ಐಸಿಸಿ 2016 ಟೆಸ್ಟ್ ಟೀಂ ಪ್ರಕಟ, ಆರ್ ಅಶ್ವಿನ್ ಏಕೈಕ ಭಾರತೀಯ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಗುರುವಾರ (ಡಿಸೆಂಬರ್ 22) ಪ್ರಕಟಿಸಿದೆ. ಐಸಿಸಿ 2016ರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತೀಯ ಆಫ್ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಮಾತ್ರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾ ವಿರುದ್ಧ 0-4ರಲ್ಲಿ ಸರಣಿ ಸೋತ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟರ್ ಕುಕ್ ಅವರನ್ನು ಐಸಿಸಿ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಲಾಗಿದೆ. [ಐಸಿಸಿ ಪ್ರಶಸ್ತಿ ಘೋಷಣೆ: ಮಿಸ್ಬಾಗೆ ಮೊದಲ ಪ್ರಶಸ್ತಿ]

ICC Test Team of the Year 2016 announced; R Ashwin lone Indian in side

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಕುಕ್ ಜತೆಗೆ ಆರಂಭಿಕ ಆಟಗಾರರಾಗಿ ಆಯ್ಕೆಯಾಗಿದ್ದರೆ, ಇಂಗ್ಲೆಂಡಿನ ಜಾನಿ ಬೈರ್ಸ್ಟೋ ಅವರು ವಿಕೆಟ್ ಕೀಪರ್ ಆಗಿದ್ದಾರೆ. ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರನ್ನು 12ನೇ ಆಟಗಾರ ಎಂದು ಹೆಸರಿಸಲಾಗಿದೆ.

ಐಸಿಸಿ ವಾರ್ಷಿಕ ಟೆಸ್ಟ್ ತಂಡ 2016:
1. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
2. ಅಲೆಸ್ಟರ್ ಕುಕ್ (ಇಂಗ್ಲೆಂಡ್) (ನಾಯಕ)
3. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
4. ಜೋ ರೂಟ್ (ಇಂಗ್ಲೆಂಡ್)
5. ಆಡಂ ವೋಗ್ಸ್ (ಆಸ್ಟ್ರೇಲಿಯಾ)
6. ಜಾನಿ ಬೈರ್ಸ್ಟೋ (ಇಂಗ್ಲೆಂಡ್, ವಿಕೆಟ್ ಕೀಪರ್)
7. ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
8. ರವಿಚಂದ್ರನ್ ಆಶ್ವಿನ್ (ಭಾರತ)
9. ರಂಗಣಾ ಹೆರಾತ್ (ಶ್ರೀಲಂಕಾ)
10. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
11. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)
12. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)


(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Offspinner Ravichandran Ashwin was the lone Indian in the International Cricket Council's (ICC) Test Team of the Year 2016 which was announced today (December 22).
Please Wait while comments are loading...