ಐಸಿಸಿ ಶ್ರೇಯಾಂಕ ಪಟ್ಟಿ: ಅಶ್ವಿನ್ ವಿಶ್ವ ನಂ.1 ಬೌಲರ್!

Written By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 01 : ಬುಧವಾರ(ನ.30) ಪ್ರಕಟಿತಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಟೆಸ್ಟ್ ಬೌಲರ್ ಗಳ ಹೊಸ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅಶ್ವಿನ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಬೌಲಿಂಗ್ ಮತ್ತು ಆಲ್ ರೌಂಡರ್ ನಲ್ಲಿ ಟಾಪ್ 1 ಸ್ಥಾನದಲ್ಲಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 90 ರನ್ ಗಳಿಸಿದ ರವೀಂದ್ರ ಜಡೇಜ ಆಲ್ ರೌಂಡರ್ ವಿಭಾಗದಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.

ಕೇವಲ 42 ಟೆಸ್ಟ್ ಪಂದ್ಯಗಳಲ್ಲಿ ಶರವೇಗದಲ್ಲಿ 235 ವಿಕೆಟ್ ಪಡೆದಿರುವ ಅಶ್ವಿನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಬೌಲರ್ ಶ್ರೇಯಾಂಕದಲ್ಲಿ ಅಗ್ರಗಣ್ಯ ಬೌಲರ್ ಎನಿಸಿಕೊಂಡರು. ಮೊದಲ ಬಾರಿಗೆ ಅಡಿಲೆಡ್ ನಲ್ಲಿ 6 ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯದ ವೇಗಿ ಜೋಶ್ ಹಜಲ್ ವುಡ್ ಅವರು 5ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇನ್ನು ಭಾರತದ ವೇಗಿ ಮಹಮದ್ ಶಮಿ 2 ಸ್ಥಾನ ಮೇಲೆ ಜಿಗಿದು 19ನೇ ಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಅವರು ಬರೋಬ್ಬರಿ 4 ಸ್ಥಾನ ಮೇಲಕ್ಕೇರಿ 21ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊಹಾಲಿ ಟೆಸ್ಟ್ ನಲ್ಲಿ 90 ರನ್ ಸಿಡಿಸಿದ್ದ ರವೀಂದ್ರ ಜಡೇಜ 2ಸ್ಥಾನ ಮೇಲೆಕ್ಕೇರಿ 4ನೇ ಸ್ಥಾನ ಪಡೆದಿದ್ದಾರೆ. ಅಶ್ವಿನ್ 493 ಅಂಕಗಳೊಂದಿಗೆ ಟಾಪ್ ನಂ.1 ಆಲ್ ರೌಂಡರ್ ಸ್ಥಾನದಲ್ಲಿದ್ದಾರೆ.

ಐಸಿಸಿ ಟೆಸ್ಟ್ ಟಾಪ್ 5 ಬೌಲರ್ ಗಳ ಪಟ್ಟಿ:

#1 ಆರ್ ಅಶ್ವಿನ್

#1 ಆರ್ ಅಶ್ವಿನ್

ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು 891 ಅಂಕಗಳೊಂದಿಗೆ ಐಸಿಸಿ ಟಾಪ್ ನಂ. 1 ಬೌಲರ್ ಸ್ಥಾನದಲ್ಲಿದ್ದಾರೆ.

 #2 ರಂಗನಾ ಹೆರಾತ್

#2 ರಂಗನಾ ಹೆರಾತ್

ಶ್ರಿಲಂಕಾದ ಸ್ಪಿನ್ನರ್ ರಂಗನಾ ಹೆರಾತ್ ಅವರು 867 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ

#3 ಡೇಲ್ ಸ್ಟೇನ್

#3 ಡೇಲ್ ಸ್ಟೇನ್

ದಕ್ಷಿಣ ಆಫ್ರಿಕಾದ ವೇಗಿ ಲ್ ಸ್ಟೇನ್ 844 ಅಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ

#4 ಜೇಮ್ಸ್ ಅಂಡರ್ಸನ್

#4 ಜೇಮ್ಸ್ ಅಂಡರ್ಸನ್

ನ್ಯೂಜಿಲೆಂಡ್ ನ ಜೇಮ್ಸ್ ಅಂಡರ್ಸನ್ ಅವರು 834 ಪಾಯಿಂಟ್ಸ್ ಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

# 5 ಜೋಶ್ ಹಜಲ್ ವುಡ್

# 5 ಜೋಶ್ ಹಜಲ್ ವುಡ್

ಆಸ್ಟ್ರೇಲಿಯದ ವೇಗಿ ಜೋಶ್ ಹಜಲ್ ವುಡ್ ಅವರು ಇದೇ ಮೊದಲ ಬಾರಿಗೆ 6 ವಿಕೆಟ್ ಪಡೆದು 815 ಅಂಕಗಳೊಂದಿಗೆ ಅಗ್ರ 5ನೇ ಬೌಲರ್ ಆಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's frontline spinner Ravichandran Ashwin has maintained his domination as number one bowler in current International Cricket Council (ICC) Rankings for Test cricket.
Please Wait while comments are loading...