ನಂ.1 ಪಟ್ಟಕ್ಕೇರಿದ ಆಫ್ ಸ್ಪಿನ್ನರ್ ಆರ್ ಅಶ್ವಿನ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ವಿಕೆಟ್ ಕಬಳಿಸಿ, ವೈಯಕ್ತಿಕ ಸಾಧನೆಯನ್ನು ಸರಿಗಟ್ಟಿದ್ದರು. 13/140 ಕಬಳಿಸಿದ ಆಶ್ವಿನ್ ಅವರು ಈಗ ವಿಶ್ವದ ನಂ.1 ಆಲ್ ರೌಂಡರ್ ಹಾಗೂ ನಂ.1 ಬೌಲರ್ ಎನಿಸಿಕೊಂಡಿದ್ದಾರೆ. [ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ]

ICC Test rankings: India, Ravichandran Ashwin retain No.1 spots

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬುಧವಾರ(ಅಕ್ಟೋಬರ್ 12) ಪ್ರಕಟಿಸಲಾಗಿದ್ದು, ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೈನ್ ರನ್ನು ಹಿಂದಿಕ್ಕಿ ಅಶ್ವಿನ್ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. 2015ರಲ್ಲಿ ಕೂಡಾ ಅಶ್ವಿನ್ ಅವರು ವಿಶ್ವದ ಅಗ್ರಗಣ್ಯ ಬೌಲರ್ ಆಗಿ ವರ್ಷವನ್ನು ಮುಗಿಸಿದ್ದರು. ನಂತರ ಜುಲೈ ತಿಂಗಳಿನಲ್ಲಿ ನಂ.1 ಸ್ಥಾನಕ್ಕೇರಿದ್ದರು

30 ವರ್ಷ ವಯಸ್ಸಿನ ಅಶ್ವಿನ್ ಅವರು 900 ಅಂಕಗಳನ್ನು ಗಳಿಸಿ ಎರಡು ಸ್ಥಾನ ಮೇಲಕ್ಕೇರಿ ನಂ.1 ಪಟ್ಟಕ್ಕೇರಿದರು. ಅಶ್ವಿನ್ ಅವರು 39 ಟೆಸ್ಟ್ ಪಂದ್ಯಗಳಿಂದ ತ್ವರಿತ ಗತಿಯಲ್ಲಿ 220 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜ ಅವರು 805 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

ಆಲ್ ರೌಂಡರ್ ನಂ.1: ಅಶ್ವಿನ್ ಅವರು ಆಲ್ ರೌಂಡರ್ ವಿಭಾಗದಲ್ಲೂ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ. 451 ಅಂಕ ಪಡೆದುಕೊಂಡಿದ್ದರೆ, ಜಡೇಜ 292 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಬ್ಯಾಟ್ಸ್ ಮನ್ ಗಳ ಪೈಕಿ ಅಜಿಂಕ್ಯ ರಹಾನೆ 825ಅಂಕ ಪಡೆದು ಆರನೇ ಸ್ಥಾನ, ಚೇತೇಶ್ವರ್ ಪೂಜಾರ ಹಾಗೂ ನಾಯಕ ಕ್ರಮವಾಗಿ 15 ಹಾಗೂ 17ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India retained its numero uno spot in the International Cricket Council (ICC) Test team rankings while premier off-spinner Ravichandran Ashwin also continued to top the bowlers' list.
Please Wait while comments are loading...