ಟಿ20 ಕೇವಲ 2 ಓವರ್ ಪಂದ್ಯ ಅಂದ ಬಾಂಗ್ಲಾ ಆರಂಭಿಕ

Subscribe to Oneindia Kannada

ಮಿರ್ಪುರ, ಮಾರ್ಚ್. 05: "ಏಷ್ಯಾ ಕಪ್ ಎತ್ತಿ ಹಿಡಿಯಲು ನಮ್ಮ ತಂಡ ಸಮರ್ಥವಾಗಿದೆ. ನಿಜವಾದ ಉದ್ದೇಶದಲ್ಲಿ ಆಡಿದರೆ ಭಾರತವನ್ನು ಸೋಲಿಸುವುದು ದೊಡ್ಡ ಮಾತಲ್ಲ" ಎಂದು ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಹೇಳಿದ್ದಾರೆ.

ಇದೇ ವೇಳೆ 2007ರ ವಿಶ್ವಕಪ್ ನ ಭಾರತದ ವಿರುದ್ಧದ ಜಯವನ್ನು ಇಕ್ಬಾಲ್ ನೆನಪು ಮಾಡಿಕೊಂಡಿದ್ದಾರೆ. ಜಹೀರ್ ಖಾನ್ ವೇಗದ ಎದುರು ಸಿಕ್ಸರ್ ಬಾರಿಸಿದ್ದನ್ನು ಸ್ಮರಿಸಿದ್ದಾರೆ.[ಏಷ್ಯಾಕಪ್ ಫೈನಲ್ : ಇಂಡೋ-ಬಾಂಗ್ಲಾ ಕಾದಾಟದ ಮುನ್ನೋಟ]

If we play to our potential, we can beat India in Asia Cup final: Tamim Iqbal

ನಾವು ಆ ಪಂದ್ಯವನ್ನು ನಿಧಾನವಾಗಿ ಮರೆತಿರಬಹುದು. ಆದರೆ ಸಹ ಆಟಗಾರರಿಗೆ ಇನ್ನೊಮ್ಮೆ ನೆನಪು ಮಾಡಿಕೊಟ್ಟರೆ ಸಕಾರಾತ್ಮಕ ಆಟ ನಿರೀಕ್ಷೆ ಮಾಡಬಹುದು. ಇದನ್ನೇ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲೂ ಅನುಸರಿಸಲಿದ್ದೇವೆ ಎಂದು ಇಕ್ಬಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಸ್ ಪ್ರೀತ್ ಬುಮ್ರಾ ಅವರನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅವರ ಬೌಲಿಂಗ್ ವಿಧಾನವನ್ನು ಮತ್ತೆ ಮತ್ತೆ ಅಧ್ಯಯನ ಮಾಡಿದ್ದೇವೆ. ನಾವು ಅವರ ಉತ್ತಮ ಬಾಲ್ ಗೆ ಗೌರವ ನೀಡುವುದರೊಂದಿಗೆ ಕೆಟ್ಟ ಚೆಂಡನ್ನು ದಂಡಿಸಲಿದ್ದೇವೆ ಎಂದು ಇಕ್ಬಾಲ್ ಹೇಳಿದ್ದಾರೆ. ಟಿ20 ಎರಡು ಓವರ್ ನ ಪಂದ್ಯ. ಎರಡು ಓವರ್ ಪಂದ್ಯದ ದಿಕ್ಕನ್ನೇ ಬದಲಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior Bangladesh opener Tamim Iqbal says his side is good enough to upstage formidable India and lift the Asia Cup trophy when the two teams clash on Sunday. Tamim has fond memories of matches against India and no one can forget the six that he hit off Zaheer Khan during their upset victory during the 2007 50-over World Cup in Port of Spain.
Please Wait while comments are loading...