ವೇಗಿ ಮೋಹಿತ್ ಶರ್ಮ ಮದುವೆ ಸಂಭ್ರಮದ ಚಿತ್ರಗಳು

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 10: ಭಾರತೀಯ ಕ್ರಿಕೆಟರ್ಸ್ ಗಳ ವಿವಾಹ ಪರ್ವ ಮುಂದುವರೆದಿದ್ದು, ವರೋನ್ ಅರೋನ್, ರಾಬಿನ್ ಉತ್ತಪ್ಪ, ಧವಳ್ ಕುಲಕರ್ಣಿ ನಂತರ ವೇಗಿ ಮೋಹಿತ್ ಶರ್ಮ ಅವರು ಇತ್ತೀಚೆಗೆ ತಮ್ಮ ಗೆಳತಿ ಶ್ವೇತಾ ಜೈಸ್ವಾಲ್ ರನ್ನು ಮದುವೆಯಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗಿ, ಸೌರಾಷ್ಟ್ರ ಪರ ಆಡುವ ಧವಳ್ ಕುಲಕರ್ಣಿ ಅವರು ಕೂಡಾ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ರಾಬಿನ್ ಉತ್ತಪ್ಪ ಅವರು ತಮ್ಮ ಗೆಳತಿ, ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ರನ್ನು ಬೆಂಗಳೂರಿನಲ್ಲಿ ವರಿಸಿದ್ದರು.[ಕ್ರಿಕೆಟರ್ಸ್ ಮದುವೆ ಪರ್ವ, ರಾಬಿನ್ ಉತ್ತಪ್ಪ ಜೋಡಿ ನೋಡಿ]

ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬೊಬ್ಬರಾಗಿ ಬ್ಯಾಚ್ಯೂಲರ್ ಲೈಫ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಬಾಕಿ ಇದೆ. ಮೋಹಿತ್ ಶರ್ಮ ಅವರು ದೆಹಲಿಯ ಲೀಲಾ ಪ್ಯಾಲೆಸ್​ನಲ್ಲಿ ದೀರ್ಘಕಾಲದ ಗೆಳತಿ ಶ್ವೇತಾ ಅವರನ್ನು ವರಿಸಿದ್ದಾರೆ. ಮೋಹಿತ್ ಶರ್ಮ ಫ್ಯಾನ್ಸ್ ಕ್ಲಬ್ ನಿಂದ ಮದುವೆ ಚಿತ್ರಗಳು: [ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!]

ಕುದುರೆ ಏರಿ ಬಂದ ಮಧುಮಗ ಮೋಹಿತ್

ಕುದುರೆ ಏರಿ ಬಂದ ಮಧುಮಗ ಮೋಹಿತ್

27 ವರ್ಷದ ಮೋಹಿತ್ ಕಳೆದ ಜನವರಿ ತಿಂಗಳಿನಲ್ಲಿ ಕೋಲ್ಕತಾ ಮೂಲದ ಹೋಟೆಲ್ ಮ್ಯಾನೇಜ್​ವೆುಂಟ್ ವಿದ್ಯಾರ್ಥಿನಿ ಶ್ವೇತಾ ಜೈಸ್ವಾಲ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮಾಜಿ, ಹಾಲಿ ಕ್ರಿಕೆಟರ್ಸ್ ಗಳಿಂದ ಶುಭ ಹಾರೈಕೆ

ಮಾಜಿ, ಹಾಲಿ ಕ್ರಿಕೆಟರ್ಸ್ ಗಳಿಂದ ಶುಭ ಹಾರೈಕೆ

ಮಾಜಿ ಕ್ರಿಕೆಟರ್ಸ್ ವೀರೇಂದ್ರ ಸೆಹ್ವಾಗ್, ದೆಹಲಿ ಆಟಗಾರ ಉನ್ಮುಕ್ತ್ ಚಂದ್, ಪರ್ವಿಂದರ್ ಅವಾನ, ಜೋಗಿಂದರ್ ಶರ್ಮ ಅವರು ಮದುವೆ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

ಟೀಂ ಇಂಡಿಯಾ ಪರ ಆಡಿರುವ ಮೋಹಿತ್

ಟೀಂ ಇಂಡಿಯಾ ಪರ ಆಡಿರುವ ಮೋಹಿತ್

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೋಹಿತ್ ಅವರು ಟೀಂ ಇಂಡಿಯಾದಿಂದ ಹೊರಗುಳಿಯಬೇಕಾಗಿದೆ. ಭಾರತ ಪರ 26 ಏಕದಿನ ಮತ್ತು 8 ಟಿ20 ಪಂದ್ಯ ಆಡಿದ್ದಾರೆ. 2014ರ ಟಿ20 ವಿಶ್ವಕಪ್ ಮತ್ತು 2015ರ ಏಕದಿನ ವಿಶ್ವಕಪ್​ನಲ್ಲಿ ಅವರು ಭಾರತ ತಂಡ ಪ್ರತಿನಿಧಿಸಿದ್ದರು.

ಕ್ರಿಕೆಟರ್ಸ್ ಗಳ ಮದುವೆ ಪರ್ವ ಮುಂದುವರೆದಿದೆ

ಕ್ರಿಕೆಟರ್ಸ್ ಗಳ ಮದುವೆ ಪರ್ವ ಮುಂದುವರೆದಿದೆ

ವರುಣ್ ಅರೋನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಯುವರಾಜ್ ಸಿಂಗ್ ಅವರು ನಿಶ್ಚಿತಾರ್ಥ ಬಗ್ಗೆ ಘೋಷಣೆ ಮಾಡಿದರು. ಈಗ ವರುಣ್ ಅರೋನ್ ನಂತರ ರಾಬಿನ್ ಉತ್ತಪ್ಪ, ಧವಳ್ ಕುಲಕರ್ಣಿ ಹಾಗೂ ಮೋಹಿತ್ ಶರ್ಮ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricketer Mohit Sharma married to his girlfriend Shweta Jaiswal In Delhi On Tuesday. Here are beautiful pictures of the wedding.
Please Wait while comments are loading...