ನೆಚ್ಚಿನ ಸಾಥಿಯ ಮುದ್ದಾದ ಮಗು ಜತೆ ರವೀಂದ್ರ ಜಡೇಜ

Posted By:
Subscribe to Oneindia Kannada

ರಾಜ್ ಕೋಟ್, ಮೇ 08: ಇತ್ತೀಚೆಗೆ ಮದುವೆಯಾಗಿರುವ ರವೀಂದ್ರ ಜಡೇಜ ಸರಿಯಾಗಿ ಮಧುಚಂದ್ರಕ್ಕೂ ಹೋಗದೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಬಂದಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಜಡೇಜ ದಂಪತಿ ಮುದ್ದಾದ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇಂಡಿಯನ್ ಪ್ರೀಮಿಯರ್ ಲೀಗ್ 9 ರಲ್ಲಿ ಹೊಚ್ಚ ಹೊಸ ತಂಡ ಗುಜರಾತ್ ಲಯನ್ಸ್ ಪರ ಎಡಗೈ ಆಲ್ ರೌಂಡರ್ ಜಡೇಜ ಅವರು ಆಡುತ್ತಿದ್ದಾರೆ. [ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ]

In pics: After marrying Reeva Solanki, Ravindra Jadeja welcomes new 'baby' to family!

ಆಟದ ನಡುವೆ ಬಿಡುವು ಸಿಕ್ಕರೆ ಪತ್ನಿ ರೀವಾ ಸೋಲಂಕಿ ಅವರ ಜತೆಗೆ ಕಾಲ ಕಳೆಯುತ್ತಿದ್ದಾರೆ. ಮಿಕ್ಕಂತೆ ಜಡೇಜ ಅವರು ಈಗ ತಮ್ಮ ತೋಟದ ಮನೆಯಲ್ಲಿ ಹೆಚ್ಚು ಕಾಲ ಇರುತ್ತಿದ್ದಾರೆ.

Let's welcome new baby at farmhouse 👌🏻👌🏻👌🏻janki with her daughter "vaari"🐎🐎#rajputboy

A photo posted by Ravindrasinh Jadeja (@jadduboy) on May 4, 2016 at 12:51am PDT

ಒಂದು ಕಾಲದಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗದೆ ಕಳಪೆ ಪ್ರದರ್ಶನದ ಕಾರಣಕ್ಕೆ ತಂಡದಿಂದ ಹೊರಹಾಕಲ್ಪಟ್ಟಾಗ ಜತೆಗಿದ್ದ ಸಾಥಿಯ ಜತೆ ಜಡೇಜ ಇರುತ್ತಿದ್ದಾರೆ.

Another click of "Vaari"🐎🐎👌🏻#Rajputboy

A photo posted by Ravindrasinh Jadeja (@jadduboy) on May 5, 2016 at 7:31am PDT


ಜಡೇಜ ಅವರ ಮನಸ್ಸು ನಿರಾಳಗೊಳಿಸಿ ಮತ್ತೆ ತಂಡಕ್ಕೆ ಸೇರುವಂತೆ ಮಾಡಿದ್ದ ಕುದುರೆ ಜಾನಕಿಗೆ ಈಗ ಮಗು ಹುಟ್ಟಿದೆ. ಪುಟಾಣಿ ಕುದುರೆ ಮರಿಗೆ 'ವಾರಿ' ಎಂದು ಹೆಸರಿಟ್ಟಿರುವ ಜಡೇಜ ಈ ವಿಷಯವನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.

Meet my new friend at farmhouse 🙈🙈🐍🐍#rajputboy

A video posted by Ravindrasinh Jadeja (@jadduboy) on May 7, 2016 at 6:33am PDT


ಜಾನಕಿ, ವಾರಿ ಜತೆಗಿನ ಫೋಟೊ ಅಲ್ಲದೆ, ತೋಟದ ಮನೆಗೆ ಬಂದ ಹಾವಿನ ವಿಡಿಯೋ ಕೂಡಾ ಹಾಕಿದ್ದಾರೆ.

Finally i got the chance to click pic with "Vaari"😍😍🐎#Rajputboy

A photo posted by Ravindrasinh Jadeja (@jadduboy) on May 5, 2016 at 8:17am PDT

ಕ್ರಿಕೆಟ್ ಬಿಟ್ಟರೆ ನೆಚ್ಚಿನ ಸಾಥಿ ಕುದುರೆ ಜತೆ ಹೆಚ್ಚು ಕಾಲ ಕಳೆಯುವ ಜಡೇಜ ಅವರ ಖುಷಿಯಲ್ಲಿ ಪತ್ನಿ ರೀವಾ ಸೋಲಂಕಿ ಕೂಡಾ ಭಾಗಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In pics: After marrying Reeva Solanki, Ravindra Jadeja welcomes new 'baby' to family!. Indian all-rounder Ravindra Jadeja tied the nuptial knot with his fiancee Reeva Solanki in private ceremony in Rajkot recently.
Please Wait while comments are loading...