ಬ್ಯಾಟ್ಸ್ ಮನ್ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಪೂಜಾರ

Posted By:
Subscribe to Oneindia Kannada

ದುಬೈ, ಆಗಸ್ಟ್ 10: ಹಾಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಸಿಡಿಸಿರುವ ಚೇತೇಶ್ವರ್ ಪೂಜಾರ ಅವರೀಗ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ ಮನ್ ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.

ಟೆಸ್ಟ್ ಕ್ರಿಕೆಟ್ ನಂ.1 ಆಲ್ ರೌಂಡರ್ ಪಟ್ಟಕ್ಕೇರಿದ ಜಡೇಜ

ಒಟ್ಟು 888 ರೇಟಿಂಗ್ ಅಂಕಗಳನ್ನು ಪಡೆದಿರುವ ಅವರು, ಈ ಸಾಧನೆ ಮಾಡಿದ್ದು ಈ ಹಿಂದೆ ಇದೇ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರು.

ICC test batting rankings: Pujara moves to 3rd and Rahane moves to 6th place

ಪ್ರಸ್ತುತ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪೂಜಾರ ಅವರು, 190 ರನ್ ದಾಖಲಿಸಿದ್ದರು. ಆನಂತರ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 133 ಗಳಿಸಿದ್ದರು.

ಅನಿಲ್ ಕುಂಬ್ಳೆಗೆ ಸಲ್ಲಬೇಕಿದ್ದ ಬಾಕಿ ಮೊತ್ತ ಪಾವತಿ

ಇನ್ನು, ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಅಜಿಂಕ್ಯ ರಹಾನೆ ಕೂಡ, ಹೊಸ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಈ ಮೊದಲು ಅವರು ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದರು.

ಹಾಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು, ಒಂದು ಶತಕ (132 ರನ್- 2ನೇ ಟೆಸ್ಟ್ ಪಂದ್ಯದಲ್ಲಿ) ಹಾಗೂ ಒಂದು ಅರ್ಧ ಶತಕ (57 ರನ್- ಮೊದಲ ಟೆಸ್ಟ್ ಪಂದ್ಯದಲ್ಲಿ) ಗಳಿಸಿದ್ದರು.

ರಾಖಿ ಕಟ್ಟಿಕೊಂಡ ಇರ್ಫಾನ್ ವಿರುದ್ಧ ಸಿಡಿದೆದ್ದ ಮುಸ್ಲಿಮರು

Priyanka Gandhi jibe On Narendra Modi | Oneindia Kannada

ಈ ಸಾಧನೆಯ ಹಾದಿಯಲ್ಲಿ ಅವರು ಬಲಿಷ್ಠ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಅಜರ್ ಅಲಿ, ಜಾನಿ ಬೇರ್ ಸ್ಟೋ ಅವರನ್ನು ಹಿಂದಿಕ್ಕಿರುವುದು ವಿಶೇಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Centuries in Colombo moved team india batsman Cheteshwar Pujara a place to 3rd and Ajinkya Rahane to 6th in the Test batting rankings, says ICC.
Please Wait while comments are loading...