ಚಿತ್ರಗಳಲ್ಲಿ: ಐಸಿಸಿ ಶ್ರೇಯಾಂಕ, ಟಾಪ್ 10ರಲ್ಲಿ ಕೊಹ್ಲಿಗೆ 4ನೇ ಸ್ಥಾನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 22 : ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಟಿ20 ಮತ್ತು ಏಕದಿನ ಕ್ರಿಕೆಟ್ ನಲ್ಲಿ ಅಗ್ರಸ್ಥಾದಲ್ಲಿರುವ ವಿರಾಟ್ ಟೆಸ್ಟ್ ಕ್ರಿಕೆಟ್ ನಲ್ಲೂ ಟಾಪ್ 10 ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.[ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಸಾಧನೆ!]

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 167 ಮತ್ತು 81 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರದರ್ಶನ ತೋರಿರುವ ದೆಹಲಿ ಬಾಯ್ ವಿರಾಟ್ ಕೊಹ್ಲಿ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಮಂಗಳವಾರ(ನವೆಂಬರ್ 22) ಪ್ರಕಟಿಸಲಾಗಿದ್ದು, 4ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಆಶೀಮ್ ಆಮ್ಲಾ ಅವರನ್ನು ಹಿಂದಿಕ್ಕಿ ಕೊಹ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಆಮ್ಲಾ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಹಾಗೂ ಟಿ20ಯಲ್ಲಿ ಅಗ್ರಸ್ಥಾನದಲ್ಲಿರುವ 28 ವರ್ಷದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಪ್ ಟೆನ್ 4ನೇ ಸ್ಥಾನದಲ್ಲಿದ್ದಾರೆ. ಮಂಗಳವಾರ ಐಸಿಸಿ ಪ್ರಕಟಿಸಿರುವ ಟಾಪ್ 10 ಬ್ಯಾಟ್ಸ್ ಮನ್ ಗಳಲ್ಲಿ ಯಾರ್ಯಾರು ಇದ್ದಾರೆಂದು ತಿಳಿಯಲು ಮುಂದೆ ಓದಿ.

#1 ಆಸ್ಟ್ರೆಲಿಯದ ಸ್ಟಿವನ್ ಸ್ಮಿತ್

#1 ಆಸ್ಟ್ರೆಲಿಯದ ಸ್ಟಿವನ್ ಸ್ಮಿತ್

ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಅವರು 897 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

#2 ಇಂಗ್ಲೆಂಡ್ ನ ಜೋ ರೂಟ್

#2 ಇಂಗ್ಲೆಂಡ್ ನ ಜೋ ರೂಟ್

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ ಅವರು 844 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

#3 ಕಿವೀಸ್ ನ ಕೇನ್ ವಿಲಿಯಮ್ಸನ್

#3 ಕಿವೀಸ್ ನ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅವರು 838 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

#4 ವಿರಾಟ್ ಕೊಹ್ಲಿ

#4 ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ಟೆಸ್ಸ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 822 ಅಂಕಗಳನ್ನು ಪಡೆದು 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

#5 ದ.ಆ ಆಶೀಮ್ ಆಮ್ಲಾ

#5 ದ.ಆ ಆಶೀಮ್ ಆಮ್ಲಾ

ದಕ್ಷಿಣ ಆಫ್ರಿಕಾದ ತಂಡದ ಆಶೀಮ್ ಆಮ್ಲಾ ಅವರು 809 ಅಂಕದೊಂದಿಗೆ 4ನೇ ಸ್ಥಾನದಿಂದ 5ಕ್ಕೆ ಕುಸಿದಿದ್ದಾರೆ. ಪಾಕ್ ನ ಯೂನೀಸ್ ಖಾನ್ 6ನೇ ಸ್ಥಾನ, ಎಬಿಡಿ ವಿಲಿಯರ್ಸ್, ಡೇವಿಡ್ ವಾರ್ನರ್, ಭಾರತದ ಚೇತೇಶ್ವರ ಪೂಜಾರ 9ನೇ ಸ್ಥಾನದಲ್ಲಿದ್ದಾರೆ, ಇನ್ನು 10ನೇ ಸ್ಥಾನದಲ್ಲಿ ಇಂಗ್ಲೆಂಡ್ ಕ್ಯಾಪ್ಟನ್ ಅಲೆಸ್ಟರ್ ಕುಕ್ ಇದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Test captain and star batsman Virat Kohli has achieved a career-best position in the latest International Cricket Council (ICC) Rankings for Test batsmen.
Please Wait while comments are loading...