ಐಸಿಸಿ ಟೆಸ್ಟ್ ಟಾಪ್ 5 ಬೌಲರ್ ಗಳಲ್ಲಿ ಆರ್ ಅಶ್ವಿನ್ ನಂ.1

Written By: Ramesh
Subscribe to Oneindia Kannada

ನವದೆಹಲಿ, ನವೆಂಬರ್. 22 : ಟೀಂ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಅವರು ಮಂಗಳವಾರ ಪ್ರಕಟಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಬೌಲರ್ ಗಳ ಹೊಸ ಪಟ್ಟಿಯಲ್ಲಿ ಅಗ್ರಸ್ಥಾನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನ ಪಾತ್ರವಹಿಸಿದರು. ಆ ಪಂದ್ಯದಲ್ಲಿ ಭಾರತ 246 ರನ್ ಗಳ ಬೃಹತ್ ಮೊತ್ತದಿಂದ ಗೆದ್ದು 5 -ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. [ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ]

ಸ್ಪಿನ್ ಮೋಡಿಗಾರ ಅಶ್ವಿನ್ ಪ್ರಸಕ್ತ ಐಸಿಸಿ ಶ್ರೇಯಾಂಪ ಪಟ್ಟಿಯಲ್ಲಿ 895 ಅಂಕಗಳೊಂದಿಗೆ ಟಾಪ್ ನಲ್ಲಿದ್ದಾರೆ. ಇನ್ನು ಶ್ರೀಲಂಕಾದ ಸ್ಪಿನ್ನರ್ ರಂಗನ ಹೆರಾತ್ 867 ಅಂಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. [ಐಸಿಸಿ ಶ್ರೇಯಾಂಕ ಪಟ್ಟಿಗೆ ರಹಾನೆ, ಅಶ್ವಿನ್ ನಂ.1 ಆಲ್ ರೌಂಡರ್]

30 ವರ್ಷ ವಯಸ್ಸಿನ ಅಶ್ವಿನ್ ಅವರು 39 ಟೆಸ್ಟ್ ಪಂದ್ಯಗಳಿಂದ ತ್ವರಿತ ಗತಿಯಲ್ಲಿ 220 ವಿಕೆಟ್ ಪಡೆದಿದ್ದಾರೆ. ಹಾಗೂ ಇನ್ನಿಂಗ್ಸ್ ಒಂದರಲ್ಲಿ ಅಶ್ವಿನ್ ಅವರು 22 ಬಾರಿ 5 ವಿಕೆಟ್ ಕಬಳಿಸಿದ ಸಾಧನೆಯೂ ಮಾಡಿದ್ದಾರೆ.

ಭಾರತದ ಮತ್ತೊಬ್ಬ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು 795 ಅಂಕಗಳೊಂದಿಗೆ ಟಾಪ್ 10 ಬೌಲರ್ ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಟಾಪ್ 5 ಬೌಲರ್ ಗಳ ಪಟ್ಟಿಯನ್ನು ನೋಡುವುದಾರೆ ಈ ಕೆಳಗಿನಂತಿದ್ದಾರೆ.

ನಂ.1 ಆರ್. ಅಶ್ವಿನ್

ನಂ.1 ಆರ್. ಅಶ್ವಿನ್

ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಅಶ್ವಿನ್ ಅವರು ಐಸಿಸಿ ಬೌಲರ್ ಅಂಕಪಟ್ಟಿಯಲ್ಲಿ 895 ರೇಟಿಂಗ್ಸ್ ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ.

ನಂ.2 ರಂಗನಾ ಹೆರಾತ್

ನಂ.2 ರಂಗನಾ ಹೆರಾತ್

ಶ್ರಿಲಂಕಾದ ಸ್ಪಿನ್ನರ್ ರಂಗನಾ ಹೆರಾತ್ ಅವರು 867 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ನಂ.3 ವೇಗಿ ಡೇಲ್ ಸ್ಟೇನ್

ನಂ.3 ವೇಗಿ ಡೇಲ್ ಸ್ಟೇನ್

ದಕ್ಷಿಣ ಆಫ್ರಿಕಾದ ವೇಗಿ ಲ್ ಸ್ಟೇನ್ 852 ಅಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ನಂ. 4 ಜೇಮ್ಸ್ ಅಂಡರ್ಸನ್

ನಂ. 4 ಜೇಮ್ಸ್ ಅಂಡರ್ಸನ್

ನ್ಯೂಜಿಲೆಂಡ್ ನ ಜೇಮ್ಸ್ ಅಂಡರ್ಸನ್ ಅವರು 850 ಪಾಯಿಂಟ್ಸ್ ಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ನಂ. 5 ಸ್ಟುವರ್ಟ್ ಬ್ರಾಡ್

ನಂ. 5 ಸ್ಟುವರ್ಟ್ ಬ್ರಾಡ್

ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ 820 ಅಂಕ ಪಡೆದುಕೊಂಡು 5ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's frontline bowler Ravichandran Ashwin has maintained his domination in latest ICC Test rankings as he still placed at the top of latest table.
Please Wait while comments are loading...