ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ, ಜೂನ್ 14: ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ದಂಪತಿ ಶಿಶುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಹೆರಿಗೆಗೆ ಸಿದ್ಧವಾಗಿರುವ ಗೀತಾ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ವಿಭಿನ್ನವಾಗಿ ಆಚರಿಸಲಾಯಿತು.

ಜುಲೈ ತಿಂಗಳಿನಲ್ಲಿ ಮಗುವಿನ ನಿರೀಕ್ಷೆ ಇಟ್ಟುಕೊಂಡಿರುವ ಗೀತಾ ಅವರು ತಮ್ಮ ಸೀಮಂತ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನವೆಂಬರ್ 2015ರಲ್ಲಿ ಹರ್ಭಜನ್ ಹಾಗೂ ಗೀತಾ ಅವರ ಮದುವೆ ವಿಜೃಂಭಣೆಯಿಂದ ನಡೆಸಲಾಗಿತ್ತು.
ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ಅವರ ಮದುವೆ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು.ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಗಣ್ಯಾತಿಗಣ್ಯರು ದಂಪತಿಗಳಿಗೆ ಶುಭ ಹಾರೈಸಿದ್ದರು.

In pics: Harbhajan Singh’s wife Geeta Basra’s baby shower

9 ವರ್ಷಕ್ಕೂ ಅಧಿಕ ಗೆಳೆತನವನ್ನು ಮದುವೆ ಬಂಧನದಲ್ಲಿ ಸುಖಾಂತ್ಯಗೊಳಿಸಿಕೊಂಡ ಹರ್ಭಜನ್ ಹಾಗೂ ಗೀತಾ ಅವರು ಅಕ್ಟೋಬರ್ 29ರಂದು ಜಲಂಧರ್ ಬಳಿಯ ಸ್ವಗ್ರಾಮದಲ್ಲಿ ಪಂಜಾಬಿ ಶೈಲಿಯಲ್ಲಿ ಮದುವೆಯಾಗಿದ್ದರು

-
-
-
-
-
-
-
-
-
ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ

ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ

-

ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ಯುವರಾಜ್ ಸಿಂಗ್, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಭಾವಿ ಪತ್ನಿ ರಿತಿಕಾ ವಧು-ವರರೊಂದಿಗೆ ಸೆಲ್ಪಿ ತೆಗೆಸಿಕೊಂಡರು. ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಚಿತ್ರರಂಗದಿಂದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ವಿವಿಐಪಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Harbhajan Singh and actress Geeta Basra are all set to welcome their first child in their life and the soon-to-be mother had a lavish baby shower. Geeta's delivery is due in July.
Please Wait while comments are loading...