ಐಸಿಸಿ ಬ್ಯಾಟ್ಸ್ ಮನ್ ಶ್ರೇಯಾಂಕ: ವಿರಾಟ್ ಕೊಹ್ಲಿ ಮತ್ತೊಂದು ಸ್ಥಾನ ಕುಸಿತ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 13 : ಮೊನ್ನೆ ಅಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟೆಸ್ಟ್ ಬ್ಯಾಟ್ಸ್ ಮನ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದ ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಸ್ಥಾನ ಕೆಳಕ್ಕೆ ಜಾರಿದ್ದಾರೆ.

ಸೋಮವಾರ ಪ್ರಕಟಗೊಂಡ ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಎರಡನೇ ಸ್ಥಾನಕ್ಕೇರಿದ್ದರಿಂದ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವ್ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.[ಐಸಿಸಿ ಟೆಸ್ಟ್ ಶ್ರೇಯಾಂಕ: 3ನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ]

ICC Test Rankings: Kane Williamson gains as Virat Kohli loses

ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರರಿಂದ ಕೊಹ್ಲಿ ಹಂತ ಹಂತವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಕುಸಿತು ಕಾಣುತ್ತಿದ್ದಾರೆ. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 0, 13,12,ಮತ್ತು 15 ರನ್ ಗಳಿಸಿದ್ದಾರೆ.

ಮತ್ತೊಬ್ಬ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರು ವಿಶ್ವ ಟಾಪ್ 10 ಟೆಸ್ಟ್ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಟಾಪ್ 10 ಟೆಸ್ಟ್ ಬ್ಯಾಟ್ಸ್ ಮನ್ ಗಳ ಪಟ್ಟಿ
1. ಸ್ಟಿವ್ ಸ್ಮಿತ್(ಆಸ್ಟ್ರೇಲಿಯಾ)-936
2. ಕೇನ್ ವಿಲಿಯಮ್ಸನ್(ನ್ಯೂಜಿಲೆಂಡ್)-869
3. ಜೋ ರೂಟ್(ಇಂಗ್ಲೆಂಡ್)-848
4. ವಿರಾಟ್ ಕೊಹ್ಲಿ(ಭಾರತ)-847
5.ಡೇವಿಡ್ ವಾರ್ನರ್(ಭಾರತ)-794
6. ಚೇತೇಶ್ವರ ಪೂಜಾರ(ಭಾರತ)-793
7. ಅಜಾರ್ ಅಲಿ(ಪಾಕಿಸ್ತಾನ)-779
8. ಯುನಿಸ್ ಖಾನ್(ಪಾಕಿಸ್ತಾನ)-772
9. ಹಾಶೀಂ ಆಮ್ಲಾ(ದಕ್ಷಿಣ ಆಫ್ರಿಕಾ)-757
10. ಎಬಿಡಿ ವಿಲಿಯರ್ಸ್(ದಕ್ಷಿಣ ಆಫ್ರಿಕಾ)-747

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's captain Virat Kohli has dropped one place in the latest ICC Test Rankings for batsmen. Australia's Steve Smith continues to top while Kane Williamson gained two spots.
Please Wait while comments are loading...