಡದ ಆಟಗಾರರು.

ಮೈದಾನಕ್ಕೆ ಬಂದ ಸೌರವ್ ಗಂಗೂಲಿ

ಮೈದಾನಕ್ಕೆ ಬಂದ ಸೌರವ್ ಗಂಗೂಲಿ

ಮಾಜಿ ನಾಯಕ, ಬಂಗಾಲ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮೈದಾನಕ್ಕೆ ಬಂದು ಕೋಚ್ ಅನಿಲ್ ಕುಂಬ್ಳೆ ಜತೆ ಸಮಾಲೋಚನೆ ನಡೆಸಿದರು.

ನ್ಯೂಜಿಲೆಂಡ್ ಆಟಗಾರರ ಶಾಪಿಂಗ್

ನ್ಯೂಜಿಲೆಂಡ್ ಆಟಗಾರರ ಶಾಪಿಂಗ್

ಕೋಲ್ಕತ್ತಾದ ಪ್ರಸಿದ್ಧ ಮಳಿಗೆಗಳಲ್ಲಿ ಬಟ್ಟೆ ಖರೀದಿಸಿದ ನ್ಯೂಜಿಲೆಂಡ್ ಆಟಗಾರರು ಹಾಗೂ ಕುಟುಂಬಸ್ಥರು.

ಅಭ್ಯಾಸದ ಜತೆ ಅಭಿಯಾನದಲ್ಲಿ ಕೊಹ್ಲಿ

ಅಭ್ಯಾಸದ ಜತೆ ಅಭಿಯಾನದಲ್ಲಿ ಕೊಹ್ಲಿ

ಮೈದಾನದಲ್ಲಿ ಅಭ್ಯಾಸದ ಜತೆ ಅಭಿಯಾನವೊಂದರಲ್ಲಿ ಪಾಲ್ಗೊಂಡಿದ್ದ ನಾಯಕ ಕೊಹ್ಲಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Test and New Zealand Test squads arrived here on Tuesday night (Sep 27) ahead of second Test starting on Friday (Sep 30).
Please Wait while comments are loading...