ಥೈಲ್ಯಾಂಡ್ ವಿರುದ್ಧ ಭಾರತ ವನಿತೆಯರಿಗೆ 9 ವಿಕೆಟ್ ಗಳ ಜಯ

Written By: Ramesh
Subscribe to Oneindia Kannada

ಕೊಲಂಬೊ, ಫೆಬ್ರವರಿ. 08 : ಭಾರತ ತಂಡ ಐಸಿಸಿ ಮಹಿಳೆಯರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದೆ.

ಬುಧವಾರ ಕೊಲಂಬೊ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಥೈಲ್ಯಾಂಡ್ ಮಹಿಳೆಯರ ತಂಡ ಕೇವಲ 55 ರನ್ ಗೆ ಸರ್ವಪತನ ಕಂಡಿತು. ಸುಲಭವಾದ ಗುರಿ ಬೆನ್ನಟ್ಟಿದ ಭಾರತ ವನಿತೆಯರು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ICC Women's World Cup qualifier: Indian eves crush Thailand by 9 wickets

ಭಾರತ ಪರ ಆರಂಭಿಕರಾಗಿ ಕ್ರೀಸ್ ಬಂದ ಹರ್ಮನ್ ಪ್ರಿತ್ ಸಿಂಗ್ ಹಾಗೂ ತಿರುಷ್ ಕಾಮಿನಿ ಜೋಡಿ 32 ರನ್ ಗಳ ಕೊಡುಗೆ ತಂಡಕ್ಕೆ ನೀಡಿತು. 15 ರನ್ ಗಳಿಸಿ ಬ್ಯಾಟಿಂಗ್ ಆಡುತ್ತಿದ್ದ ಸಿಂಗ್ 15 ರನ್ ಗಳಿಸಿ ಕ್ಯಾಚ್ ನೀಡಿ ಔಟ್ ಆದರು.

ನಂತರ ಬ್ಯಾಟಿಂಗ್ ಬಂದ ವೇದಾ ಕೃಷ್ಣಮೂರ್ತಿ 17 ಮತ್ತು ತಿರುಷ್ ಕಾಮಿನಿ 24 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿರು.

ಮಾನಸಿ ಜೋಷಿ 4ರನ್ ನೀಡಿ 3 ವಿಕೆಟ್ ಪಡದುಕೊಂಡಿದ್ದರೆ, ರಾಜೇಶ್ವರಿ ಗಯಕವಾಡ್, ಪೂನಮ್ ಯಾದವ್, ದೀಪ್ತಿ ಶರ್ಮ ತಲಾ ಎರಡು ವಿಕೆಟ್ ಕಬಳಿಸಿದರು.

ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ವನಿತೆಯರು ಶ್ರೀಲಂಕಾ ವಿರುದ್ಧ 144 ರನ್ ಗಳಿ ಅಂತರದಿಂದ ಜಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian eves defeated Thailand by nine wickets in Group A of the International Cricket Council (ICC) Women's World Cup Qualifier at the Colombo Cricket Club Ground here on Wednesday (Feb 8).
Please Wait while comments are loading...