ವಿಶ್ವಕಪ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

Posted By:
Subscribe to Oneindia Kannada

ಲಂಡನ್, ಜುಲೈ 23: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡವು ವೀರೋಚಿತ ಸೋಲು ಕಂಡಿದೆ. 229ರನ್ ಚೇಸ್ ಮಾಡಿದ ಭಾರತದ ವನಿತೆಯರು 48.4 ಓವರ್ ಗಳಲ್ಲಿ 219ರನ್ ಸ್ಕೋರ್ ಮಾಡಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದರು.

ರನ್ ಚೇಸ್ : ಎಚ್ಚರಿಕೆಯಿಂದಲೇ ರನ್ ಚೇಸ್ ಆರಂಭಿಸಿದ ಟೀಂ ಇಂಡಿಯಾದ ಮಹಿಳೆಯರಿಗೆ ಆರಂಭಿಕ ಆಘಾತ ಕಾದಿತ್ತು. ಸ್ಮೃತಿ ಮಂದಾನ ಅವರು ಶೂನ್ಯಕ್ಕೆ ಔಟಾದರು. ತಂಡದ ಸ್ಕೋರ್ 43ರನ್ ಆಗಿದ್ದಾಗ ನಾಯಕ ಮಿಥಾಲಿ ರಾಜ್ ಅವರು ಆನಗತ್ಯವಾಗಿ ರನೌಟ್ ಆದರು.

* ಆರಂಭಿಕ ಆಟಗಾರ್ತಿ ಪೂನಮ್ ರೌತ್ 86ರನ್ ಗಳಿಸಿ ಅದ್ಭುತ ಅಟ ಪ್ರದರ್ಶಿಸಿದರು.
* ಹರ್ಮನ್ ಪ್ರೀತ್ ಕೌರ್ 51 ರನ್ ಗಳಿಸಿ ಪೂನಮ್ ಗೆ ಸಾಥ್ ನೀಡಿದರು.
* ನಂತರ ಬಂದ ವೇದಾ ಕೃಷ್ಣಮೂರ್ತಿ 35ರನ್ ಗಳಿಸಿ ರನ್ ಗತಿ ಹೆಚ್ಚಿಸಲು ಯತ್ನಿಸಿದರು.

* ಸುಷ್ಮಾ, ಜೂಲನ್ ಸೊನ್ನೆ ಸುತ್ತಿದರು. ನಂತರ ದೀಪ್ತಿ ಶರ್ಮ ಔಟಾಗುತ್ತಿದ್ದಂತೆ ಪಂದ್ಯ ಮುಕ್ತಾಯದತ್ತ ಸಾಗಿತು.

2005ರ ನಂತರ ಫೈನಲ್ ತಲುಪಿರುವ ಮಿಥಾಲಿ ರಾಜ್ ಪಡೆ ವಿರುದ್ಧ ಇಂಗ್ಲೆಂಡ್ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಹರ್ಮನ್ ಪ್ರೀತ್ ಕೌರ್ ಅವರು 115 ಎಸೆತಗಳಲ್ಲಿ 171ರನ್ (20 ಬೌಂಡರಿ, 7ಸಿಕ್ಸರ್) ಬಾರಿಸಿ, ಅಮೋಘ ಪ್ರದರ್ಶನ ನೀಡಿ ತಂಡವನ್ನು ಫೈನಲ್ ಗೇರಿಸಿದ್ದರು.

ICC Women's World Cup Final: England elect to bat against India, both teams unchanged

ಉತ್ತಮ ಆರಂಭ : ಇಂಗ್ಲೆಂಡ್ ತಂಡ 13 ಓವರ್ ಗಳಲ್ಲಿ 50 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.ವಿನ್ ಫೀಲ್ಡ್ 24, ಬಿಯೂಮಾಂಟ್ 23ರನ್ ಗಳಿಸಿ ಔಟಾದರೆ, ನಾಯಕಿ ನೈಟ್ 1 ರನ್ ಗಳಿಸಿ ನಿರಾಶೆ ಮೂಡಿಸಿದರು. ಟೇಲರ್ ಹಾಗೂ ನಟಾಲಿ ಉತ್ತಮ ಜತೆಯಾಟ ಪ್ರದರ್ಶಿಸಿದ್ದಾರೆ. 20 ಓವರ್ ಗಳಲ್ಲಿ 80/3 ಸ್ಕೋರ್ ಮಾಡಿತ್ತು. ಟೇಲರ್ 45 ಹಾಗೂ ನಟಾಲಿ 51 ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.

ಭಾರತದ ಪರ ಗೋಸ್ವಾಮಿ 23/3, ಪೂನಮ್ ಯಾದವ್ 26/2 ಹಾಗೂ ಗಾಯಕ್ವಾಡ್ 49/1 ಗಳಿಸಿದರು.

ಭಾರತ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ವೇದಾ ಕೃಷ್ಣ್ ಮೂರ್ತಿ, ಪೂನಮ್ ರಾವತ್‌, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಸುಶ್ಮಾ ವರ್ಮಾ (ವಿಕೆಟ್‌ ಕೀಪರ್),ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್‌.


ಇಂಗ್ಲೆಂಡ್ : ಲಾರೆನ್ ವಿನ್ ಫೀಲ್ಡ್, ಹೆಥರ್ ನೈಟ್ (ನಾಯಕಿ), ಟಾಮಿ ಬಿಯೂಮಾಂಟ್, ಸಾರಾ ಟೇಲರ್ (ವಿಕೆಟ್ ಕೀಪರ್) ನಟಾಲಿ ಸ್ಕಿವರ್, ಫ್ರಾಮ್ ವಿಲ್ಸನ್, ಕ್ಯಾಥರಿನ್ ಬ್ರಂಟ್, ಜೆನ್ನಿ ಗನ್, ಅನ್ಯಾ ಶ್ರುಬ್ಸೋಲೆ, ಲಾರಾ ಮಾರ್ಷ್, ಅಲೆಕ್ಸ್ ಹರ್ಟ್ಲೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್ ಅವರು ಟಾಸ್ ಗೆದ್ದ ತಕ್ಷಣವೇ ಬ್ಯಾಟಿಂಗ್ ಆಯ್ಕೆ ಘೋಷಿಸಿದರು. ಇಂಗ್ಲೆಂಡ್ ತಂಡವು 50 ಓವರ್ ಗಳಲ್ಲಿ 228/7 ಸ್ಕೋರ್ ಮಾಡಿದೆ.

Match was fixed in india vs Sri lanka 2011 World Cup final ? | Oneindia Kannada

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
England beat India by 9 runs to win ICC Women's World Cup 2017 here on Sunday (July 23).
Please Wait while comments are loading...