ಆಸ್ಟ್ರೇಲಿಯಾವನ್ನು ಬಗ್ಗುಬಡಿದು ವಿಶ್ವಕಪ್ ಫೈನಲ್ ಗೆ ಭಾರತ ಎಂಟ್ರಿ

Posted By:
Subscribe to Oneindia Kannada

ಡರ್ಬಿ, ಜುಲೈ 20: ಐಸಿಸಿ ಮಹಿಳಾ ವಿಶ್ವಕಪ್‌ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಭರ್ಜರಿ ಪ್ರದರ್ಶನ ನೀಡಿ, ಪಂದ್ಯವನ್ನು 36ರನ್ ಗಳಿಂದ ಗೆದ್ದು ಫೈನಲ್ ತಲುಪಿದೆ.

ಹರ್ಮನ್ ಪ್ರೀತ್ ಕೌರ್ ಅವರ ಅಜೇಯ 171 ರನ್ ನೆರವಿನಿಂದ ಭಾರತ 42 ಓವರ್ ಗಳಲ್ಲಿ 281/4 ಸ್ಕೋರ್ ಮಾಡಿತ್ತು. ರನ್ ಚೇಸ್ ಮಾಡಿದ ಆಸ್ಟ್ರೇಲಿಯಾ 40.1 ಓವರ್ ಗಳಲ್ಲಿ 245 ಮೊತ್ತಕ್ಕೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು.

ಆಸ್ಟ್ರೇಲಿಯಾದ ರನ್ ಚೇಸ್ : ಬೋಲ್ಟನ್, ಮೂನಿ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ವಿಕೆಟ್ ಗಳನ್ನು 21ರನ್ ಗಳಿಗೆ ಕಳೆದುಕೊಂಡಿತು. ನಂತರ ಬಂದ ಎಲ್ಸಿ ವಿಲಾನಿ 75ರನ್ ಹಾಗೂ ಎಲ್ಸಿ ಪೆರಿ 38ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.

ಆದರೆ, 24ನೇ ಓವರ್ ನಲ್ಲಿ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ವಿಲಾನಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. 29ಓವರ್ ಗಳಲ್ಲಿ 150/6 ಸ್ಕೋರ್ ಮಾಡಿದ ಆಸ್ಟ್ರೇಲಿಯಾಕ್ಕೆ 84 ಎಸೆತಗಳಲ್ಲಿ 132ರನ್ ಗಳಿಸುವ ಸವಾಲು ಎದುರಾಯಿತು. ನಂತರ ಬ್ಯಾಕ್ ವೆಲ್ ಉತ್ತಮವಾಗಿ ಆಡಿ 56 ಎಸೆತಗಳಲ್ಲಿ 90 ರನ್ ಗಳಿಸಿದರೂ ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ.

ಹರ್ಮನ್ ಪ್ರೀತ್ ಕೌರ್ ಅವರು 115 ಎಸೆತಗಳಲ್ಲಿ 171ರನ್ (20 ಬೌಂಡರಿ, 7ಸಿಕ್ಸರ್) ಬಾರಿಸಿ, ಅಮೋಘ ಪ್ರದರ್ಶನ ನೀಡಿದರು. ಮಿಥಾಲಿ ರಾಜ್ 36, ದೀಪ್ತಿ ಶರ್ಮ 25, ವೇದಾ ಕೃಷ್ಣಮೂರ್ತಿ ಅಜೇಯ 16ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಮಳೆಯಿಂದ ಪಂದ್ಯವನ್ನು 42 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ. ಆಸೀಸ್ ಕರಾರುವಾಕ್ ಬೌಲಿಂಗ್ ನಿಂದಾಗಿ ಟೀಂ ಇಂಡಿಯಾ ಮಹಿಳೆಯರು ನಿಧಾನಗತಿಯಲ್ಲಿ ರನ್ ಗಳಿಸುತ್ತಿದ್ದಾರೆ.

ICC Women's World Cup: 2nd semi-final: Unchanged India elect to bat against Australia
ಭಾರತ ತಂಡ 10 ಓವರ್‌ ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 36ರನ್‌ ಮಾತ್ರ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ(6) ಹಾಗೂ ಪೂನಮ್‌ ರಾವುತ್‌(14) ಬೇಗನೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆರು ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿ ಮಿಥಾಲಿರಾಜ್ ಪಡೆ ಕಣಕ್ಕಿಳಿದಿದೆ.

ಎರಡನೇ ಸೆಮಿಫೈನಲ್ ಗೆದ್ದ ತಂಡವು ಜುಲೈ 23ರಂದು ಲಾರ್ಡ್ಸ್‌ ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದೆ.

ಭಾರತ: ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಸ್ತ್‌‌‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಹರ್ಮನ್‌ ಪ್ರೀತ್ ಕೌರ್‌, ಸುಶ್ಮಾ ವರ್ಮಾ (ವಿಕೆಟ್‌ ಕೀಪರ್‌), ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ಶಿಖಾ ಪಾಂಡೆ, ಪೂನಮ್‌ ಯಾದವ್‌, ನುಶತ್‌ ಪರ್ವೀನ್‌, ಪೂನಮ್ ರಾವತ್‌, ದೀಪ್ತಿ ಶರ್ಮಾ.

Women's World Cup: 2nd semi-final: India Vs Australia | Oneindia Kannada

ಆಸ್ಟ್ರೇಲಿಯಾ: ಮೆಗ್‌ ಲ್ಯಾನಿಂಗ್‌ (ನಾಯಕಿ), ಸಾರಾ ಅಲೆ, ಕ್ರಿಸ್ಟನ್ ಬೀಮ್ಸ್‌ ಅಲೆಕ್ಸ್‌ ಬ್ಲ್ಯಾಕ್‌ ವೆಲ್‌, ನಿಕೋಲ್‌ ಬೋಲ್ಟನ್‌, ಆಶ್ಲಿ ಗಾರ್ಡನರ್‌, ರಚೆಲ್ ಹೇನ್ಸ್‌, ಅಲಿಸಾ ಹೀಲಿ (ವಿಕೆಟ್ ಕೀಪರ್‌), ಜೆಸ್ ಜೊನಾಸೆನ್‌, ಬೇಥ್‌ ಮೂನಿ, ಎಲಿಸ್ ಪೆರಿ, ಮೇಗನ್‌ ಶ್ರುಟ್‌, ಬೆಲಿಂದಾ ವಕಾರೆವಾ, ಎಲಿಸ್ ವಿಲಾನಿ, ಅಮಂಡಾ ಜೇಡ್‌ ವೆಲಿಂಗ್ಟನ್‌.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India beat Australia by 36 runs in the second semi-final of the ongoing Women's World Cup 2017 here on Thursday (July 20) to reach final clash against England on July 23.
Please Wait while comments are loading...