ಆರ್ ಅಶ್ವಿನ್ ಹಿಂದಿಕ್ಕಿ ನಂ. 1 ಟೆಸ್ಟ್ ಬೌಲರ್ ಆದ ಜಡೇಜ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21: ಟೀಂ ಇಂಡಿಯಾದ ಸ್ಪಿನ್ ಮೋಡಿಗಾರರಾದ ರವೀಂದ್ರ ಜಡೇಜ ಹಾಗೂ ಆರ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸಿದ್ದಾರೆ. ಅಶ್ವಿನ್ ರನ್ನು ಕೆಳಕ್ಕೆ ದೂಡಿ ಎಡಗೈ ಸ್ಪಿನ್ನರ್ ಜಡೇಜ ಅವರು ನಂ.1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಡೇಜ ಅವರು 9 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಆದರೂ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ನಾಲ್ಕು ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಕಂಡಿದ್ದು, ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 25 ರಿಂದ ಧರ್ಮಶಾಲದಲ್ಲಿ ನಡೆಯಲಿದೆ. [ಗ್ಯಾಲರಿ: ಇಂಡೋ- ಆಸೀಸ್ ಟೆಸ್ಟ್ ಸರಣಿ ರೋಚಕ ಕ್ಷಣಗಳು]

ರಾಂಚಿ ಟೆಸ್ಟ್ ಪಂದ್ಯದಲ್ಲಿ 124 ರನ್ನಿತ್ತು 5 ವಿಕೆಟ್ ಹಾಗೂ 52 ರನ್ನಿತ್ತು 4 ವಿಕೆಟ್ ಕಿತ್ತ ಜಡೇಜ ಅವರು 7 ಅಂಕ ಹೆಚ್ಚಿಸಿಕೊಂಡು 899 ಅಂಕಗಳು ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ಅಶ್ವಿನ್ ಹಾಗೂ ಜಡೇಜ 892 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು. ಅಶ್ವಿನ್, ಬಿಶನ್ ಬೇಡಿ ಅವರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಭಾರತೀಯ ಬೌಲರ್ ಜಡೇಜ ತಲುಪಿದ್ದಾರೆ.

ICC Test Bowlers Rankings: 'Rockstar' Ravindra Jadeja takes sole top spot

ಐಸಿಸಿ ಟೆಸ್ಟ್ ಶ್ರೇಯಾಂಕ ಬೌಲರ್ ಪಟ್ಟಿ(ಮಾರ್ಚ್ 21ರಂತೆ)
1. ರವೀಂದ್ರ ಜಡೇಜ (ಭಾರತ) (899 ಅಂಕಗಳು)
2. ರವಿಚಂದ್ರನ್ ಅಶ್ವಿನ್ (ಭಾರತ) (862)

3. ರಂಗಣ ಹೆರತ್ (ಶ್ರೀಲಂಕಾ) (854)
4. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ) 842

5. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) (810)

6. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) 803
7. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ) 803
8. ಕಾಗಿಸೋ ರಬಾಡಾ (ದಕ್ಷಿಣ ಆಫ್ರಿಕಾ) 802
9. ವೆರ್ನಾನ್ ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ) 767
10. ನೀಲ್ ವಾರ್ಗ್ನರ್ (ನ್ಯೂಜಿಲೆಂಡ್ ) 762
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ravindra Jadeja has whizzed ahead of India spin-twin Ravichandran Ashwin to take the sole top spot in the ICC Player Rankings for Test Bowlers after grabbing 9 wickets in the drawn 3rd Test against Australia which puts the 4-match series interestingly poised at 1-1.
Please Wait while comments are loading...