ವಿಶ್ವ ದಾಖಲೆ ಬರೆದ ವಿಶ್ವ ಟಿ20 ಕ್ರಿಕೆಟ್ ವೀಕ್ಷಣೆ!

Posted By:
Subscribe to Oneindia Kannada

ದುಬೈ, ಏಪ್ರಿಲ್ 18: ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ವಿಶ್ವ ಟ್ವೆಂಟಿ20 ಟೂರ್ನಿ ಹೊಸ ವಿಶ್ವ ದಾಖಲೆ ಬರೆದಿದೆ. ವೀಕ್ಷಕರ ಸಂಖ್ಯೆಯಲ್ಲಿ ಹೊಸ ಇತಿಹಾಸ ಬರೆದಿದೆ ಎಂದು ಐಸಿಸಿ ಸೋಮವಾರ (ಏಪ್ರಿಲ್ 18) ಪ್ರಕಟಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಶ್ವ ಟಿ20 ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದ ವಿಷಯ. ಪುರುಷರ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ಮಹಿಳೆಯರ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲುವು ದಾಖಲಿಸಿತು. [ಟಿ20 ಹಿಸ್ಟರಿ ರಿಪೀಟ್ಸ್ : ಗೇಲ್ ಆರಂಭ ಪಂದ್ಯದಲ್ಲೇ ಶತಕ]

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಏಪ್ರಿಲ್ 3ರಂದು ಎರಡು ಫೈನಲ್ ಪಂದ್ಯಗಳು ನಡೆಯಿತು. ಒಟ್ಟು 48 ಪಂದ್ಯಗಳನ್ನು ಏಳು ಮೈದಾನಗಳಲ್ಲಿ ಪ್ರತಿ ಮೈದಾನದಲ್ಲಿ 30 ಕೆಮರಾಗಳ ಮೂಲಕ ಕವರೇಜ್ ಮಾಡಲಾಗಿತ್ತು.

ICC World T20 2016 in India sets viewership records

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕೆ 17.3 ರೇಟಿಂಗ್ ಸಿಕ್ಕಿದ್ದು, ಸ್ಟಾರ್ ಸ್ಫೋರ್ಟ್ಸ್ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಇದು ಇಲ್ಲಿ ತನಕ ವಿಶ್ವ ಟ್ವೆಂಟಿ20 ಪಂದ್ಯಗಳಿಗೆ ಸಿಕ್ಕಿರುವ ಹೆಚ್ಚಿನ ರೇಟಿಂಗ್ ಆಗಿದೆ. 2007ರ ವಿಶ್ವ ಟ್ವೆಂಟಿ20 ಫೈನಲ್ ಪಂದ್ಯ 83 ಮಿಲಿಯನ್ ವೀಕ್ಷಣೆ ಹೊಂದಿತ್ತು. ಈ ಬಾರಿ ಶೇ 114 ರಷ್ಟು ಏರಿಕೆ ಕಂಡು 730 ಮಿಲಿಯನ್ ವೀಕ್ಷಣೆ ಭಾರತದಲ್ಲೇ ಬಂದಿದೆ.

ಪಾಕಿಸ್ತಾನದಲ್ಲಿ ಟೆನ್ ಸ್ಫೋರ್ಟ್ಸ್ ನಲ್ಲಿ ಪ್ರಸಾರವಾದ ಈ ಪಂದ್ಯ 14.5 ರೇಟಿಂಗ್ ಪಡೆದುಕೊಂಡಿದ್ದು, ಶೇ 100ರಷ್ಟು ಏರಿಕೆ ಕಂಡಿದೆ. ಟಿವಿ ವೀಕ್ಷಣೆ, ವೆಬ್ ಸೈಟ್, ಅಪ್ಲಿಕೇಷನ್, ಯೂಟ್ಯೂಬ್ ಚಾನೆಲ್, ಫೇಸ್ ಬುಕ್ ಪೇಜ್, ಐಸಿಸಿ ಟ್ವಿಟ್ಟರ್, ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್ ಎಲ್ಲವೂ ಸೇರಿ 320 ಮಿಲಿಯನ್ ವಿಡಿಯೋ ವೀಕ್ಷಣೆ ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The recently concluded ICC World Twenty20 set records galore across broadcast and digital platforms, it was confirmed today (April 18).
Please Wait while comments are loading...