ಚಿತ್ರಗಳಲ್ಲಿ: ಕ್ರಿಕೆಟಿಗ ಅಭಿಮನ್ಯು ಮಿಥುನ್ ವಿವಾಹ ಮಹೋತ್ಸವ

Posted By:
Subscribe to Oneindia Kannada

ಮಹಾಬಲಿಪುರಂ (ತಮಿಳುನಾಡು), ಆಗಸ್ಟ್ 29: ಕರ್ನಾಟಕದ ಕ್ರಿಕೆಟರ್ ಅಭಿಮನ್ಯು ಮಿಥುನ್ ಅವರು ಕಾಲಿವುಡ್ ನ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರ ಪುತ್ರಿ ರಯಾನೆ ಅವರನ್ನು ಭಾನುವಾರ ಮದುವೆಯಾಗಿದ್ದಾರೆ. ಆಗಸ್ಟ್ 26ರಿಂದ ಆರಂಭವಾದ ಮದುವೆ ಸಂಭ್ರಮ ಭಾನುವಾರ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಂಪನ್ನವಾಗಿದೆ.

26 ವರ್ಷದ ಮಿಥುನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡುವ ಮೂಲಕ ಟೀಂ ಇಂಡಿಯಾದ ಪ್ರತಿನಿಧಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದಾರೆ. ಈ ಬಾರಿ ರಣಜಿ ಸೀಸನ್ ಕರ್ನಾಟಕ ತಂದಕ್ಕೂ ಆಯ್ಕೆಯಾಗಿದ್ದಾರೆ.

ಐಪಿಎಲ್ ಮೂಲಕ ರಾಧಿಕಾ ಅವರ ಪುತ್ರಿ ಪರಿಚಯವಾಯಿತು.ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಕ್ರಿಕೆಟ್ ಪಂದ್ಯವೊಂದರ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗ ಮದುವೆ ಹಸೆಮಣೆ ತನಕ ತಲುಪಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಇಬ್ಬರ ಮದುವೆ ನಿಶ್ಚಿತಾರ್ಥವಾಗಿತ್ತು.[ರಾಯನೆ-ಅಭಿಮನ್ಯು ಮದುವೆ ಸಂಭ್ರಮದಲ್ಲಿ ಕನ್ನಡ ತಾರೆಯರ ಕಲರವ]

ಕರ್ನಾಟಕದ ರಣಜಿ ಆಟಗಾರ ಅಭಿಮನ್ಯು ಮಿಥುನ್ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಿ ಬೆಳೆದವರು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೂಡಾ ಆಡಿದ್ದಾರೆ.

ರಾಧಿಕಾ ಶರತ್ ಕುಮಾರ್ ಅವರ ಪೂರ್ವ ಪತಿ ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರಿಗೆ ನಟ ಶರತ್ ಕುಮಾರ್ ಅವರು ಮಲ ತಂದೆಯಾಗಬೇಕು.

 ಹಿಂದೂ ಸಂಪ್ರದಾಯದಂತೆ ಮದುವೆ

ಹಿಂದೂ ಸಂಪ್ರದಾಯದಂತೆ ಮದುವೆ

ಆಗಸ್ಟ್ 26ರಿಂದ ಮದುವೆ ಸಂಭ್ರಮ ಆರಂಭವಾಗಿತ್ತು. ಆಗಸ್ಟ್ 28ರಂದು ತಮಿಳು ಹಿಂದೂ ಸಂಪ್ರದಾಯದಂತೆ ರಯಾನೆ ಹಾಗೂ ಅಭಿಮನ್ಯು ಮಿಥುನ್ ಅವರ ಮದುವೆ ನಡೆದಿದೆ.

ಕ್ರಿಕೆಟ್, ಸಿನಿಮಾ, ರಾಜಕೀಯ ಸೇರಿ ಗಣ್ಯರ ಉಪಸ್ಥಿತಿ

ಕ್ರಿಕೆಟ್, ಸಿನಿಮಾ, ರಾಜಕೀಯ ಸೇರಿ ಗಣ್ಯರ ಉಪಸ್ಥಿತಿ

ಕ್ರಿಕೆಟ್, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯಂತೆ ವಿವಾಹ ನೆರವೇರಿತು.

ರಯಾನೆ ರಾಧಿಕಾರ ಪುತ್ರಿ

ರಯಾನೆ ರಾಧಿಕಾರ ಪುತ್ರಿ

ರಾಧಿಕಾ ಶರತ್ ಕುಮಾರ್ ಅವರ ಪೂರ್ವ ಪತಿ(2ನೇ) ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರಿಗೆ ನಟ ಶರತ್ ಕುಮಾರ್ ಅವರು ಮಲ ತಂದೆಯಾಗಬೇಕು.

ಐಪಿಎಲ್ ನಲ್ಲಿ ಇಬ್ಬರ ನಡುವೆ ಪ್ರೇಮ

ಐಪಿಎಲ್ ನಲ್ಲಿ ಇಬ್ಬರ ನಡುವೆ ಪ್ರೇಮ

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಕ್ರಿಕೆಟ್ ಪಂದ್ಯವೊಂದರ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗ ಮದುವೆ ಹಸೆಮಣೆ ತನಕ ತಲುಪಿತು

ಸಂಪ್ರದಾಯಬದ್ಧವಾಗಿ ನಡೆದ ಮದುವೆ

ಸಂಪ್ರದಾಯಬದ್ಧವಾಗಿ ನಡೆದ ಮದುವೆ

ಮಹಾಬಲಿಪುರಂನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ವರಪೂಜೆ, ಗೌರಿ ಪೂಜೆ, ಮಾಂಗಲ್ಯಧಾರಣೆ, ಹೋಮ ಇತ್ಯಾದಿಗಳಂತೆ ನೆರವೇರಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ಆಟಗಾರ

ಅಂತಾರಾಷ್ಟ್ರೀಯ ಮಟ್ಟದ ಆಟಗಾರ

26 ವರ್ಷದ ಮಿಥುನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡುವ ಮೂಲಕ ಟೀಂ ಇಂಡಿಯಾದ ಪ್ರತಿನಿಧಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದಾರೆ. ಈ ಬಾರಿ ರಣಜಿ ಸೀಸನ್ ಕರ್ನಾಟಕ ತಂಡಕ್ಕೂ ಆಯ್ಕೆಯಾಗಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಮದುವೆ ಸಂಭ್ರಮ

ಕಳೆದ ಎರಡು ವರ್ಷಗಳಲ್ಲಿ ಮದುವೆ ಸಂಭ್ರಮ

ಕಳೆದ ಎರಡು ವರ್ಷಗಳಲ್ಲಿ ಕ್ರಿಕೆಟರ್ ಗಳ ಮದುವೆ ಸಂಭ್ರಮ ಮುಂದುವರೆದಿದೆ. ಯುವರಾಜ್ ಸಿಂಗ್ ಅವರು ಕೂಡಾ ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricketer Abhimanyu Mithun married his girlfriend Rayane(Raadhika Sarathkumar's daughter) Rayane and Abhimanyu Mithun's marriage held on August 28 at Mahabalipuram, Chennai.
Please Wait while comments are loading...