ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲೂ ಕೆಳಗಿಳಿದ ಭಾರತ

Posted By:
Subscribe to Oneindia Kannada

ದುಬೈ, ಮೇ 04: ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ವಾರ್ಷಿಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಭಾರತ ಈಗ ಒಡಿಐ ಹಾಗೂ ಟಿ20ಐನಲ್ಲೂ ಕುಸಿತ ಕಂಡಿದೆ.

ಕಳೆದ ವರ್ಷ ಮೆಲ್ಬೋರ್ನ್ ನಲ್ಲಿ ಐದನೇ ವಿಶ್ವ ಕಪ್ ಎತ್ತಿದ ಆಸ್ಟ್ರೇಲಿಯಾ ತಂಡ 124 ಅಂಕಗಳೊಂದಿಗೆ ಏಕದಿನ ಕ್ರಿಕೆಟ್ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಒಂದು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ಗಳಿಸಿದೆ. ಟೀಂ ಇಂಡಿಯಾ ಮೊದಲ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಐರ್ಲೆಂಡ್ 12ನೇ ಸ್ಥಾನದಲ್ಲಿದೆ. [ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಭಾರತಕ್ಕೆ ಎಷ್ಟನೇ ಸ್ಥಾನ?]

ICC T20I Rankings: India lose top spot to New Zealand after annual update

ಇದೇ ರೀತಿ ಟಿ20 ಅಂತಾರಾಷ್ಟ್ರೀಯ ತಂಡಗಳ ಪಟ್ಟಿಯಲ್ಲಿ ವಿಶ್ವ ಟಿ20 ಸೆಮಿಫೈನಲಿಸ್ಟ್ ನ್ಯೂಜಿಲೆಂಡ್ ತಂಡ ಅಗ್ರಸ್ಥಾನಕ್ಕೇರಿದ್ದರೆ, ಒಂದು ಸ್ಥಾನ ಕೆಳಗಿಳಿದ ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವ ಟಿ20 ಕಪ್ ವಿಜೇತ ತಂಡ ವೆಸ್ಟ್ ಇಂಡೀಸ್ ಮೂರನೇ ಸ್ಥಾನದಲ್ಲಿದೆ. ಒಟ್ಟು 17 ತಂಡಗಳು ಪಟ್ಟಿಯಲ್ಲಿದ್ದು ಹಾಂಗ್ ಕಾಂಗ್ ಕೊನೆ ಸ್ಥಾನದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC World Cup 2015 finalists Australia and New Zealand have retained the top two positions on the ICC ODI Team Rankings following the annual update. Results from 2012-13 have been dropped, while results from 2014-15 have been reduced to a weighting of 50 per cent.
Please Wait while comments are loading...