ಅಶ್ವಿನ್ : ತಂಡದಿಂದಲೂ ಔಟ್, ಶ್ರೇಯಾಂಕ ಪಟ್ಟಿಯಲ್ಲೂ ಕುಸಿತ

Posted By:
Subscribe to Oneindia Kannada

ಬೆಂಗಳೂರು, ಜ.18: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಪ್ರಮುಖ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಮೂರನೇ ಏಕದಿನ ಪಂದ್ಯದಲ್ಲಿ ಆಡಿಲಿಲ್ಲವೇಕೆ? ಎಂಬ ಪ್ರಶ್ನೆಯ ನಡುವೆ ಅವರು ಟೆಸ್ಟ್ ಶ್ರೇಯಾಂಕ ಪಟ್ಟಿಯಿಂದ ಕೆಳಕ್ಕೆ ಕುಸಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದ ವೇಗಿ ಸ್ಟುವರ್ಟ್ ಬ್ರಾಡ್ ಅವರು ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬೌಲರ್ಸ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. [ಇಂಗ್ಲೆಂಡಿನ ಕೃಪೆ: ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1]

ICC Test Rankings: Ashwin loses No. 1 spot to Stuart Broad

ಆದರೆ, ಆಲ್ ರೌಂಡರ್ ​ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 2ನೇ ಸ್ಥಾನದಲ್ಲಿದ್ದಾರೆ. ಜೊಹಾನ್ಸ್ ​ಬರ್ಗ್ ಟೆಸ್ಟ್​ಗೂ ಮುನ್ನ 3ನೇ ಸ್ಥಾನದಲ್ಲಿದ್ದ ಬ್ರಾಡ್, 2ನೇ ಇನಿಂಗ್ಸ್​ನಲ್ಲಿ 17 ರನ್​ಗೆ 6 ವಿಕೆಟ್ ಉರುಳಿಸುವ ಮೂಲಕ ಅಶ್ವಿನ್​ರ ಅಗ್ರಸ್ಥಾನವನ್ನು ಕಸಿದುಕೊಂಡು ಕೆಳಕ್ಕೆ ದೂಡಿದ್ದಾರೆ. 880 ಅಂಕ ಹೊಂದಿರುವ ಬ್ರಾಡ್ ಅಶ್ವಿನ್​ಗಿಂತ 9 ಅಂಕದ ಮುನ್ನಡೆಯಲ್ಲಿದ್ದಾರೆ.

ಆಲ್ ರೌಂಡರ್ ಪಟ್ಟಿಯಲ್ಲಿ ರವೀಂದ್ರ ಜಡೇಜ ಅವರು 5ನೇ ಸ್ಥಾನದಲ್ಲಿದ್ದು, ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's off-spinner Ravichandran Ashwin has lost his number one position in the ICC Test Rankings for bowlers to paceman Stuart Broad, who bowled England to a series-clinching 2-0 win against South Africa on Saturday.
Please Wait while comments are loading...